ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಬ್ಯಾಟ್ಸ್‌ಮನ್ ಸಾಹಸ, ಟಿ20ಐ ದಾಖಲೆ ಮುರಿದ ರೊಮೇನಿಯಾ!

Tamil Nadu-born software professional engineers Romania’s record-breaking T20I win

ಬುಚಾರೆಸ್ಟ್, ಆಗಸ್ಟ್ 30: ರೊಮೇನಿಯಾದ ಇಲ್ಫೊವ್ ಕೌಂಟಿಯಲ್ಲಿರುವ ಮೊರಾ ವ್ಲಾಸೀ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ (ಆಗಸ್ಟ್ 29) ನಡೆದ ರೊಮೇನಿಯಾ ಕಪ್‌ ಟೂರ್ನಿಯ ರೊಮೇನಿಯಾ vs ಟರ್ಕಿ ನಡುವಿನ ಟಿ20 ಪಂದ್ಯದಲ್ಲಿ ರೊಮೇನಿಯನ್ ತಂಡ ವಿಶ್ವದಾಖಲೆಯ ಗೆಲುವು ದಾಖಲಿಸಿದೆ.

ಮತ್ತೆ ಬ್ಯಾಟ್‌ ಹಿಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋಮತ್ತೆ ಬ್ಯಾಟ್‌ ಹಿಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ

ಈ ಪಂದ್ಯದಲ್ಲಿ ರೊಮೇನಿಯಾ ತಂಡ ಟರ್ಕಿ ವಿರುದ್ಧ 173 ರನ್ ಜಯ ಸಾಧಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು ದಾಖಲಿಸಿದ ಅತೀ ದೊಡ್ಡ ಅಂತರದ ರನ್ ಗೆಲುವು. ರೊಮೇನಿಯಾ ತಂಡ ಈ ವಿಶ್ವದಾಖಲೆ ನಿರ್ಮಿಸಲು ಕಾರಣ ಭಾರತ ಮೂಲದ ಬ್ಯಾಟ್ಸ್‌ಮನ್ ಶಿವಕುಮಾರ್ ಪೆರಿಯಾಳ್ವರ್.

ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ಮೂಲತಃ ತಮಿಳುನಾಡಿನವರಾದ ಶಿವಕುಮಾರ್ ಸಾಫ್ಟ್‌ವೇರ್ ಎಂಜಿನಿಯರ್ ವೃತ್ತಿಯಲ್ಲಿದ್ದಾರೆ. ಟರ್ಕಿ ವಿರುದ್ಧ ಅಜೇಯ 105 ರನ್ ಸಿಡಿಸಿದ್ದ ಪೆರಿಯಾಳ್ವರ್, ರೋಮೇನಿಯನ್ ತಂಡದ ದಾಖಲೆ ಗೆಲುವಿಗೆ ಕಾರಣರಾಗಿದ್ದರು.

12 ವರ್ಷಗಳ ದಾಖಲೆ ಬದಿಗೆ

12 ವರ್ಷಗಳ ದಾಖಲೆ ಬದಿಗೆ

ಟಿ20ಐನಲ್ಲಿ ಅತೀ ಹೆಚ್ಚಿನ ರನ್‌ನಿಂದ ಗೆಲುವು ಸಾಧಿಸಿದ ದಾಖಲೆ ಶ್ರೀಲಂಕಾ ತಂಡ ಹೊಂದಿತ್ತು. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡ, ಕೀನ್ಯಾ ವಿರುದ್ಧ 172 ರನ್‌ ಜಯ ಗಳಿಸಿ, ವಿಶ್ವ ದಾಖಲೆ ನಿರ್ಮಿಸಿತ್ತು (ಸಾಂದರ್ಭಿಕ ಚಿತ್ರ).

ಸ್ಫೋಟಕ ಬ್ಯಾಟಿಂಗ್

ಸ್ಫೋಟಕ ಬ್ಯಾಟಿಂಗ್

ಭಾರತ ಮೂಲದ ರೊಮೇನಿಯನ್ ಬ್ಯಾಟ್ಸ್‌ಮನ್ ಶಿವಕುಮಾರ್, ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿಸಿದ್ದರು. ಕೇವಲ 40 ಎಸೆತಗಳಿಗೆ ಬರೋಬ್ಬರಿ 105 ರನ್ ಚಚ್ಚಿದ್ದರು. ರೊಮೇನಿಯಾ ತಂಡ 20 ಓವರ್‌ಗೆ 6 ವಿಕೆಟ್ ಕಳೆದು 226 ರನ್ ಮಾಡಿತ್ತು.

ಕನಿಷ್ಠ ರನ್‌ಗೆ ಆಲ್ ಔಟ್

ಕನಿಷ್ಠ ರನ್‌ಗೆ ಆಲ್ ಔಟ್

ರೊಮೇನಿಯಾ ನೀಡಿದ್ದ 227 ರನ್ ಗುರಿ ಬೆನ್ನತ್ತಿದ್ದ ಟರ್ಕಿ 13 ಓವರ್‌ಗೆ ಸರ್ವ ಪತನ ಕಂಡು 53 ರನ್‌ಗೆ ಇನ್ನಿಂಗ್ಸ್‌ ಮುಗಿಸಿತು. ಟರ್ಕಿ ಇನ್ನಿಂಗ್ಸ್‌ನಲ್ಲಿ ರೊಮೇನಿಯಾ ಬೌಲರ್, ಕಾಸ್ಮಿನ್ ಜಾವೊಯಿ ಒಂದೇ ಓವರ್‌ನಲ್ಲಿ 4 ರನ್‌ ನೀಡಿ 3 ವಿಕೆಟ್ ಪಡೆದರು.

ಚಾಂಪಿಯನ್ ಆಗಿದ್ದೆವು

ಚಾಂಪಿಯನ್ ಆಗಿದ್ದೆವು

ಪಂದ್ಯದ ಬಳಿಕ ಮಾತನಾಡಿದ ಶಿವಕುಮಾರ್, 'ನಾನೊಬ್ಬ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಕೆಲಸದಲ್ಲಿರುವಾತ. ವಾರಾಂತ್ಯದಲ್ಲಿ ನಾನು ಕ್ಲುಜ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದೆ. ರಾಷ್ಟ್ರೀಯ 20 ಟೂರ್ನಿಯಲ್ಲಿ ನಾವು ಕಳೆದೆರಡು ವರ್ಷ ಚಾಂಪಿಯನ್ ಆಗಿದ್ದೆವು. ಹೀಗಾಗಿ ನಾನು ರಾಷ್ಟ್ರೀಯ ತಂಡಕ್ಕೆ ಆರಿಸಲ್ಪಟ್ಟೆ,' ಎಂದು ವಿವರಿಸಿದ್ದಾರೆ.

Story first published: Friday, August 30, 2019, 18:44 [IST]
Other articles published on Aug 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X