ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್

Tamilu Nadu Batter N Jagadeesan Created A New Record By Scoring 5th Consecutive Century In The Vijay Hazare Trophy

ತಮಿಳುನಾಡಿನ ಆರಂಭಿಕ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಸನ್ ಅವರು ಸೋಮವಾರ(ನವೆಂಬರ್ 21) ದಂದು ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಸತತ 5 ಶತಕಗಳನ್ನು ಬಾರಿಸಿದ ಮೊದಲ ಆಟಗಾರನಾಗಿದ್ದಾರೆ.

ತಮಿಳುನಾಡು ಬಿಗ್ ಹಿಟ್ಟರ್ ಎನ್ ಜಗದೀಸನ್ ಈ ಮೂಲಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸನ್ ಮತ್ತು ಕರ್ನಾಟಕದ ಓಪನಿಂಗ್ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಸಹ ಹಿಂದಿಕ್ಕಿದ್ದಾರೆ. ಇವರೆಲ್ಲರೂ ಏಕದಿನ ಆಟದ ಸ್ವರೂಪದಲ್ಲಿ ಸತತ 4 ಶತಕಗಳನ್ನು ಬಾರಿಸಿದ್ದಾರೆ.

IND vs NZ: ವಿರಾಟ್ ಕೊಹ್ಲಿಯ ಅಪರೂಪದ ಟಿ20 ದಾಖಲೆ ಮೀರಿಸಿದ ಸೂರ್ಯಕುಮಾರ್ ಯಾದವ್IND vs NZ: ವಿರಾಟ್ ಕೊಹ್ಲಿಯ ಅಪರೂಪದ ಟಿ20 ದಾಖಲೆ ಮೀರಿಸಿದ ಸೂರ್ಯಕುಮಾರ್ ಯಾದವ್

2022ರ ವಿಜಯ್ ಹಜಾರೆ ಟ್ರೋಫಿಯ ಎಲೈಟ್ ಗ್ರೂಪ್ ಸಿ ಸ್ಪರ್ಧೆಯ 6ನೇ ಸುತ್ತಿನಲ್ಲಿ ಅರುಣಾಚಲ ಪ್ರದೇಶ ವಿರುದ್ಧ 79 ಎಸೆತಗಳಲ್ಲಿ ಮೂರಂಕಿ ಗೆರೆ ದಾಟಿದಾಗ ಎನ್ ಜಗದೀಸನ್ ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದರು. ಸೋಮವಾರದಂದು ತಮಿಳುನಾಡಿನ ಸಹ ಆರಂಭಿಕ ಆಟಗಾರ ಬಿ ಸಾಯಿ ಸುದರ್ಶನ್ ಅವರೊಂದಿಗೆ 416 ರನ್‌ಗಳ ದಾಖಲೆಯ ಜೊತೆಯಾಟ ನೀಡಿದರು.

ಹಲವು ದಿಗ್ಗಜರ ದಾಖಲೆ ಅಳಿಸಿ ಹಾಕಿದ ಎನ್ ಜಗದೀಸನ್

ಹಲವು ದಿಗ್ಗಜರ ದಾಖಲೆ ಅಳಿಸಿ ಹಾಕಿದ ಎನ್ ಜಗದೀಸನ್

ವಿಜಯ್ ಹಜಾರೆ ಟ್ರೋಫಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದಾಗ ಎನ್ ಜಗದೀಸನ್ ಅವರು ವಿರಾಟ್ ಕೊಹ್ಲಿ, ಪೃಥ್ವಿ ಶಾ, ರುತುರಾಜ್ ಗಾಯಕ್ವಾಡ್ ಮತ್ತು ದೇವದತ್ ಪಡಿಕ್ಕಲ್ ಅವರ ದಾಖಲೆಯನ್ನು ಹಿಂದಿಕ್ಕಿದರು.

2008-09 ಋತುವಿನಲ್ಲಿ ವಿರಾಟ್ ಕೊಹ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದರು, ಆ ವರ್ಷ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅವರು ಏಳು ಪಂದ್ಯಗಳಿಂದ 89ರ ಸರಾಸರಿಯಲ್ಲಿ 534 ರನ್ ಗಳಿಸಿದ್ದರು.

ಇದೀಗ ಎನ್ ಜಗದೀಸನ್ ಈಗಾಗಲೇ ತಮ್ಮ 6ನೇ ಪಂದ್ಯದಲ್ಲಿ 600 ರನ್‌ಗಳ ಗಡಿ ದಾಟಿದ್ದಾರೆ. ನವೆಂಬರ್ 23ರಂದು ತಮಿಳುನಾಡು ತನ್ನ ಅಂತಿಮ ಗುಂಪು-ಹಂತದ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿರುವುದರಿಂದ ಜಗದೀಸನ್ ತನ್ನ ದಾಖಲೆಯ ಸಾಧನೆಯನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡಲಿದ್ದಾರೆ.

