ಕಳೆದ ಐದು ವರ್ಷದಲ್ಲಿ ಎರಡು ದೇಶಗಳ ಪರವಾಗಿ ಟಿ20I ಆಡಿದ ನಾಲ್ಕು ಕ್ರಿಕೆಟಿಗರು ಇವರು!

ಸುದೀರ್ಘ ಇತಿಹಾಸವನ್ನು ಹೊಂದಿರುವ ಕ್ರಿಕೆಟ್‌ನ ಇತ್ತೀಚಿನ ಮಾದರಿಯಾಗಿರುವ ಟಿ20 ಸದ್ಯ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರಾಷ್ಟ್ರಗಳು ಟಿ20 ಮಾದರಿಯಲ್ಲಿ ಆಡುತ್ತಿವೆ. ಕ್ರಿಕೆಟ್‌ನ ಜಾಗತಿಕ ಆಡಳಿತ ಮಂಡಳಿಯಾಗಿರುವ ಐಸಿಸಿ ಕೂಡ ಹೆಚ್ಚು ರಾಷ್ಟ್ರಗಳು ಟಿ20 ಕ್ರಿಕೆಟ್ ಆಡುವುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆಧುನಿಕ ಕಾಲದಲ್ಲಿ ಹೆಚ್ಚು ಪ್ರಖ್ಯಾತವಲ್ಲದ ರಾಷ್ಟ್ರಗಳು ಕೂಡ ನಿರಂತರವಾಗಿ ಟಿ20 ಮಾದರಿಯಲ್ಲಿ ಭಾಗಿಯಾಗುತ್ತಿರುವುದನ್ನು ಕ್ರಿಕೆಟ್ ಅಭಿಮಾನಿಗಳು ಗಮನಿಸಿರುತ್ತಾರೆ. ಇದು ಟಿ20 ಮಾದರಿಯ ಯಶಸ್ಸಿನ ಭಾಗ ಎಂಬುದರಲ್ಲಿ ಅನುಮಾನವಿಲ್ಲ.

ಕ್ರಿಕೆಟ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಾರಣದಿಂದಾಗಿ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಮಾಣದ ಅವಕಾಶಗಳು ದೊರೆಯುತ್ತಿದೆ. ಇಂಥಾ ಸಂದರ್ಭದಲ್ಲಿ ಕೆಲ ಪ್ರತಿಭಾನ್ವಿತ ಆಟಗಾರರ ವಲಸೆಗಳು ಕೂಡ ಸಾಮಾನ್ಯ ಎಂಬಂತಾಗಿದೆ. ಇದರ ಇತ್ತೀಚಿನ ಉದಾಹರಣೆಯೆಂದರೆ ಆಸ್ಟ್ರೇಲಿಯಾ ತಂಡಕ್ಕೆ ಸಿಂಗಾಪೂರ್‌ನ ಆಟಗಾರ ಟಿಮ್ ಡೇವಿಡ್ ಸೇರ್ಪಡೆ. ಕಳೆದ ಐದು ವರ್ಷಗಳಲ್ಲಿ ಎರಡು ರಾಷ್ಟ್ರಘಲ ಪರವಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ನಾಲ್ವರು ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ನೋಡೋಣ.

Ind Vs Aus T20: ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್Ind Vs Aus T20: ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್

ಸಿಂಗಾಪೂರ್ ಹಾಗೂ ಆಸ್ಟ್ರೇಲಿಯಾ ಪರವಾಗಿ ಟಿಮ್ ಡೇವಿಡ್

ಸಿಂಗಾಪೂರ್ ಹಾಗೂ ಆಸ್ಟ್ರೇಲಿಯಾ ಪರವಾಗಿ ಟಿಮ್ ಡೇವಿಡ್

ಸ್ಪೋಟಕ ಆಟಗಾರ ಟಿಮ್ ಡೇವಿಡ್ ಮೂಲತಃ ಸಿಂಗಾಪೂರ್‌ನವರು. ತಮ್ಮ ತವರು ದೇಶದ ಪರವಾಗಿಯೇ ಆರಂಭದಲ್ಲಿ ಕ್ರಿಕೆಟ್ ಆಡಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಖ್ಯಾತರಾದರು. 2019 ರಿಂದ 2020ರ ಅವಧಿಯಲ್ಲಿ ತವರು ರಾಷ್ಟ್ರ ಸಿಂಗಾಪೂರ್ ಪರವಾಗಿ 14 ಟಿ20 ಪಂದ್ಯಗಳನ್ನು ಆಡಿದ್ದಾರೆ ಟಿಮ್ ಡೇವಿಡ್. ಆದರೆ ಕಳೆದ ಮಂಗಳವಾರ ಭಾರತದ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಡೇವಿಡ್ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿಯೂ ಟಿಮ್ ಡೇವಿಡ್ ಆಸಿಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

