ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಟಿ20 ಲೀಗ್‌: ಮುಂಬೈ ಇಂಡಿಯನ್ಸ್‌ನ ಈ 4 ಮಾಜಿ ಆಟಗಾರರಿಗೆ ಕೇಪ್‌ಟೌನ್ ಫ್ರಾಂಚೈಸಿ ಮಣೆ!

Mumbai indians

ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಬಿಡ್‌ ಗೆದ್ದಿರುವ ಆರು ಐಪಿಎಲ್‌ ಫ್ರಾಂಚೈಸಿಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದಾಗಿದೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಾಗುತ್ತದೆ ಎನ್ನಲಾಗಿರುವ ಟಿ20 ಲೀಗ್‌ನಲ್ಲಿ ಯಾವೆಲ್ಲಾ ಆಟಗಾರರು ಭಾಗಿಯಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ ತನ್ನ ಫ್ರಾಂಚೈಸಿ ವ್ಯಾಪ್ತಿಯನ್ನ ಬೇರೆ ದೇಶದಲ್ಲೂ ಖರೀದಿಸಿದ್ದು, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲೂ ಸ್ಪರ್ಧೆಗೆ ಸಜ್ಜಾಗಿದೆ. ಹೀಗಾಗಿ ಭಾರತದ ಕೆಲವು ಆಟಗಾರರನ್ನ ಅಲ್ಲಿಯೂ ಖರೀದಿಸಲು ಸಿದ್ಧತೆ ನಡೆಸುತ್ತಿದೆ.

ಕೇಪ್‌ಟೌನ್ ಫ್ರಾಂಚೈಸಿ ಖರೀದಿಸಿರುವ ಮುಂಬೈ ಇಂಡಿಯನ್ಸ್‌

ಕೇಪ್‌ಟೌನ್ ಫ್ರಾಂಚೈಸಿ ಖರೀದಿಸಿರುವ ಮುಂಬೈ ಇಂಡಿಯನ್ಸ್‌

ಇನ್ನೂ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದಿದ್ದರೂ, ವರದಿಯ ಪ್ರಕಾರ, ಫ್ರ್ಯಾಂಚೈಸ್ ಕೇಪ್ ಟೌನ್‌ನಿಂದ ತಮ್ಮ ತಂಡವನ್ನು ಸ್ಥಾಪಿಸುವ ಹಕ್ಕುಗಳನ್ನು ಮುಂಬೈ ಇಂಡಿಯನ್ಸ್‌ ಪಡೆದುಕೊಂಡಿದೆ. ಐಪಿಎಲ್ ಮತ್ತು ಮುಂಬೈ ಇಂಡಿಯನ್ಸ್ ಸ್ಪರ್ಧೆಯ ಉತ್ತಮ ಭಾಗವಾಗಲು ಬಯಸುವಂತೆಯೇ ದಕ್ಷಿಣ ಆಫ್ರಿಕಾದ ಲೀಗ್ ಖ್ಯಾತಿಯನ್ನು ನಿರ್ಮಿಸಲು ಬಯಸುತ್ತದೆ. ಏತನ್ಮಧ್ಯೆ, ಫ್ರ್ಯಾಂಚೈಸ್ ತಮ್ಮ ಬ್ರ್ಯಾಂಡ್‌ನ ಭಾಗವಾಗಲು ಕೆಲವು ಪರಿಚಿತ ಹೆಸರನ್ನು ಸಹ ಆಯ್ಕೆ ಮಾಡಬಹುದು.

ಕೇಪ್‌ಟೌನ್ ಫ್ರಾಂಚೈಸಿಗಾಗಿ ಮುಂಬೈ ಕೆಲವು ಮಾಜಿ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನ ಹೊಂದಿದೆ. ಏಕೆಂದರೆ ಈ ಟಿ20 ಲೀಗ್‌ನಲ್ಲಿ ಭಾರತದ ಹಾಲಿ ಆಟಗಾರರು ಯಾರು ಭಾಗಿಯಾಗುವಂತಿಲ್ಲ, ಹೀಗಾಗಿ ಮಾಜಿ ಆಟಗಾರರು ಲೀಗ್‌ನಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್‌ ಒಡೆತನದ ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಫ್ರಾಂಚೈಸಿಯ ನಾಲ್ಕು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಆರ್‌.ಪಿ ಸಿಂಗ್

ಆರ್‌.ಪಿ ಸಿಂಗ್

ರುದ್ರ ಪ್ರತಾಪ್ ಸಿಂಗ್‌ (ಆರ್‌ಪಿ ಸಿಂಗ್) ಟಿ20 ಲೀಗ್‌ಗೆ ಮರಳಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 36 ವರ್ಷದ ಎಡಗೈ ವೇಗಿ 2018ರಲ್ಲಿಯೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷ ವಯಸ್ಸಾದರೂ ಸಹ ಆರ್‌ಪಿ ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಲ್ಲರು ಮತ್ತು ತಂಡಕ್ಕೆ ಕೊಡುಗೆ ನೀಡಬಲ್ಲರು.

ಐಪಿಎಲ್ 2012ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಆರ್‌.ಪಿ ಸಿಂಗ್ ಪ್ರಸ್ತುತ ಕಮೆಂಟೇಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಮತ್ತೆ ಮೈದಾನಕ್ಕಿಳಿದರೆ ಆಶ್ಚರ್ಯವಿಲ್ಲ.