141 ಎಸೆತಗಳಲ್ಲಿ ಬರೋಬ್ಬರಿ 277 ರನ್ ಬಾರಿಸಿದ ಜಗದೀಸನ್

141 ಎಸೆತಗಳಲ್ಲಿ ಬರೋಬ್ಬರಿ 277 ರನ್ ಬಾರಿಸಿದ ಜಗದೀಸನ್

ಸೋಮವಾರದಂದು ತಮಿಳುನಾಡಿನ ಈ ಆರಂಭಿಕ ಬ್ಯಾಟರ್‌ನ ಇನಿಂಗ್ಸ್‌ನಲ್ಲಿ 15 ಸಿಕ್ಸರ್ ಮತ್ತು 25 ಬೌಂಡರಿಗಳ ಸಮೇತ ಕೇವಲ 141 ಎಸೆತಗಳಲ್ಲಿ ಬರೋಬ್ಬರಿ 277 ರನ್ ಬಾರಿಸಿದರು. ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಎನ್ ಜಗದೀಸನ್ 150 ರನ್‌ಗಳ ಗಡಿ ದಾಟಿದ್ದು ಇದು ಎರಡನೇ ಬಾರಿ.

ನಾರಾಯಣ್ ಜಗದೀಸನ್‌ಗೆ ಸಾಥ್ ನೀಡಿದ ತಮಿಳುನಾಡಿನ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೂಡ ಅರುಣಾಚಲ ಪ್ರದೇಶ ವಿರುದ್ಧ ಅಕ್ಷರಶಃ ಅಬ್ಬರಿಸಿದರು. 102 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಾಯದಿಂದ 154 ರನ್ ಗಳಿಸಿದರು. ಇನ್ನು ತಮಿಳುನಾಡು ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 506 ರನ್‌ಗಳ ಶಿಖರ ನಿರ್ಮಿಸಿದರು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದರಿಂದ ದಾಖಲಾದ ಅತ್ಯಧಿಕ ಮೊತ್ತವಾಗಿದೆ.

ವಿಜಯ್ ಹಜಾರೆ ಟ್ರೋಫಿ ಒಂದೇ ಆವೃತ್ತಿಯಲ್ಲಿ ದಾಖಲಾದ ಹೆಚ್ಚಿನ ಶತಕಗಳು

ವಿಜಯ್ ಹಜಾರೆ ಟ್ರೋಫಿ ಒಂದೇ ಆವೃತ್ತಿಯಲ್ಲಿ ದಾಖಲಾದ ಹೆಚ್ಚಿನ ಶತಕಗಳು

* ನಾರಾಯಣ್ ಜಗದೀಸನ್- ತಮಿಳುನಾಡು- 5

* ವಿರಾಟ್ ಕೊಹ್ಲಿ - ದೆಹಲಿ - 4

* ಪೃಥ್ವಿ ಶಾ - ಮುಂಬೈ- 4

* ದೇವದತ್ ಪಡಿಕ್ಕಲ್ - ಕರ್ನಾಟಕ - 4

* ಪೃಥ್ವಿ ಶಾ - ಮುಂಬೈ - 4

ಮೊದಲ ಪಂದ್ಯದಲ್ಲಿ 5 ರನ್‌ಗಳಿಗೆ ಔಟಾಗಿದ್ದ ಜಗದೀಸನ್

ಮೊದಲ ಪಂದ್ಯದಲ್ಲಿ 5 ರನ್‌ಗಳಿಗೆ ಔಟಾಗಿದ್ದ ಜಗದೀಸನ್

ಕಳೆದ ಆವೃತ್ತಿಯ (2021-22) ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಎನ್ ಜಗದೀಸನ್ ಆಡಿದ 8 ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 253 ರನ್ ಬಾರಿಸಿದ್ದರು.

26 ವರ್ಷ ವಯಸ್ಸಿನ ಜಗದದೀಸನ್ ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ನವೆಂಬರ್ 12ರಂದು ಆಲೂರಿನಲ್ಲಿ ನಡೆದ ಬಿಹಾರದ ವಿರುದ್ಧ 5 ರನ್‌ಗಳಿಗೆ ಔಟಾಗುವ ಮೂಲಕ ಜಗದೀಸನ್ ಈ ಋತುವನ್ನು ಕಳಪೆಯಾಗಿ ಪ್ರಾರಂಭಿಸಿದ್ದರು.

ಎನ್ ಜಗದೀಸನ್‌ರನ್ನು ಬಿಡುಗಡೆಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್

ಎನ್ ಜಗದೀಸನ್‌ರನ್ನು ಬಿಡುಗಡೆಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್

ನಂತರ ಆಂಧ್ರಪ್ರದೇಶ ವಿರುದ್ಧ ಅಜೇಯ 114 ರನ್‌ಗಳೊಂದಿಗೆ ಫಾರ್ಮ್‌ಗೆ ಮರಳಿದರು. ನಂತರ ಜಗದೀಸನ್ ಅವರು ಸತತವಾಗಿ ಛತ್ತೀಸ್‌ಗಢ ವಿರುದ್ಧ 107, ಗೋವಾ ವಿರುದ್ಧ 168 ಮತ್ತು ಹರಿಯಾಣ ವಿರುದ್ಧ 128 ರನ್ ಗಳಿಸಿದರು.

ಬರುವವ ಡಿಸೆಂಬರ್‌ನಲ್ಲಿ ಐಪಿಎಲ್ 2023ಗಾಗಿ ನಡೆಯುವ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಬಿಡುಗಡೆ ಮಾಡಿದ ಕೆಲವೇ ಆಟಗಾರರಲ್ಲಿ ಎನ್ ಜಗದೀಸನ್ ಒಬ್ಬರಾಗಿದ್ದಾರೆ. ಇದೀಗ ಅವರ ಫಾರ್ಮ್‌ ನೋಡಿ ಹಲವು ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

Story first published: Monday, November 21, 2022, 14:20 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X