ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಈ ಐವರು ಯುವ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿದ ನಿರೀಕ್ಷೆ

These Five New Players Who Can Impact In Upcoming T20 World Cup 2022

ಟಿ20 ವಿಶ್ವಕಪ್ ಹಲವಾರು ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯಗಳನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದೆ. ಪ್ರಸ್ತುತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಎಡಗೈ ವೇಗಿ ಆರ್‌ಪಿ ಸಿಂಗ್ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಮೆನ್ ಇನ್ ಬ್ಲೂ ಐತಿಹಾಸಿಕ ವಿಜಯೋತ್ಸವದ ಸಂದರ್ಭದಲ್ಲಿ ಬೃಹತ್ ಕೊಡುಗೆಯನ್ನು ನೀಡಿದರು.

T20 World Cup 2022: ಭಾರತದ ಈ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸುತ್ತಾರೆ ಎಂದ ಆಶಿಶ್ ನೆಹ್ರಾT20 World Cup 2022: ಭಾರತದ ಈ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸುತ್ತಾರೆ ಎಂದ ಆಶಿಶ್ ನೆಹ್ರಾ

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್, 2016 ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜನಪ್ರಿಯರಾದರು. ಕಳೆದ ವರ್ಷ ಯುಎಇಯಲ್ಲಿ ನಡೆದ ಆವೃತ್ತಿಯಲ್ಲಿ ಇಬ್ಬರು ಯುವ ಶ್ರೀಲಂಕಾ ಆಟಗಾರರು ಗಮನಾರ್ಹ ಪ್ರಭಾವ ಬೀರಿದರು, ಆಸ್ಟ್ರೇಲಿಯಾ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು.

ವನಿಂದು ಹಸರಂಗ 16 ಪ್ರಮುಖ ವಿಕೆಟ್ ಪಡೆದರೆ, ಚರಿತ್ ಅಸಲಂಕಾ ಆರು ಪಂದ್ಯಗಳಲ್ಲಿ 46.20 ಸರಾಸರಿ ಮತ್ತು 147.13 ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸಿದರು.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಹಲವಾರು ಭರವಸೆಯ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಭರವಸೆ ಹೊಂದಿರುವ ಐದು ಪ್ರಮುಖ ಯುವ ಆಟಗಾರರ ಮಾಹಿತಿ ಇಲ್ಲಿದೆ.

ಎಡಗೈ ವೇಗಿ ಫಜಲ್ಹಕ್ ಫಾರೂಕಿ

ಎಡಗೈ ವೇಗಿ ಫಜಲ್ಹಕ್ ಫಾರೂಕಿ

ಅಫ್ಘಾನಿಸ್ತಾನದ ಎಡಗೈ ವೇಗಿ ಫಜಲ್ಹಕ್ ಫಾರೂಕಿ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಯಶಸ್ಸು ಕಂಡಿದ್ದಾರೆ. ದುಬೈನಲ್ಲಿ ನಡೆದ ಏಷ್ಯಾ ಕಪ್ 2022 ರ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 11 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೂಡ ಮೂರು ವಿಕೆಟ್ ಪಡೆದರು.

ಟಿ20 ವಿಶ್ವಕಪ್‌ನಲ್ಲಿ ಪ್ರಭಾವಿ ಟಿ20 ಬೌಲರ್ ಆಗಲು, ಸಾಮರ್ಥ್ಯ ಹೊಂದಿದ್ದಾರೆ. ಸರಿಯಾದ ಲೈನ್ ಮತ್ತು ಲೆಂಗ್ತ್ ಕಾಯ್ದುಕೊಂಡು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಫಜಲ್ಹಕ್ ಫಾರೂಕಿ ವಿಕೆಟ್ ಪಡೆಯುವ ಪ್ರಮುಖ ಬೌಲರ್ ಆಗಲಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಟಿ20 ಪದಾರ್ಪಣೆ ಮಾಡಿದ ಫಾರೂಕಿ ಇದುವರೆಗೆ 14 ಟಿ20 ಪಂದ್ಯಗಳನ್ನು ಆಡಿದ್ದಾರೆ, 19.77 ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೆಲವು ಬ್ಯಾಟರ್‌ಗಳಿಗೆ ಕಠಿಣ ಸವಾಲು ಹಾಕುವ ಸಾಧ್ಯತೆ ಇದೆ.

