ಭಾರತದ ಸೆಮಿಫೈನಲ್ ಕನಸು ಜೀವಂತಗೊಳಿಸಬಲ್ಲ ಆಟಗಾರ ಈತ: ಸುನಿಲ್ ಗವಾಸ್ಕರ್ ಭವಿಷ್ಯ

ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಸೆಮಿ ಫೈನಲ್‌ಗೇರಬೇಕಾದರೆ ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ ಮಣಿಸಬೇಕಾದ ಅನಿವಾರ್ಯತೆಯಿದೆ. ನಂತರವೂ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ಅಥವಾ ಅಫ್ಘಾನಿಸ್ತಾನ ತಮಡಗಳ ಪೈಕಿ ಯಾರ ನೆಟ್ ರನ್‌ರೇಟ್ ಉತ್ತಮವಾಗಿರುತ್ತದೋ ಆ ತಂಡ ಸೆಮಿಫಯನಲ್‌ಗೇ ಪ್ರವೇಶ ಪಡೆಯಲಿದೆ. ಹೀಗಾಗಿ ಈ ಕಸಬ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪ್ರಮುಖ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಅಫ್ಘಾನಿಸ್ತಾನ ತಂಡದ ಓರ್ವ ಆಟಗಾರ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ.

ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್

ಸುನಿಲ್ ಗವಾಸ್ಕರ್ ಹೀಗೆ ನಿರೀಕ್ಷೆ ಹಾಗೂ ಭರವಸೆ ಹೊಂದಿದ ಆಟಗಾರ ಬೇರೆ ಯಾರೂ ಅಲ್ಲ. ಅಫ್ಘಾನಿಸ್ತಾನ ತಂಡದ ಬೌಲಿಂಗ್ ಅಸ್ತ್ರ ಮುಜೀಬ್ ಉರ್ ರಹ್ಮಾನ್. ಗಾಯದ ಕಾರಣದಿಂದಾಗಿ ಈ ಹಿಂದಿನ ಭಾರತ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಮುಜೀಬ್ ಉರ್ ರೆಹ್ಮಾನ್ ಕಿವೀಸ್ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಹೀಗಾಗಿ ಈ ಪಂದ್ಯದಲ್ಲಿ ಮುಜೀಬ್ ಅಫ್ಘಾನಿಸ್ತಾನ ತಂಡದ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ.

ಮುಜೀಬ್ ಉರ್ ರಹ್ಮಾನ್ ಈ ಬಾರಿಯ ಟಿ20 ವಿಶ್ವಕಪ್‌ನ ಆರಂಬಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಅಭಿಯಾನ ಆರಂಬಿಸಿದ್ದರು. ಈ ಪಂದ್ಯವನ್ನು ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನ ತಂಡ 130 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿತ್ತು. ಅದಾದ ನಂತರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ಮುಜೀಬ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ಅದಾದ ನಂತರ ನಮೀಬಿಯಾ ಹಾಗೂ ಭಾರತ ವಿರುದ್ಧಧ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆದರೆ ನ್ಯೂಜಿಲೆಂಡ್ ವಿರುದ್ಧಧ ಪಂದ್ಯಕ್ಕೂ ಮುನ್ನ ಮುಜೀಬ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಸಜ್ಜಾದಂತೆ ಕಂಡುಬಂದಿದ್ದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

SMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕSMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕ

ಕಿವೀಸ್‌ಗೆ ಸಮಸ್ಯೆಯುಂಟು ಮಾಡಲಿದ್ದಾರೆ ಈ ಮೂವರು: 72ರ ಹರೆಯದ ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ನ್ಯೂಜಿಲೆಂಡ್ ವಿರುದ್ಧಧ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮದ್ ನಬಿ, ರಶೀದ್ ಖಾನ್ ಹಾಘೂ ಮುಜೀಬ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾದರೆ ಕಿವೀಸ್ ಪಡೆ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಲಿದೆ ಎಂದಿದ್ದಾರೆ.

ಆತನೇ ನಿರ್ಣಯಕ ಪಾತ್ರವಹಿಸಲಿದ್ದಾನೆ: "ನಾನು ಈ ಪಂದ್ಯಕ್ಕೆ ಮುಜೀಬ್ ಫಿಟ್ ಆಗಿರಲೆಂದು ಬಯಸುತ್ತೇನೆ. ಈ ಮೂಲಕ ಅಫ್ಘಾನಿಸ್ಥಾನದ ವಿರುದ್ಧ ಮತ್ತೊಂದು ಮಿಸ್ಟ್ರಿ ಬೌಲರ್‌ಅನ್ನು ಎದುರಿಸುವ ಅನುವಾರ್ಯತೆ ಕಿವೀಸ್ ಪಡೆಗೆ ಎದುರಾಗಲಿದೆ. ಮುಜೀಬ್ ರಶೀದ್ ಖಾನ್ ಹಾಗೂ ನಬಿ ಜೊತೆಗೆ ಕಣಕ್ಕಿಳಿದರೆ ಮ್ಯಾಜಿಕ್ ಆಡುವ ಸಾಧ್ಯತೆಯಿದೆ" ಎಂದಿದ್ದಾರೆ.

ಅಫ್ಘಾನಿಸ್ತಾನ ಸಂಪೂರ್ಣ ಸ್ಕ್ವಾಡ್: ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ಗುಲ್ಬದಿನ್ ನೈಬ್, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ರಶೀದ್ ಖಾನ್, ಶರಫುದ್ದೀನ್ ಅಶ್ರಫ್, ನವೀನ್-ಉಲ್-ಹಕ್, ಹಮೀದ್ ಉರ್ಮತ್ ಹಸನ್, ಶಾಹಿದಿ, ಫರೀದ್ ಅಹ್ಮದ್, ಉಸ್ಮಾನ್ ಘನಿ

ಟ್ರೋಫಿ ಗೆಲ್ಲದೆ ನಿರಾಸೆಯಿಂದ ವಿರಾಟ್ ಯುಗ ಮುಕ್ತಾಯ | Oneindia Kannada

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್, ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

For Quick Alerts
ALLOW NOTIFICATIONS
For Daily Alerts
Story first published: Sunday, November 7, 2021, 13:18 [IST]
Other articles published on Nov 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X