ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 3 ಐಪಿಎಲ್ ತಂಡಗಳು 2023ರಲ್ಲಿ ಹೊಸ ನಾಯಕನನ್ನು ಹೊಂದುವ ಸಾಧ್ಯತೆ!

These 3 IPL Teams Are Likely To Have A New Captain In 2023

2022ರ 15ನೇ ಐಪಿಎಲ್ ಫೈನಲ್‌ನಲ್ಲಿ (ಭಾನುವಾರ, ಮೇ 29) ಗುಜರಾತ್ ಟೈಟನ್ಸ್ ತಂಡ ತಮ್ಮ ಮೊದಲ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡು ಇತಿಹಾಸ ಸೃಷ್ಟಿಸಿತು.

ಐಪಿಎಲ್‌ನ 15ನೇ ಆವೃತ್ತಿಯು ಮುಕ್ತಾಯಗೊಂಡಿದ್ದು, ಟಿ20 ಕ್ರಿಕೆಟ್‌ನ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಗೊಳ್ಳಲು ಇನ್ನೂ ಹತ್ತು ತಿಂಗಳು ಬಾಕಿಯಿದೆ. ಹತ್ತು ಫ್ರಾಂಚೈಸಿ ತಂಡಗಳನ್ನೊಳಗೊಂಡ IPL 2022 ಯಶಸ್ವಿಯಾಗಿ ಪೂರೈಸಿದೆ. ಈ ಋತುವಿನ ಮೊದಲು ಮೆಗಾ ಹರಾಜನ್ನು ನಡೆಸಲಾಯಿತು ಈ ವೇಳೆ ಎರಡು ಹೊಸ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ, ತಂಡದ ಸಂಯೋಜನೆಯ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು.

ಈ ಋತುವಿನಲ್ಲಿ ಕೆಲವು ಫ್ರಾಂಚೈಸಿಗಳು ಹೊಸ ನಾಯಕರನ್ನು ಹೊಂದಿದ್ದವು. ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ಒಬ್ಬರಾದ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ನ ನಾಯಕರನ್ನಾಗಿ ನೇಮಿಸಲಾಯಿತು. ಅದು ಯಾವುದೇ ತಂಡವಾಗಲಿ ಅಥವಾ ಕ್ರೀಡೆಯಾಗಿರಲಿ, ನಾಯಕತ್ವದ ಜವಾಬ್ದಾರಿಗಳನ್ನು ಹೊರುವ ವ್ಯಕ್ತಿಯು ತಂಡದ ಬೆನ್ನೆಲುಬಾಗಿರುತ್ತಾನೆ ಮತ್ತು ಕ್ರಿಕೆಟ್‌ನಂತಹ ಕ್ರೀಡೆಯಲ್ಲಿ ಇದು ಇನ್ನೂ ಸ್ಪಷ್ಟವಾಗಿದೆ.

ಸೀಸನ್‌ನಿಂದ ಸೀಸನ್‌ಗೆ ಫ್ರಾಂಚೈಸಿಗಳಿಂದ ಹೊಸ ನಾಯಕರನ್ನು ನೇಮಿಸುವುದನ್ನು ನಾವು ನೋಡಿದ್ದೇವೆ. ನಾಯಕತ್ವದ ಹೊರೆ ಆಟಗಾರನ ಆಟದ ಮೇಲೆ ಪರಿಣಾಮ ಬೀರುತ್ತದೆ ಅಥವಾ ಅವನು ನಾಯಕನಾಗಿ ಸಾಕಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಇದಕ್ಕೆ ಹಲವು ಕಾರಣಗಳಿರುತ್ತವೆ. ಇನ್ನು ಮುಂದಿನ ಋತುವಿನಲ್ಲಿ ಹೊಸ ನಾಯಕನನ್ನು ಹೊಂದಿರುವ 3 ತಂಡಗಳನ್ನು ನಾವು ನೋಡಬಹುದು.