T20 World Cup 2022: ಅತಿ ಹೆಚ್ಚು ವಿಕೆಟ್ ಪಡೆಯಬಹುದಾದ ಐವರು ಬೌಲರ್​ಗಳು ಇವರು

ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟರ್ ಫಿಲ್ ಸಾಲ್ಟ್

ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟರ್ ಫಿಲ್ ಸಾಲ್ಟ್

ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಫಿಲ್ ಸಾಲ್ಟ್ 2016 ರಲ್ಲಿ ತಮ್ಮ ಟಿ20 ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಜೋಸ್ ಬಟ್ಲರ್ ಇಂಗ್ಲೆಂಡ್‌ನ ಮೊದಲ ಆಯ್ಕೆಯ ಕೀಪರ್-ಬ್ಯಾಟರ್ ಆಗಿರುವುದರಿಂದ, ಸಾಲ್ಟ್‌ಗೆ ಸೂಕ್ತ ಅವಕಾಶ ಸಿಗಲಿಲ್ಲ. 2022ರ ಜನವರಿಯಲ್ಲಿ ಬ್ರಿಡ್ಜ್‌ಟೌನ್, ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಅಂತಿಮವಾಗಿ ಚೊಚ್ಚಲ ಪಂದ್ಯ ಆಡಿದರು.

ಕೇವಲ 24 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಹೊಡೆದು 57 ರನ್ ಗಳಿಸಿದರು. ಪಾಕಿಸ್ತಾನದಲ್ಲಿ ನಡೆದ ಏಳು ಪಂದ್ಯಗಳ ಸರಣಿಯ ಆರನೇ ಟಿ20 ಪಂದ್ಯದಲ್ಲಿ 41 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ತಮ್ಮ ಕ್ಲೀನ್-ಹಿಟ್ಟಿಂಗ್ ಪರಾಕ್ರಮ ಪ್ರದರ್ಶಿಸಲು ಉತ್ಸುಕರಾಗಿದ್ದಾರೆ.

ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್

ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್

ವಿವಿಧ ಲೀಗ್‌ಗಳಲ್ಲಿ ಒಟ್ಟಾರೆ 134 ಟಿ20 ಪಂದ್ಯಗಳನ್ನಾಡಿರುವ ಟಿಮ್ ಡೇವಿಡ್ 163.32 ಸರಾಸರಿಯಲ್ಲಿ 2880 ರನ್ ಗಳಿಸಿದ್ದಾರೆ. ಡೇವಿಡ್ ಬಿಗ್ ಬ್ಯಾಷ್ ಲೀಗ್ (BBL), ಪಾಕಿಸ್ತಾನ್ ಸೂಪರ್ ಲೀಗ್ (PSL), ದಿ ಹಂಡ್ರೆಡ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಸಿಂಗಾಪುರ ಮೂಲದ ಕ್ರಿಕೆಟಿಗ ಇತ್ತೀಚೆಗೆ ಭಾರತ ಪ್ರವಾಸದ ಸಮಯದಲ್ಲಿ ಆಸ್ಟ್ರೇಲಿಯಾಕ್ಕೆ ಪದಾರ್ಪಣೆ ಮಾಡಿದರು.

ಹೈದರಾಬಾದ್‌ನಲ್ಲಿ ಭಾರತ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅವರು ಕೇವಲ 27 ಎಸೆತಗಳಲ್ಲಿ 54 ರನ್ ಗಳಿಸಿದರು. ಬಲಗೈ ಬ್ಯಾಟರ್ ನಂತರದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 20 ಎಸೆತಗಳಲ್ಲಿ 42 ರನ್ ಗಳಿಸಿದರು, ಮತ್ತು ಕ್ಯಾನ್‌ಬೆರಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 23 ಎಸೆತಗಳಲ್ಲಿ 40 ರನ್ ಗಳಿಸಿದರು.