Ind vs WI 1st T20: ಡ್ರೀಂ ಟೀಂ, ಪ್ಲೇಯಿಂಗ್ 11, ಪಿಚ್‌ ರಿಪೋರ್ಟ್‌

ಪಾರ್ಥೀವ್ ಪಟೇಲ್

ಪಾರ್ಥೀವ್ ಪಟೇಲ್

ಮುಂಬೈ ಇಂಡಿಯನ್ಸ್‌ ಮಾಜಿ ಓಪನರ್ ಪಾರ್ಥೀವ್ ಪಟೇಲ್ ಕೂಡ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಮುಂಬೈ ಮೂಲದ ಫ್ರಾಂಚೈಸಿಯಲ್ಲಿ ಕಾಣಿಸಿಕೊಳ್ಳಬಲ್ಲ ಆಟಗಾರರಾಗಿದ್ದಾರೆ. 37 ವರ್ಷದ ಗುಜರಾತ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್‌ 2020ರಲ್ಲಿ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ 40 ವರ್ಷ ವಯಸ್ಸಿನಲ್ಲಿಯೂ ಕೆಲ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥೀವ್‌ರನ್ನ ಪರಿಗಣಿಸಿದರು ಆಶ್ಚರ್ಯವಿಲ್ಲ. ಪಾರ್ಥೀವ್ ಪಟೇಲ್ 2015ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಪರ ಆಡಿದ್ದಾರೆ.

2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮಾಡಿದ್ದ ಈ 3 ತಪ್ಪನ್ನು ಈ ಬಾರಿಯೂ ಮಾಡಿದರೆ ಮತ್ತೆ ಮುಖಭಂಗ ಖಚಿತ!

ಉನ್ಮುಕ್ ಚಾಂದ್

ಉನ್ಮುಕ್ ಚಾಂದ್

ಪ್ರಸ್ತುತ ಆಡುತ್ತಿರುವ ಭಾರತೀಯ ಮೂಲದ ಕ್ರಿಕೆಟರ್‌ಗಳಲ್ಲಿ ಉನ್ಮುಕ್ ಚಾಂದ್ ಕೂಡ ಒಬ್ಬರು. ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಗೆಲ್ಲಿಸಿದ್ದ ಉನ್ಮುಕ್ ಚಾಂದ್ ಕೂಡ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳಬಲ್ಲ ಆಟಗಾರರಾಗಿದ್ದಾರೆ.

2015 ಮತ್ತು 2016ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಉನ್ಮುಕ್ ಚಾಂದ್ ಆನಂತರ ಟಿ20 ಲೀಗ್‌ನಿಂದ ಮರೆಯಾದರು. 2021ರಲ್ಲಿ ಟೀಂ ಇಂಡಿಯಾ ಪರ ಆಡುವುದನ್ನ ನಿವೃತ್ತಿ ಘೋಷಿಸಿದ ಉನ್ಮುಕ್ ಚಾಂದ್ ಪ್ರಸ್ತುತ ಅಮೆರಿಕಾದ ಪರ ಕ್ರಿಕೆಟ್‌ ಆಡುತ್ತಿದ್ದಾರೆ.

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯನಾಗಿರುವ ಉನ್ಮುಕ್‌ ಚಾಂದ್‌, ಹರಿಣಗಳ ನಾಡಿನ ಟಿ20ಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

IND vs WI ಪ್ರಥಮ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಜಡೇಜಾ ಮತ್ತು ಪಾಂಡ್ಯ ಕಣ್ಣು

ಹರ್ಭಜನ್ ಸಿಂಗ್‌

ಹರ್ಭಜನ್ ಸಿಂಗ್‌

ಟೀಂ ಇಂಡಿಯಾದ ಆಟಗಾರ ಹಾಗೂ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಕ್ರಿಕೆಟರ್‌ ಹರ್ಭಜನ್ ಸಿಂಗ್ ಕೂಡ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳಬಲ್ಲ ಭಾರತೀಯ ಕ್ರಿಕೆಟರ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್‌ ಭಜ್ಜಿಯನ್ನು ತನ್ನ ಕೇಪ್‌ಟೌನ್ ಫ್ರಾಂಚೈಸಿಯಲ್ಲಿ ಕಣಕ್ಕಿಸುವ ಸಾಧ್ಯತೆ ಹೆಚ್ಚಿದೆ.

ಹರ್ಭಜನ್ ಸಿಂಗ್ ಪ್ರಸ್ತುತ ಟೀಂ ಇಂಡಿಯಾಗೆ ಯಾವುದೇ ಫಾರ್ಮೆಟ್‌ನಲ್ಲೂ ನಿವೃತ್ತಿಯನ್ನ ಘೋಷಿಸಿಲ್ಲ. ಆದ್ರೆ ಮತ್ತೆ ಭಜ್ಜಿ ಭಾರತ ಪರ ಆಡುವುದು ಅಸಾಧ್ಯವಾಗಿದೆ ಮತ್ತು ಪಂಜಾಬ್ ಪಾರ್ಲಿಮೆಂಟ್ ಸದಸ್ಯರು ಸಹ ಆಗಿದ್ದಾರೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆತನ ಮನವೊಲಿಸಿದ್ದೇ ಆದಲ್ಲಿ ಟರ್ಬನೇಟರ್‌ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಬಹುದು.

ಹರ್ಭಜನ್ ಸಿಂಗ್‌ ಚೊಚ್ಚಲ ಐಪಿಎಲ್ ಸೀಸನ್‌ನಿಂದ ಹಿಡಿದು 2017ರ ಸೀಸನ್‌ವರೆಗೂ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ಪರ ಹರ್ಭಜನ್ ಕಣಕ್ಕಿಳಿದರು.

Story first published: Friday, July 29, 2022, 16:18 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X