ಐಪಿಎಲ್ 2023ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವ ಬದಲಾವಣೆ

ಐಪಿಎಲ್ 2023ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವ ಬದಲಾವಣೆ

ಐಪಿಎಲ್ 2022ರ ಋತುವಿನ ಪೂರ್ವದಲ್ಲೇ ಪಂಜಾಬ್ ಕಿಂಗ್ಸ್‌ನ ಪೂರ್ಣ ಸಮಯದ ನಾಯಕತ್ವವನ್ನು ಮಯಾಂಕ್ ಅಗರ್ವಾಲ್ ಅವರಿಗೆ ವಹಿಸಲಾಯಿತ್ತು. ಕರ್ನಾಟಕದ ಈ ಆಟಗಾರ ತನ್ನ ಹೊಸ ಪಾತ್ರದಲ್ಲಿ ಪ್ರಭಾವಿಯಾಗಿದ್ದನು ಮತ್ತು ಟೂರ್ನಿಯ ಮಧ್ಯದಲ್ಲಿ ಕೆಲವು ಉತ್ತಮ ರಣತಂತ್ರಗಳನ್ನು ಹೆಣೆದು ತಂಡವನ್ನು ಮುನ್ನಡೆಸಿದನು. ಆದರೆ ಐಪಿಎಲ್ ಸಾಗಿದಂತೆ ಎಂಟನೇ ಬಾರಿಗೆ ಪ್ಲೇಆಫ್ ಅರ್ಹತೆ ಪಡೆಯಲು ಪಂಜಾಬ್ ಕಿಂಗ್ಸ್ ವಿಫಲವಾಯಿತು. ಏಕೆಂದರೆ ಪಂಜಾಬ್ ಹದಿನಾಲ್ಕು ಪಂದ್ಯಗಳಿಂದ ಏಳು ಗೆಲುವು ಮತ್ತು ಸೋಲುಗಳೊಂದಿಗೆ ಅಂಕಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದರು.

ನಾಯಕತ್ವ ಸ್ಥಾನಕ್ಕೆ ಶಿಖರ್ ಧವನ್ ಹೆಸರು ಮುಂಚೂಣಿ

ನಾಯಕತ್ವ ಸ್ಥಾನಕ್ಕೆ ಶಿಖರ್ ಧವನ್ ಹೆಸರು ಮುಂಚೂಣಿ

ಮಯಾಂಕ್ ಅಗರ್ವಾಲ್ ಅವರು 13 ಪಂದ್ಯಗಳಲ್ಲಿ 16.33ರ ಸರಾಸರಿಯಲ್ಲಿ ಕೇವಲ 196 ರನ್ ಗಳಿಸಲು ಯಶಸ್ವಿಯಾದರು. ಇದರಿಂದ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಇದು ಅವರ 2021ರ ಐಪಿಎಲ್ ಋತುವಿನ ನಂತರ ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿದೆ. 2021ರಲ್ಲಿ ಮಯಾಂಕ್ 40ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 441 ರನ್‌ಗಳನ್ನು ಗಳಿಸಿದರು. ಈ ಭಾರತೀಯ ಬ್ಯಾಟರ್ ಹಲವು ಪಂದ್ಯಗಳಲ್ಲಿ ಓಪನರ್ ಬದಲಾಗಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡತೊಡಗಿದರು.

ಮಯಾಂಕ್ ಅಗರ್ವಾಲ್‌ಗೆ ಬಹುಶಃ ನಾಯಕತ್ವದ ಒತ್ತಡ ಹೆಚ್ಚಾಗಿತ್ತು. ಅದು ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಪಂಜಾಬ್ ಕಿಂಗ್ಸ್ ಹೊಸ ನಾಯಕನನ್ನು ಬದಲಿಸಲು ಯೋಚಿಸುತ್ತಿದೆ. ಇದರಿಂದಾಗಿ ಪಂಜಾಬ್ ಭರವಸೆಯ ಆಟಗಾರ ಯಾವುದೇ ಹೆಚ್ಚಿನ ಒತ್ತಡವಿಲ್ಲದೆ ಬ್ಯಾಟಿಂಗ್ ಮಾಡಬಹುದು. ಎಡಗೈ ಬ್ಯಾಟರ್ ಶಿಖರ್ ಧವನ್ ನಾಯಕತ್ವ ಸ್ಥಾನಕ್ಕೆ ಹೆಸರು ಕೇಳಿಬರುತ್ತಿದೆ ಮತ್ತು ಖಂಡಿತವಾಗಿಯೂ ಅವರು ಆಯ್ಕೆಯಾಗುತ್ತಾರೆ. ಇಲ್ಲದಿದ್ದರೆ ಪಂಜಾಬ್ ಕಿಂಗ್ಸ್ ಮುಂದಿನ ಹರಾಜಿನಲ್ಲಿ ಅನುಭವಿ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರನನ್ನು ಪಡೆಯಬಹುದು.

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ

ಮುಂಬೈ ಇಂಡಿಯನ್ಸ್ ಈ ಬಾರಿ ತಮ್ಮ ಅತ್ಯಂತ ಕೆಟ್ಟ ಋತುವನ್ನು ಅನುಭವಿಸಿತು. ತಮ್ಮ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಕಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದರು. ಐದು ಬಾರಿಯ ಚಾಂಪಿಯನ್‌ಗಳು ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದರು ಮತ್ತು ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಯಿತು. ಋತುವಿನ ತಮ್ಮ ಮೊದಲ ಅಂಕಗಳನ್ನು ದಾಖಲಿಸಲು ರೋಹಿತ್ ಶರ್ಮಾ ಮತ್ತವರ ಕಂಪನಿ ಒಂಬತ್ತು ಪಂದ್ಯಗಳನ್ನು ತೆಗೆದುಕೊಂಡರು.

