ಆರ್ ಅಶ್ವಿನ್ ಮತ್ತು ಪ್ರೀತಿ ನಾರಾಯಣನ್ ಪ್ರೇಮಕತೆ: ಬಾಲ್ಯದ ಗೆಳತನದಿಂದ ಜೀವನ ಸಂಗಾತಿವರೆಗೆ..

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್ ತಂಡದ ಅವಿಭಾಜ್ಯ ಅಂಗ. ಸ್ಪಿನ್ನರ್ ಆಗಿ ಸಾಕಷ್ಟು ದಾಖಲೆ ಬರೆದಿರುವ ಆರ್ ಅಶ್ವಿನ್ ಸಾಕಷ್ಟು ವಿಕೆಟ್ ಸಂಪಾದಿಸಿ ಅನೇಕ ಬಾರಿ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಮೈದಾನದಲ್ಲಿ ತಮ್ಮ ಚಾಣಾಕ್ಷ ಆಟದ ಮೂಲಕ ಎದುರಾಳಿಯ ವಿಕೆಟ್ ಪಡೆಯುವ ಈ ಚಾಣಾಕ್ಷ ಆಟಗಾರ ಮೈದಾನದಾಚೆಗೂ ಪ್ರೀತಿಯಲ್ಲಿ ಗೆಲುವು ಸಾಧಿಸಿ ಸೈ ಎನಿಸಿಕೊಂಡಿದ್ದಾರೆ.

ಮೈದಾನದಲ್ಲಿ ಆರ್ ಅಶ್ವಿನ್ ಅವರ ಕ್ರಿಕೆಟ್ ಕೌಶಲ್ಯವನ್ನು ಕ್ರಿಕೆಟ್ ಅಭಿಮಾನಿಗಳೆಲ್ಲರೂ ಬಲ್ಲರು. ಆದರೆ ರವಿಚಂದ್ರನ್ ಅಶ್ವಿನ್ ಅವರ ಪ್ರೇಮಕತೆ ಬಹುತೇಕರಿಗೆ ತಿಳಿದಿರುವ ಸಾಧ್ಯತೆ ಬಹಳ ಕಡಿಮೆಯಿದೆ. ಕಾಲೇಜಿನಲ್ಲಿ ಆಪ್ತ ಗೆಳತಿಯಾಗಿದ್ದ ಪ್ರೀತಿ ನಾರಾಯಣನ್ ಬಳಿಕ ಅಶ್ವಿನ್ ಜೀವನದ ಸಂಗಾತಿಯಾಗಿದ್ದಾರೆ. ಈ ಇಬ್ಬರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯಿಲ್ಲ.

CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಅಶ್ವಿನ್ ಕ್ರಿಕೆಟರ್ ಆಗಲು ಅಪ್ಪನೇ ಸ್ಪೂರ್ತಿ

ಅಶ್ವಿನ್ ಕ್ರಿಕೆಟರ್ ಆಗಲು ಅಪ್ಪನೇ ಸ್ಪೂರ್ತಿ

ಆರ್ ಅಶ್ವಿನ್ 1986 ಸೆಪ್ಟೆಂಬರ್ 17ರಂದು ಚೆನ್ನೈನಲ್ಲಿ ಜನಿಸಿದರು. ತಮ್ಮ ತಂದೆಯಿಂದಲೇ ಅಶ್ವಿನ್ ಕ್ರಿಕೆಟ್ ಬಗೆಗಿನ ಒಲವನ್ನು ಬೆಳೆಸಿಕೊಂಡಿದ್ದರು. ಅಶ್ವಿನ್ ತಂದೆ ಚೆನ್ನೈನಲ್ಲಿ ಕ್ಲಬ್‌ ಮಟ್ಟದ ಆಟಗಾರನಾಗಿದ್ದು ಇದರಿಂದಲೇ ಸ್ಪೂರ್ತಿ ಪಡೆದ ಅಶ್ವಿನ್ ತಾನು ಭಾರತ ತಂಡವನ್ನು ಪ್ರತಿನಿಧಿಸುವ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡರು. ಆ ನಿಟ್ಟಿನಲ್ಲಿಯೇ ಆರ್ ಅಶ್ವಿನ್ ಪ್ರಯತ್ನ ಸಾಗಿತ್ತು. ಶೈಕ್ಷಣಿಕವಾಗಿ ಉತ್ತಮವಾಗಿದ್ದ ಅಶ್ವಿನ್ ಕ್ರಿಕೆಟ್‌ನಲ್ಲಿಯೂ ಬೆಳವಣಿಗೆ ಸಾಧಿಸಲು ಆರಂಭಿಸಿದ್ದರು.

ಆರ್ ಅಶ್ವಿನ್ ಹಾಗೂ ಪ್ರೀತಿ ಭೇಟಿ ಯಾವಾಗ ಗೊತ್ತಾ!

ಆರ್ ಅಶ್ವಿನ್ ಹಾಗೂ ಪ್ರೀತಿ ಭೇಟಿ ಯಾವಾಗ ಗೊತ್ತಾ!