ಉತ್ತಮ ಫಾರ್ಮ್‌ನಲ್ಲಿರುವ ಟಿಮ್ ಡೇವಿಡ್ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಆಸೀಸ್, ಅವರ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಅನೇಕರು ಅವರನ್ನು ಆಸ್ಟ್ರೇಲಿಯನ್ ತಂಡದಲ್ಲಿ ಎಕ್ಸ್-ಫ್ಯಾಕ್ಟರ್ ಎಂದು ಕೂಡ ಕರೆದಿದ್ದಾರೆ.

ಪಾಕಿಸ್ತಾನ ವೇಗದ ಬೌಲರ್ ನಸೀಮ್ ಶಾ

ಪಾಕಿಸ್ತಾನ ವೇಗದ ಬೌಲರ್ ನಸೀಮ್ ಶಾ

ಪಾಕಿಸ್ತಾನದ ವೇಗಿ ನಸೀಮ್ ಶಾ ತಮ್ಮ ಟಿ20 ವೃತ್ತಿಜೀವನಕ್ಕೆ ಪರಿಣಾಮಕಾರಿ ಆರಂಭವನ್ನು ಮಾಡಿದ್ದಾರೆ. ಶಾಹೀನ್ ಅಫ್ರಿದಿ ಅನುಪಸ್ಥಿತಿಯಲ್ಲಿ, ನಸೀಮ್ ಶಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ಏಷ್ಯಾ ಕಪ್ 2022 ರ ಗುಂಪು ಹಂತದಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳಿಗೆ ಶಾಹಿನ್ ಅಫ್ರಿದಿಯನ್ನು ನೆನಪಿಸಿದರು. ಅಫ್ಘಾನಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಫಾರೂಕಿ ಬೌಲಿಂಗ್‌ನಲ್ಲಿ ಸತತ ಸಿಕ್ಸರ್‌ ಹೊಡೆದು, ಬ್ಯಾಟ್‌ನಲ್ಲೂ ಅವರು ಆ ಎಕ್ಸ್-ಫ್ಯಾಕ್ಟರ್ ಅನ್ನು ಹೊಂದಿದ್ದಾರೆಂದು ಪ್ರದರ್ಶಿಸಿದರು.

ಯುವ ವೇಗಿ ಅರ್ಶ್‌ದೀಪ್ ಸಿಂಗ್

ಯುವ ವೇಗಿ ಅರ್ಶ್‌ದೀಪ್ ಸಿಂಗ್

ಜಸ್ಪ್ರೀತ್ ಬುಮ್ರಾ ಗಾಯಗೊಂಡು ಟಿ20 ವಿಶ್ವಕಪ್‌ನಿಂದ ಹೊರುಗುಳಿದ ನಂತರ ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಅರ್ಶ್‌ದೀಪ್ ಸಿಂಗ್ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಗಾಗಿ ಪ್ರಭಾವಶಾಲಿ ಪ್ರದರ್ಶನದ ನಂತರ, ಎಡಗೈ ಸೀಮರ್ ಜುಲೈನಲ್ಲಿ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಟಿ20 ಚೊಚ್ಚಲ ಪಂದ್ಯವನ್ನು ಆಡಿದರು. ಇದುವರೆಗೂ 13 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅರ್ಷ್‌ದೀಪ್ ಸಿಂಗ್, 19.78 ರ ಸರಾಸರಿಯಲ್ಲಿ ಮತ್ತು 8.14 ರ ಎಕಾನಮಿಯಲ್ಲಿ 19 ವಿಕೆಟ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಸ್ವದೇಶಿ ಸರಣಿಯ ಸಮಯದಲ್ಲಿ, ಅವರು ತಿರುವನಂತಪುರಂ ಟಿ20 ಪಂದ್ಯದ ಸಮಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಆರಂಭಿಕ ಬೌಲರ್ ಆಗಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿದರು.

Story first published: Friday, October 14, 2022, 2:27 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X