ಮುಂದಿನ ವರ್ಷದ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರು ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಬಿಟ್ಟುಕೊಡಬೇಕಾಗಬಹುದು. ಭಾರತೀಯ ಬ್ಯಾಟರ್‌ನನ್ನು ಎಲ್ಲಾ ಮೂರು ಮಾದರಿಗಳ ಭಾರತೀಯ ಕ್ರಿಕೆಟ್ ನಾಯಕನಾಗಿ ನೇಮಿಸಲಾಗಿದೆ. ಇದು ರೋಹಿತ್ ಶರ್ಮ ಮೇಲೆ ಒತ್ತಡ ಉಂಟಾಗಬಹುದು. ಹೀಗಾಗಿ 35 ವರ್ಷ ವಯಸ್ಸಿನ ಶರ್ಮ, ಐದು ಐಪಿಎಲ್ ಪ್ರಶಸ್ತಿ ಗೆಲುವಿಗೆ ಕಾರಣವಾದ ನಂತರ ಮುಂಬೈ ಇಂಡಿಯನ್ಸ್ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯಬಹುದು.

ಇದಲ್ಲದೆ, ಐಪಿಎಲ್ 2022ರಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ಹೊಸ ಕನಿಷ್ಠ ಮಟ್ಟವನ್ನು ಕುಸಿದಿತ್ತು. ಈ ಬಾರಿ ಅವರು ಒಂದೇ ಒಂದು ಅರ್ಧ ಶತಕವನ್ನು ಗಳಿಸಲು ವಿಫಲರಾದರು. ಅವರು ಆಡಿದ 14 ಇನ್ನಿಂಗ್ಸ್‌ಗಳಲ್ಲಿ 20 ರೊಳಗಿನ ಸರಾಸರಿಯಲ್ಲಿ ಕೇವಲ 268 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮುಂಬೈ ಇಂಡಿಯನ್ಸ್ ಖಂಡಿತವಾಗಿಯೂ "ದಿ ಹಿಟ್‌ಮ್ಯಾನ್'ನಿಂದ ತೆಗೆದುಕೊಂಡು ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುವ ಕೆಲವು ಆಟಗಾರರನ್ನು ಹೊಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ಮತ್ತೊಮ್ಮೆ ಬದಲಾವಣೆ

ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ಮತ್ತೊಮ್ಮೆ ಬದಲಾವಣೆ

ಎಂಎಸ್ ಧೋನಿ ಅವರು ಐಪಿಎಲ್ 2022ರ ಮೊದಲು ಭಾರತೀಯ ಕ್ರಿಕೆಟ್‌ನ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಸಿಎಸ್‌ಕೆ ತಂಡದ ನಾಯಕತ್ವ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು. ಆದರೆ ಈ ಋತುವಿನ ಆರಂಭದಲ್ಲಿ ಅರ್ಧದಷ್ಟು ಸೋಲಿನ ನಂತರ, ರವೀಂದ್ರ ಜಡೇಜಾ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಇದರಿಂದಾಗಿ ಮತ್ತೆ ನಾಲ್ಕು ಐಪಿಎಲ್ ಪ್ರಶಸ್ತಿಗಳಿಗೆ ಕಾರಣರಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ವಹಿಸಿಕೊಂಡರು.

ಮೆನ್ ಇನ್ ಯೆಲ್ಲೋ ಈ ಬಾರಿ ಆಘಾತಕಾರಿ ಋತುವನ್ನು ಹೊಂದಿತ್ತು. ಏಕೆಂದರೆ ಸಿಎಸ್‌ಕೆ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆಯಿತು. ಎಂಎಸ್ ಧೋನಿ ಅವರು ಕನಿಷ್ಠ ಇನ್ನೊಂದು ವರ್ಷ ಆಡುವುದಾಗಿ ಹೇಳಿದ್ದರೂ, ಮುಂದಿನ ವರ್ಷ ಅವರು ತಂಡವನ್ನು ಮುನ್ನಡೆಸುವ ಬಗ್ಗೆ ಸಂಪೂರ್ಣ ಅನುಮಾನವಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಋತುವಿನ ಹರಾಜಿನಲ್ಲಿ ಬೇರೆ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಬೇಕಾಗುತ್ತದೆ. ಏಕೆಂದರೆ ಸಿಎಸ್‌ಕೆ ರವೀಂದ್ರ ಜಡೇಜಾ ಅವರನ್ನು ನಾಯಕತ್ವದ ಕರ್ತವ್ಯಗಳಿಂದ ದೂರವಿಡುವ ಸಾಧ್ಯತೆಗಳಿವೆ ಮತ್ತು ತಂಡದಲ್ಲಿ ಜಡೇಜಾ ಇರುವುದು ಅನುಮಾನವೆನಿಸಿದೆ.

Story first published: Tuesday, May 31, 2022, 16:30 [IST]
Other articles published on May 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X