ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Ranking: ಇತಿಹಾಸ ಸೃಷ್ಟಿಸಲು ಟೀಂ ಇಂಡಿಯಾಗೆ ಇದು ಸುವರ್ಣಾವಕಾಶ!

Team India Have Golden Chance To Become ICC No 1 Ranking Team Across All Formats

ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಈಗಾಗಲೇ ನಂಬರ್ 1 ಸ್ಥಾನದಲ್ಲಿದೆ. ಈಗ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಕೂಡ ನಂಬರ್ 1 ಪಟ್ಟಕ್ಕೇರಲು ಭಾರತ ತಂಡಕ್ಕೆ ಸುವರ್ಣಾವಕಾಶ ಸಿಕ್ಕಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ದೊಡ್ಡ ಸವಾಲಾಗಿದ್ದು, ಇದರಲ್ಲಿ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಗೆದ್ದ ಬಳಿಕ ಭಾರತ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ಕೂಡ ನಂಬರ್ 1 ಸ್ಥಾನಕ್ಕೇರಲಿದೆ.

ಟಿ20ಯಲ್ಲಿ ಶತಕ ಬಾರಿಸಿದವರು ಟೆಸ್ಟ್ ತಂಡಕ್ಕೆ ಆಯ್ಕೆ, ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಆಟಗಾರ ಟಿ20 ತಂಡಕ್ಕೆ ಆಯ್ಕೆ!ಟಿ20ಯಲ್ಲಿ ಶತಕ ಬಾರಿಸಿದವರು ಟೆಸ್ಟ್ ತಂಡಕ್ಕೆ ಆಯ್ಕೆ, ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಆಟಗಾರ ಟಿ20 ತಂಡಕ್ಕೆ ಆಯ್ಕೆ!

ಪಾಕಿಸ್ತಾನ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದಿರುವ ಕಿವೀಸ್ ಪಡೆ ಅದೇ ಆತ್ಮವಿಶ್ವಾಸದಲ್ಲಿ ಭಾರತಕ್ಕೆ ಪ್ರಯಾಣ ಮಾಡಲಿದೆ. ಜನವರಿ 18 ರಂದು ಏಕದಿನ ಸರಣಿಯ ಮೊದಲನೇ ಪಂದ್ಯ ಹೈದರಾಬಾದ್‌ರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಗ್ರ ಸ್ಥಾನದಲ್ಲಿದೆ ಕಿವೀಸ್ ಪಡೆ

ಅಗ್ರ ಸ್ಥಾನದಲ್ಲಿದೆ ಕಿವೀಸ್ ಪಡೆ

ಸದ್ಯ ನ್ಯೂಜಿಲೆಂಡ್ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಆಗಿದೆ. ಭಾರತದ ವಿರುದ್ಧ ಏಕದಿನ ಸರಣಿಯನ್ನು ಸೋತರೆ ನೆಗೆಟಿವ್ ಪಾಯಿಂಟ್‌ ಆಧಾರದ ಮೇಲೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

ಭಾರತ ನಂಬರ್ 1 ಸ್ಥಾನಕ್ಕೇರಲಿದ್ದು, ಇಂಗ್ಲೆಂಡ್ 2 ನೇ ಸ್ಥಾನದಲ್ಲಿ ಮತ್ತು ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿ ಉಳಿಯಲಿವೆ. ಆದರೆ, ಭಾರತಕ್ಕೆ ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಕ್ಲೀನ್ ಸ್ವೀಪ್ ಮಾಡುವುದು ಸುಲಭವಲ್ಲ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ತಂಡದಿಂದ ಹೊರಗಿಟ್ಟರೆ ಟಿ20 ವಿಶ್ವಕಪ್ ಗೆಲ್ಲೋದು ಸುಲಭವಾ?

ಟೆಸ್ಟ್ ಸರಣಿ ಗೆದ್ದರೆ ಎರಡು ಅನುಕೂಲ

ಟೆಸ್ಟ್ ಸರಣಿ ಗೆದ್ದರೆ ಎರಡು ಅನುಕೂಲ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಮುಕ್ತಾಯವಾದ ಬಳಿಕ, ಭಾರತ ತಂಡ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಗೆಲ್ಲುವುದು ಅನಿವಾರ್ಯ.

ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಭಾರತದ ಬಲ, ದೌರ್ಬಲ್ಯಗಳನ್ನು ಅಳೆದ ತೂಗಿ ಸ್ಪಿನ್, ವೇಗಿಗಳನ್ನು ತಂಡಕ್ಕೆ ಸೇರ್ಪಡೆ ಮಾಡಿದೆ. 2023ರಲ್ಲಿ ಭಾರತಕ್ಕೆ ಮೊದಲ ನಿಜವಾದ ಸವಾಲೆಂದರೆ ಅದು ಈ ಸರಣಿ.

ಒಂದು ವೇಳೆ ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 1-0, 3-1 ಅಂತರದಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಅದರ ಜೊತೆಗೆ ಭಾರತ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದೆ. ಸದ್ಯ ಆಸ್ಟ್ರೇಲಿಯಾ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 116 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 115 ಪಾಯಿಂಟ್‌ಗಳೊಂದಿಗೆ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ.

ಏಕದಿನ ಮತ್ತು ಟೆಸ್ಟ್ ಪಂದ್ಯಗಳ ವೇಳಾಪಟ್ಟಿ

ಏಕದಿನ ಮತ್ತು ಟೆಸ್ಟ್ ಪಂದ್ಯಗಳ ವೇಳಾಪಟ್ಟಿ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ನಂತರ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯವನ್ನು ಜನವರಿ 18 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಡಲಿದೆ. ಎರಡು ಮತ್ತು ಮೂರನೇ ಪಂದ್ಯ ಕ್ರಮವಾಗಿ ಜನವರಿ 21 ಮತ್ತು 24 ರಂದು ರಾಯ್‌ಪುರ ಮತ್ತು ಇಂದೋರ್ ನಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮೊದಲ ಪಂದ್ಯ ಫೆಬ್ರವರಿ 9 ರಂದು ನಾಗ್ಪುರದಲ್ಲಿ ಪ್ರಾರಂಭವಾಗಲಿದೆ. ಸರಣಿಯ ಉಳಿದ ಮೂರು ಟೆಸ್ಟ್‌ಗಳು ದೆಹಲಿ (ಫೆ. 17-21), ಧರ್ಮಶಾಲಾ (ಮಾರ್ಚ್ 1-5), ಮತ್ತು ಅಹಮದಾಬಾದ್ (ಮಾರ್ಚ್ 9-13) ನಲ್ಲಿ ನಡೆಯಲಿವೆ.

Story first published: Saturday, January 14, 2023, 21:24 [IST]
Other articles published on Jan 14, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X