ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್ ಹುಟ್ಟುಹಬ್ಬ ಕ್ರೀಡಾ ದಿನವಾಗಿ ಆಚರಿಸಲ್ಪಡಬೇಕು: ಶ್ರೀಶಾಂತ್

Tendulkars birthday must be celebrated as Sports Day, says Sreesanth

ಮುಂಬೈ, ಏಪ್ರಿಲ್ 25: ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ ಕ್ರೀಡಾದಿನವಾಗಿ ಆಚರಿಸಲ್ಪಡಬೇಕು ಎಂದು ಭಾರತದ ವೇಗಿ ಎಸ್ ಶ್ರೀಶಾಂತ್ ಹೇಳಿದ್ದಾರೆ. ಏಪ್ರಿಲ್ 24ರಂದು ತನ್ನ 47ನೇ ವರ್ಷಕ್ಕೆ ಕಾಲಿಸಿರಿಸಿದ ಕ್ರಿಕೆಟ್ ದೇವರು ಸಚಿನ್‌ಗೆ ಶುಭಾಶಯ ಕೋರಿದ ಶ್ರೀಶಾಂತ್, ಸಚಿನ್ ಬಗ್ಗೆ ಹಲವಾರು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!

ಹಲೋದಲ್ಲಿ ಲೈವ್ ವೀಡಿಯೋದಲ್ಲಿ ತನ್ನ ಅಭಿಮಾನಿ ಮತ್ತು ಸಚಿನ್ ಕಟ್ಟಾ ಅಭಿಮಾನಿ ಜೊತೆ ಕಾಣಿಸಿಕೊಂಡ ಶ್ರೀಶಾಂತ್, ತನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಚಿನ್ ಬೀರಿದ ಪರಿಣಾಮಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸಚಿನ್ ಅವರು ಸಾರ್ವಕಾಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಶ್ರೀಶಾಂತ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ನ ಭವಿಷ್ಯ ಯಾರೆಂದು ಹೇಳಿದ ರೋಹಿತ್ ಶರ್ಮಾಭಾರತೀಯ ಕ್ರಿಕೆಟ್‌ನ ಭವಿಷ್ಯ ಯಾರೆಂದು ಹೇಳಿದ ರೋಹಿತ್ ಶರ್ಮಾ

'ಸಚಿನ್ ಹುಟ್ಟುಹಬ್ಬವನ್ನು ಯಾರೂ ಮರೆಯಲಾರರು. ಇದು ಕ್ರಿಕೆಟ್‌ ಪಾಲಿಗೆ ಬಹುದೊಡ್ಡ ದಿನ. ಈ ದಿನವನ್ನು ಕ್ರೀಡಾದಿನವಾಗಿ ಆಚರಿಸಬೇಕು. ಸಚಿನ್ ಪಾಜಿ ನನಗೆ ಅವರ ಪ್ರ್ಯಾಕ್ಟೀಸ್ ಗ್ಲೌಸ್ ನೀಡಿದ್ದರು. ಅದು ಈಗಲೂ ನನ್ನ ಬಳಿಯಿದೆ,' ಎಂದು ಶ್ರೀಶಾಂತ್ ಹೇಳಿದ್ದಾರೆ.

ಬೆವರಿಳಿಸುತ್ತಿದ್ದ ವಿಶ್ವದ ಟಾಪ್‌ 5 ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಹರ್ಭಜನ್ ಸಿಂಗ್!ಬೆವರಿಳಿಸುತ್ತಿದ್ದ ವಿಶ್ವದ ಟಾಪ್‌ 5 ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಹರ್ಭಜನ್ ಸಿಂಗ್!

2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಶ್ರೀಶಾಂತ್, ಹಲೋ ವೈವ್‌ನಲ್ಲಿ ಸುಮಾರು ಅರ್ಧಗಂಟೆ ಹರಟಿದರಲ್ಲದೆ, ಹಲವಾರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಡೀ ಲೈವ್ ಮಾತುಕತೆಯ ಆಕರ್ಷಣೆ ಎಂದರೆ ಶ್ರೀಶಾಂತ್ ಜತೆಗೆ ಮಾತನಾಡಿದ ನಿತಿನ್. ಸಚಿನ್ ಅವರ ಚೊಚ್ಚಲ ಟೆಸ್ಟ್ ಪಂದ್ಯದಿಂದ ನಿವೃತ್ತಿ ಪಂದ್ಯದವರೆಗೆ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿರುವ ನಿತಿತ್, ಶ್ರೀಶಾಂತ್ ಜೊತೆಗಿದ್ದು ವೀಡಿಯೋ ಚಾಟ್‌ಗೆ ಕಳೆ ತುಂಬಿದರು.

ಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದುಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದು

ಹಲೋ ಲೈವ್‌ನಲ್ಲಿ ಶ್ರೀ ಹೇಳಿಕೊಂಡ ಒಂದಿಷ್ಟು ಕುತೂಹಲಕಾರಿ ಸಂಗತಿಗಳು ಕೆಳಗಿವೆ.
* ಸಚಿನ್ ಫೇವರಿಟ್ ಫುಡ್: ಅಮ್ಮನ ಕೈ ರುಚಿ, ಮುಂಬೈ ವಡಾ ಪಾವ್
* ಸಚಿನ್ ಹಾಗೂ ಸೆಹ್ವಾಗ್ ದ್ವಿಶತಕ ಹೊಡೆದಾಗ ಇಂದೋರಿನ ರಾಜು ಎನ್ನುವ ಅಭಿಮಾನಿಯೊಬ್ಬ ಅಲ್ಲಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿಕೊಂಡು, ನಮಗೆ ಪ್ರಸಾದ ಕೊಟ್ಟಿದ್ದು ಇನ್ನು ನೆನಪಿದೆ.
* ಸಚಿನ್ ಫೇವರಿಟ್ ಶಾಟ್: ಆನ್ ಡ್ರೈವ್ ಹಾಗೂ ಸ್ಟ್ರೇಟ್ ಡ್ರೈವ್
* ಸಚಿನ್ ಕ್ರಿಕೆಟಿಗೆ ವಿದಾಯ ಹೇಳಿದಾಗ ಇಡೀ ಮೈದಾನ, ದೇಶದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಂದು ನನಗೆ ವಿಶ್ವಕಪ್ ಸೋತಷ್ಟೆ ಬೇಜಾರಾಗಿತ್ತು.
* ಸಚಿನ್ ಒಬ್ಬ ಲೆಜೆಂಡ್. ಅವರಿಗೆ ಯಾರನ್ನು ಹೋಲಿಸಲು ಸಾಧ್ಯವಿಲ್ಲ. ಈಗ ಬ್ಯಾಟ್ ಮಾಡಿದರು ಸಚಿನ್ ಶತಕ ಹೊಡೆಯಬಲ್ಲರು. ಸಚಿನ್ ಭಾರತೀಯ ಕ್ರಿಕೆಟಿನ ಕ್ರಾಂತಿ.
* ಸಚಿನ್ ಒಬ್ಬ ಅದ್ಭುತ ಸ್ನೇಹ ಜೀವಿ. ಮೊದಲ ಭೇಟಿಯಲ್ಲೇ 10-15 ವರ್ಷಗಳ ಹಿಂದೆ ಪರಿಚಯ ಇದ್ದಂತೆ ಮಾತನಾಡುತ್ತಾರೆ.
* ಸಚಿನ್ ಕ್ರಿಕೆಟಿಗಾಗೇ ಹುಟ್ಟಿದ್ದಾರೆ ಎನಿಸುತ್ತದೆ.
* ನನ್ನ ಕ್ರಿಕೆಟ್ ಬದುಕು ಯಶಸ್ವಿಯಾಗಲು ಸಚಿನ್ ಸಲಹೆ ಕಾರಣ. ನಾನು ಪ್ರತಿ ಬಾರಿ ಬೌಲ್ ಮಾಡುವಾಗಲೂ ಮಿಡ್ ಆನ್, ಮಿಡ್ ಆಫ್ ಅಲ್ಲಿ ನಿಂತು ಇನ್ ಸ್ವಿಂಗ್, ಔಟ್ ಸ್ವಿಂಗ್ ಎಂದು ಹೇಳುತ್ತಿದ್ದರು.
* 2011ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಸಚಿನ್ ಹಾಗೂ ಸೆಹ್ವಾಗ್ ಅವರು ನನ್ನನ್ನು ಒಂದು ಕಡೆ ನಿಲ್ಲಿಸಿ ಅಲ್ಲಿಯೇ ಮಂತ್ರ ಪಠಿಸುವಂತೆ ನಿರ್ದೇಶಿಸಿದ್ದರು. ನಾನು ಹಾಗೆ ಮಾಡುತ್ತಿದ್ದೆ.
* ನಾನು ಮತ್ತೆ ಕ್ರಿಕೆಟಿಗೆ ಬರಲು ಸಚಿನ್ ಸ್ಫೂರ್ತಿ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎನ್ನುವುದನ್ನು ತಮ್ಮ ನಿವೃತ್ತಿ ಅಂಚಿನಲ್ಲಿ ಮಾಡಿರುವ ಸಾಧನೆ ಮೂಲಕ ಸಚಿನ್ ಸಾಬೀತು ಮಾಡಿದ್ದಾರೆ.
* ಸಚಿನ್ ಬ್ಯಾಟ್ ಮಾಡುತ್ತಿದ್ದರೆ ಕವನ ಬರೆಯುತ್ತಿದ್ದಾರೆ ಎಂದು ಎನಿಸುತ್ತದೆ. ಅವರ ದ್ವಿಶತಕ ಕೂಡ ಅಷ್ಟೇ ಲೀಲಾಜಾಲವಾಗಿತ್ತು. ಹೊಡಿ, ಬಡಿ ಇನ್ನಿಂಗ್ಸ್ ಅದು ಆಗಿರಲಿಲ್ಲ.
* ಸಚಿನ್ ಅವರ ಕ್ರಿಕೆಟ್ ಕಿಟ್ ಅಥವಾ ವಸ್ತುಗಳನ್ನು ಬೇರೆಯವು ಸರಿಯಾಗಿಡಲು ಬಿಡುತ್ತಿರಲಿಲ್ಲ, ಸಚಿನ್ ಅಷ್ಟು ಶಿಸ್ತು ಹಾಗೂ ಸ್ವಾಭಿಮಾನಿ ಜೀವಿ.
* ರಣಜಿ ಪಂದ್ಯವಾಡಿ ಈ ಬಾರಿ ಕೇರಳಕ್ಕೆ ಪ್ರಶಸ್ತಿ ಗೆದ್ದು ಕೊಡುವ ಆಸೆಯಿದೆ.
* ಇನ್ನೊಂದು ಅಚ್ಚರಿ ವಿಚಾರ ಎಂದರೆ ನಾವೆಲ್ಲ ಕ್ರಿಕೆಟ್ ಆಟಗಾರರು ಸೇರಿ ಒಂದು ಹಾಡಿನ ವಿಡಿಯೋ ಮಾಡಿದ್ದೇವೆ, ಸದ್ಯದಲ್ಲೇ ನಿಮ್ಮೆದುರು ಬರಲಿದೆ.

Story first published: Saturday, April 25, 2020, 16:51 [IST]
Other articles published on Apr 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X