ಆರ್ ಅಶ್ವಿನ್ ಅವರ ಕಣ್ಣು ಸುಂದರಿ ಪ್ರೀತಿ ಮೇಲೆ ಕಣ್ಣಿ ಬಿದ್ದಿದ್ದು ಶಾಲಾ ದಿನಗಳಲ್ಲಿ. ಆ ಬಳಿಕ ಅಶ್ವಿನ್ ಹಾಗೂ ಪ್ರೀತಿ ಮಧ್ಯೆ ಗೆಳೆತನ ಆರಂಭವಾಗಿತ್ತು. ಮುಂದುವರಿದಂತೆ ಇಬ್ಬರ ನಡುವಿನ ಗೆಳೆತನ ಗಾಢವಾಗುತ್ತಾ ಸಾಗಿತ್ತು. ಹೀಗಾಗಿಯೇ ಇಬ್ಬರು ಕೂಡ ಒಂದೇ ಕಾಲೇಜಿಗೆ ಸೇರಿಕೊಂಡಿದ್ದರು. ಚೆನ್ನೈನ ಎಸ್‌ಎಸ್‌ಎನ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್‌ಗೆ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಗೆಳೆತನ ಮತ್ತಷ್ಟು ಹೆಚ್ಚಾಗಿ ಪ್ರೀತಿಗೆ ತಿರುಗಿತ್ತು. ಈ ಸಂದರ್ಭದಲ್ಲಿ ಎರಡು ಕಡೆಯ ಕುಟುಂಬಸ್ಥರಿಗೂ ಇಬ್ಬರ ಬಗ್ಗೆಯೂ ಚೆನ್ನಾಗಿ ತಿಳಿದಿದ್ದ ಕಾರಣ ಯಾವುದೇ ವಿರೋಧ ಬಾರಲಿಲ್ಲ. ತಮ್ಮ ಪ್ರೀತಿಯ ಅವಧಿಯನ್ನು ಅಶ್ವಿನ್ ಹಾಗೂ ಪ್ರೀತಿ ಉತ್ತಮವಾಗಿ ಆನಂದಿಸಿದರು.

ಮತ್ತಷ್ಟು ಗಾಢವಾಗಿತ್ತು ಪ್ರೀತಿ

ಮತ್ತಷ್ಟು ಗಾಢವಾಗಿತ್ತು ಪ್ರೀತಿ

ಇನ್ನು ಮುಂದುವರಿದಂತೆ ಅಶ್ವಿನ್ ಕ್ರಿಕೆಟ್ ಜೀವನದಲ್ಲಿ ಏಳಿಗೆ ಸಾಧಿಸುತ್ತಾ ಸಾಗಿದರು. ರಾಷ್ಟ್ರೀಯ ತಂಡದಲ್ಲಿಯೂ ಅವಕಾಶ ಪಡೆದುಕೊಂಡ ಆರ್ ಅಶ್ವಿನ್ ನಂತರ ಭಾರತ ತಂಡದ ಪ್ರಮುಖ ಆಟಗಾರನಾದರು. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ನೀಡುವ ಸಮಯ ಕಡಿಮೆಯಾಗತೊಡಗಿತ್ತು. ಪರಸ್ಪರ ಮಾತುಕತೆಗೆ ಹೆಚ್ಚಿನ ಸಮಯ ದೊರೆಯುತ್ತಿರಲಿಲ್ಲ. ಹಾಗಿದ್ದರೂ ಅಶ್ವಿನ್ ಹಾಗೂ ಪ್ರೀತಿ ನಡುವಿನ ಪ್ರೇಮಕ್ಕೆ ಯಾವುದೇ ಅಡ್ಡಿ ಬಾರಲಿಲ್ಲ. ಅಶ್ವಿನ್ ತಮ್ಮೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗದಿದ್ದರೂ ಆವರಿಗಿದ್ದ ಬದ್ಧತೆಯ ಬಗ್ಗೆ ಅರ್ಥ ಮಾಡಿಕೊಂಡು ಗೌರವಿಸುತ್ತಿದ್ದರು ಪ್ರೀತಿ. ಹೀಗಾಗಿ ಅಶ್ವಿನ್ ಹಾಗೂ ಪ್ರೀತಿ ನಡುವಿನ ಪ್ರೇಮದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

2011ರಲ್ಲಿ ಆರ್ ಅಶ್ವಿನ್ ಹಾಗೂ ಪ್ರೀತಿ ನಾರಾಯಣನ್ ಇಬ್ಬರೂ ಜೀವನದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ದರಿಸಿದ್ದರು. 2011ರ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು ಅದೇ ವರ್ಷ ನವೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ತಮಿಳು ಸಂಪ್ರದಾಯದಂತೆ ಇಬ್ಬರು ಸತಿಪತಿಗಳಾಗಿ ಹೊಸ ಜೀವನ ಆರಂಭಿಸಿದರು. ಈಗ ಈ ಜೋಡಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಹೆತ್ತವರಾಗಿ ಸುಖ ಜೀವನ ನಡೆಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, August 5, 2022, 19:34 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X