ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇರೆ ಬೇರೆ ಕಾರಣಕ್ಕೆ ಐಪಿಎಲ್‌ನಲ್ಲಿ 'BAN' ಆಗಿದ್ದ ಐದು ಆಟಗಾರರು

These Five Players Banned From IPL Weird Reasons

ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಎರಡು ವರ್ಷ ನಿಷೇಧಕ್ಕೆ ಒಳಗಾಗಿತ್ತು. ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ಪಾಕಿಸ್ತಾನದ ಆಟಗಾರರನ್ನು ಐಪಿಎಲ್‌ನಿಂದ ಶಾಶ್ವತವಾಗಿ ದೂರ ಇಡಲಾಗಿದೆ.

ಬಾಲ್ ಟ್ಯಾಂಪರಿಂಗ್ ಆರೋಪ ಹಿನ್ನೆಲೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದರು. ಹಾಗಾಗಿ, 2018 ಐಪಿಎಲ್‌ನಿಂದಲೂ ಇಬ್ಬರನ್ನು ಹೊರಗುಳಿಸಲಾಗಿತ್ತು. ಈ ಎಲ್ಲ ಘಟನೆಗಳು ಐಪಿಎಲ್ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿದಿವೆ. ಆದ್ರೆ, ಬೇರೆ ಬೇರೆ ಕಾರಣಕ್ಕೆ ಐದು ಪ್ರಮುಖ ಆಟಗಾರರು ಐಪಿಎಲ್‌ನಿಂದ ಬ್ಯಾನ್ ಆಗಿದ್ದರು ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ....

ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್

ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್

ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾದ ಲ್ಯೂಕ್ ಪೊಮರ್ಸ್‌ಬಾಚ್ 2012ರ ಆವೃತ್ತಿಯಿಂದ ನಿಷೇಧಕ್ಕೆ ಒಳಗಾಗಿದ್ದರು. ಆಸ್ಟ್ರೇಲಿಯಾ ಹೋಟೆಲ್‌ವೊಂದರಲ್ಲಿ ಯುವತಿ ಮತ್ತು ಆಕೆಯ ಬಾಯ್‌ಫ್ರೆಂಡ್‌ ಮೇಲೆ ಹಲ್ಲೆ ಮಾಡಿದ ಆರೋಪದಡಿ ಲ್ಯೂಕ್ ಪೊಮರ್ಸ್‌ಬಾಚ್ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. ಆದ್ರೆ, ಆ ವರ್ಷ ಐಪಿಎಲ್‌ನಿಂದ ಲ್ಯೂಕ್ ಪೊಮರ್ಸ್‌ಬಾಚ್ ಬ್ಯಾನ್ ಆದರು. ನಂತರ 2013ರಲ್ಲಿ ಕಿಂಗ್ಸ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು.

ಡೆಲ್ಲಿ ತಂಡದಲ್ಲಿದ್ದ ಮೊಹಮ್ಮದ್ ಆಸಿಫ್

ಡೆಲ್ಲಿ ತಂಡದಲ್ಲಿದ್ದ ಮೊಹಮ್ಮದ್ ಆಸಿಫ್

2008ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪ್ರಮುಖ ವೇಗಿಯಾಗಿದ್ದ ಪಾಕಿಸ್ತಾನ ಮೊಹಮ್ಮದ್ ಆಸಿಫ್ 2009 ಐಪಿಎಲ್‌ನಿಂದ ಬ್ಯಾನ್ ಆಗಿದ್ದರು. ಮುಂಬೈನಲ್ಲಿ ನಡೆದ ರಾಜಸ್ಥಾನ ಮತ್ತು ಡೆಲ್ಲಿ ಪಂದ್ಯಕ್ಕೂ ಮುಂಚೆ ಆಸಿಫ್ ಮೂತ್ರ ಪರೀಕ್ಷೆ ಮಾಡಿದಾಗ ಡ್ರಗ್ಸ್ ಸೇವಿಸಿದ್ದು ಕಂಡು ಬಂದಿತ್ತು. ಈ ಹಿನ್ನೆಲೆ 2009 ಐಪಿಎಲ್ ಟೂರ್ನಿಯಿಂದ ಆಸಿಫ್ ನಿಷೇಧಕ್ಕೆ ಒಳಗಾಗಿದ್ದರು.

ರವೀಂದ್ರಾ ಜಡೇಜಾ

ರವೀಂದ್ರಾ ಜಡೇಜಾ

2008-09ರ ಅವಧಿಯಲ್ಲಿ ರಾಜಸ್ಥಾನದ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಆಲ್ ರೌಂಡರ್ ರವೀಂದ್ರ ಜಡೇಜಾ ಒಂದು ವರ್ಷ ಐಪಿಎಲ್‌ನಿಂದ ನಿಷೇಧಕ್ಕೆ ಒಳಗಾಗಿದ್ದರು. ಐಪಿಎಲ್ ಪ್ರಾಂಚೈಸಿ ನಿಯಮದ ಉಲ್ಲಂಘನೆ ಮಾಡಿದ ಆರೋಪದಲ್ಲಿ 2010ನೇ ಟೂರ್ನಿಯಿಂದ ಬ್ಯಾನ್ ಆಗಿದ್ದರು. ನಂತರ 2011ರಲ್ಲಿ ಕೊಚ್ಚಿ ಟಸ್ಕರ್ ಕೇರಳ ತಂಡದ ಪರವಾಗಿ ಕಣಕ್ಕೆ ಇಳಿದರು.

ಪ್ರವೀಣ್ ತಾಂಬೆ

ಪ್ರವೀಣ್ ತಾಂಬೆ

ಐಪಿಎಲ್ 2020ರಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಪ್ರವೀಣ್ ತಾಂಬೆಯನ್ನು ನಂತರ ಅನರ್ಹಗೊಳಿಸಲಾಯಿತು. ನಿವೃತ್ತಿ ವಿಚಾರದಲ್ಲಿ ಬಿಸಿಸಿಐ ನಿಯಮನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ 2020ನೇ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಲಿಲ್ಲ. 2013-14 ಪ್ರವೀಣ್ ತಾಂಬೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದರು. ನಂತರ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ವಿದೇಶಿ ಟಿ-10 ಕ್ರಿಕೆಟ್ ಲೀಗ್‌ನಲ್ಲಿ ಆಡಿದ್ದರು. ಬಳಿಕ, ನಿವೃತ್ತಿ ವಾಪಸ್ ಪಡೆದು ಮುಂಬೈ ಟಿ-10 ಲೀಗ್‌ನಲ್ಲಿ ಆಡಿದರು. 2020ರ ಐಪಿಎಲ್ ಹರಾಜಿನಲ್ಲೂ ಭಾಗವಹಿಸಿದರು.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಭಾರತೀಯ ಬೌಲರ್ ಶ್ರೀಶಾಂತ್ ಅವರ ಮೇಲೆ ಮೈದಾನದಲ್ಲಿ ಹಲ್ಲೆ ಮಾಡಿದ ಆರೋಪದಲ್ಲಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಐದು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಹರ್ಭಜನ್ ಸಿಂಗ್ ಹಾಗೂ ಕಿಂಗ್ಸ್ ಪಂಜಾಬ್ ತಂಡದ ಪರವಾಗಿ ಶ್ರೀಶಾಂತ್ ಆಡುತ್ತಿದ್ದರು. ಈ ಪಂದ್ಯದ ವೇಳೆ ಈ ಘಟನೆ ನಡೆದಿತ್ತು.

Story first published: Tuesday, November 10, 2020, 15:27 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X