ಜಿಂಬಾಬ್ವೆ ಹಾಗೂ ಮಲವಿ ಪರ ಆಡಿರುವ ಡೇನಿಯಲ್ ಜೇಕಿಯೆಲ್

ಜಿಂಬಾಬ್ವೆ ಹಾಗೂ ಮಲವಿ ಪರ ಆಡಿರುವ ಡೇನಿಯಲ್ ಜೇಕಿಯೆಲ್

ಡೇನಿಯಲ್ ಜೇಕಿಯಲ್ ಜಿಂಬಾಬ್ವೆ ತಂಡದ ಪರವಾಗಿ ಎರಡು ಪಂದ್ಯಗಳನ್ನು ಆಡಿದ್ದು ಇದರಲ್ಲಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಈ ವರ್ಷದ ಆರಂಭದಲ್ಲಿ ಅವರು ಜಿಂಬಾಬ್ವೆ ತಂಡವನ್ನು ತೊರೆದು ಪೂರ್ವ ಆಫ್ರಿಕಾದ ರಾಷ್ಟ್ರವಾಗಿರುವ ಮಲವಿಗೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಅವರು ಮೂರು ವಿಕೆಟ್ ಪಡೆದು ಮಿಂಚಿದ್ದರು.

ಮೈಕೆಲ್ ರಿಪ್ಪನ್

ಮೈಕೆಲ್ ರಿಪ್ಪನ್

ಮೈಕಲ್ ರಿಪ್ಪನ್ ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕ್ರಿಕೆಟಿಗನಾಗಿದ್ದಾರೆ. ಆದರೆ ಮೈಕಲ್ ರಿಪ್ಪನ್ ಮೊದಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು ನೆದರ್ಲೆಂಡ್ಸ್ ತಂಡದ ಪರವಾಗಿ. 2013ರಿಂದ 2022ರ ವರೆಗೆ ರಿಪ್ಪನ್ ನೆದರ್ಲೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಇತ್ತೀಚೆಗೆ ಇವರು ನ್ಯೂಜಿಲೆಂಡ್ ತಂಡವನ್ನು ಸೇರಿಕೊಂಡಿದ್ದು ಸ್ಕಾಟ್‌ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಪರವಾಗಿ ಪದಾರ್ಪಣೆ ಮಾಡಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದು, ಬಹುಬೇಗನೆ ಮರೆಯಾದ 3 ಭಾರತದ ಆಟಗಾರರು

ಹೇಡನ್ ವಾಲ್ಶ್ ಜೂನಿಯರ್

ಹೇಡನ್ ವಾಲ್ಶ್ ಜೂನಿಯರ್

ಸ್ಪಿನ್ ಬೌಲರ್ ಆಗಿ ಖ್ಯಾತಿ ಪಡೆದಿರುವ ಹೇಡನ್ ವಾಲ್ಶ್ ಜೂನಿಯರ್ ಮೊದಲಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡವನ್ನು ಪ್ರತಿನಿಧಿಸಿರುವ ಆಟಗಾರನಾಗಿದ್ದಾರೆ. ಯುಎಸ್‌ಎ ಪರವಾಗಿ 2019ರಲ್ಲಿ ವಾಲ್ಶ್ 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಬಳಿಕ ಹೇಡನ್ ವಾಲ್ಶ್ ವೆಸ್ಟ್ ಇಂಡೀಸ್ ತಂಡಕ್ಕೆ ಸೇರ್ಪಡೆಯಾಗಿದ್ದು ಬಳಿಕ ನಿರಂತರವಾಗಿ ವಿಂಡಿಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, September 21, 2022, 19:22 [IST]
Other articles published on Sep 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X