ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ

Tanmay Manjunath From shivamogga District Score 407 Runs In 165 Ball

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 16 ವರ್ಷದ ಕ್ರಿಕೆಟಿಗ ತನ್ಮಯ್ ಮಂಜುನಾಥ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. 165 ಎಸೆತಗಳಲ್ಲಿ 24 ಸಿಕ್ಸರ್ ಸಹಿತ 407 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಶಿವಮೊಗ್ಗದ ಸಾಗರದಿಂದ ಬಂದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ 407 ರನ್ ಗಳಿಸಿದರು. ಇದಕ್ಕಾಗಿ ಕೇವಲ 165 ಎಸೆತಗಳನ್ನು ತೆಗೆದುಕೊಂಡರು. ತನ್ಮಯ್ ಮಂಜುನಾಥ್ ಸಾಗರ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಾರೆ. ಶಿವಮೊಗ್ಗದಲ್ಲಿ 50 ಓವರ್‌ಗಳ ಅಂತರ ಜಿಲ್ಲಾ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭದ್ರಾವತಿ ಎನ್‌ಟಿಸಿಸಿ ತಂಡದ ವಿರುದ್ಧ ತನ್ಮಯ್ ಐತಿಹಾಸಿ ಇನ್ನಿಂಗ್ಸ್ ಆಡಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಡಿಯಲ್ಲಿ ಸಾಗರ್ ಕ್ರಿಕೆಟ್ ಕ್ಲಬ್ ಮತ್ತು ಭದ್ರಾವತಿ ನಡುವಿನ ಈ ಪಂದ್ಯದಲ್ಲಿ ತನ್ಮಯ್ ಮಂಜುನಾಥ್ ಸ್ಫೋಟಕ ಆಟದ ನೆರವಿನಿಂದ ಸಾಗರ ಕ್ರಿಕೆಟ್ ಕ್ಲಬ್ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 583 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭದ್ರಾವತಿ ಎನ್‌ಟಿಸಿಸಿ ತಂಡವನ್ನು ಕೇವಲ 73 ರನ್ ಗಳಿಸುವಷ್ಟರಲ್ಲಿ ಆಲ್‌ ಔಟ್ ಮಾಡುವ ಮೂಲಕ ಸಾಗರ ಕ್ರಿಕೆಟ್ ಕ್ಲಬ್ 510 ರನ್‌ಗಳ ಬೃಹತ್ ಜಯವನ್ನು ಸಾಧಿಸಿತು.

ಐಪಿಎಲ್‌ನಲ್ಲಿ ಆಡ್ತೀರಾ ಎನ್ನುವ ಪತ್ರಕರ್ತನ ಪ್ರಶ್ನೆಗೆ ಬಾಬರ್ ಅಜಮ್‌ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?ಐಪಿಎಲ್‌ನಲ್ಲಿ ಆಡ್ತೀರಾ ಎನ್ನುವ ಪತ್ರಕರ್ತನ ಪ್ರಶ್ನೆಗೆ ಬಾಬರ್ ಅಜಮ್‌ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ತನ್ಮಯ್ ಮಂಜುನಾಥ ಸಾಗರದಲ್ಲಿರುವ ನಾಗೇಂದ್ರ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ನಾಗೇಂದ್ರ ಪಂಡಿತ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಮಂಜುನಾಥ್ ಅಬ್ಬರದ ಇನ್ನಿಂಗ್ಸ್ ಬಗ್ಗೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಈತನಿಗೆ ಸರಿಯಾದ ತರಬೇತಿ ಮತ್ತು ಅವಕಾಶ ನೀಡಿದರೆ ಮುಂದೊಂದು ದಿನ ಭಾರತ ತಂಡಕ್ಕಾಗಿ ಆಡಬಹುದು ಎನ್ನುವ ವಿಶ್ವಾಸ ವ್ಯಕ್ತವಾಗುತ್ತಿದೆ.

Tanmay Manjunath From shivamogga District Score 407 Runs In 165 Ball

ರೋಹಿತ್ ಶರ್ಮಾ ಹೆಸರಿನಲ್ಲಿದೆ ದಾಖಲೆ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿರುವ ದಾಖಲೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 173 ಎಸೆತಗಳಲ್ಲಿ 264 ರನ್ ಗಳಿಸಿದ್ದರು. 8 ವರ್ಷಗಳ ಹಿಂದೆ ಹಿಟ್‌ ಮ್ಯಾನ್ ಈ ದೊಡ್ಡ ದಾಖಲೆ ನಿರ್ಮಿಸಿದ್ದರು.

ಅವರ ಇನ್ನಿಂಗ್ಸ್‌ನಲ್ಲಿ 33 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್‌ಗಳು ಬಂದಿದ್ದವು. ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನು ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. 2010ರಲ್ಲಿ ಸಚಿನ್ ತೆಂಡೂಲ್ಕರ್ ಭಾರತದ ಪರವಾಗಿ ಮೊದಲ ದ್ವಿಶತಕ ಗಳಿಸಿದ ಸಾಧನೆ ಮಾಡಿದರು. ಇದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಮೊದಲನೇ ದ್ವಿಶತಕ.

Story first published: Monday, November 14, 2022, 11:23 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X