ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಬಿಗ್ ಶಾಕ್, 2-1 ಅಂತರದಲ್ಲಿ ಗೆದ್ದ ಸೌದಿ ಅರೇಬಿಯಾ

Biggest Upset In Fifa World Cup 2022: Saudi Arabia Stuns Argentina With 2-1 Defeat

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ 2022ರಲ್ಲಿ ಮೊಟ್ಟ ಮೊದಲ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಫಿಫಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ಅರ್ಜೆಂಟೀನಾ ತಂಡಕ್ಕೆ 51ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಶಾಕ್ ನೀಡಿದೆ.

ಇಲ್ಲಿನ ಲುಸೈಲ್ ಸ್ಟೇಡಿಯಂನಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಗೋಲುಗಳಿಂದ ಜಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸಲೆಹ್ ಅಲ್‌ಶೆಹ್ರಿ ಮತ್ತು ಸಲೇಮ್ ಅಲ್ದಾವ್ಸರಿ ತಲಾ ಒಂದು ಗೋಲು ಗಳಿಸುವ ಮೂಲಕ ಸೌದಿ ಅರೇಬಿಯಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದ್ದ ಅರ್ಜೆಂಟೀನಾಗೆ ಮೊದಲನೇ ಪಂದ್ಯದಲ್ಲೇ ಮುಖಭಂಗವಾಗಿದೆ.

IND vs NZ: ಮಳೆಯಿಂದಾಗಿ ಟೈನಲ್ಲಿ ಅಂತ್ಯಗೊಂಡ ಮೂರನೇ ಟಿ20 ಪಂದ್ಯ, ಸರಣಿ ಗೆದ್ದ ಭಾರತIND vs NZ: ಮಳೆಯಿಂದಾಗಿ ಟೈನಲ್ಲಿ ಅಂತ್ಯಗೊಂಡ ಮೂರನೇ ಟಿ20 ಪಂದ್ಯ, ಸರಣಿ ಗೆದ್ದ ಭಾರತ

ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿ ಪಂದ್ಯದ ಆರಂಭದಲ್ಲೇ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಅರ್ಜೆಂಟೀನಾ ಸುಲಭವಾಗಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ತಿರುಗಿಬಿದ್ದ ಸೌದಿ ಅರೇಬಿಯಾ ಅರ್ಜೆಂಟೀನಾ ರಕ್ಷಣಾವಿಭಾಗವನ್ನು ಛಿದ್ರಗೊಳಿಸಿ ಎರಡು ಗೋಲು ದಾಖಲಿಸಿ ಇತಿಹಾಸ ಸೃಷ್ಟಿಸಿದೆ.

ಸಲೆಹ್ ಅಲ್‌ಶೆಹ್ರಿ 48ನೇ ನಿಮಿಷದಲ್ಲಿ ಮೊದಲನೇ ಗೋಲು ಗಳಿಸುವ ಮೂಲಕ 1-1 ಗೋಲಿನಿಂದ ಆಟದಲ್ಲಿ ಸಮಬಲ ಸಾಧಿಸಿದರು. ಅದಾದ ಕೇವಲ ಐದು ನಿಮಿಷದಲ್ಲೇ ಸಲೇಮ್ ಅಲ್ದಾವ್ಸರಿ ಸೌದಿ ಅರೇಬಿಯಾ ಪರವಾಗಿ 2ನೇ ಗೋಲು ಗಳಿಸಿ ಫುಟ್ಬಾಲ್ ಲೋಕವನ್ನು ದಂಗುಬಡಿಸಿದರು.

ಅಲ್ಲಿಂದ ಕೊನೆಯ ಕ್ಷಣದವರೆಗೂ ಅರ್ಜೆಂಟೀನಾ ಒಂದು ಗೋಲು ಗಳಿಸಲು ಕೂಡ ಸಾಧ್ಯವಾಗದಂತೆ ಬಲಿಷ್ಠ ರಕ್ಷಣಾ ಕೋಟೆ ನಿರ್ಮಿಸಿದ ಸೌದಿ ಅರೇಬಿಯಾ, ಅವಿಸ್ಮರಣೀಯ ವಿಜಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿತು.

Biggest Upset In Fifa World Cup 2022: Saudi Arabia Stuns Argentina With 2-1 Defeat

ತಾರಾ ಆಟಗಾರರ ದಂಡನ್ನೇ ಹೊಂದಿದ್ದ ಅರ್ಜೆಂಟೀನಾ

2 ಬಾರಿ ವಿಶ್ವಕಪ್ ಚಾಂಪಿಯನ್, ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿ ಅಜೆಂಟೀನಾ ತಂಡದಲ್ಲಿ ಲಿಯೋನೆಲ್ ಮೆಸ್ಸಿ, ರೊಡ್ರಿಗೊ ಪೌಲ್, ಮಾರ್ಟಿನೆಜ್, ಡಿ ಮಾರಿಯ, ಪೌಲೊ ಡಿಬಾಲ ಸೇರಿದಂತೆ ಬಲಿಷ್ಠ ಆಟಗಾರರ ದಂಡೇ ಇತ್ತು. ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ತಂಡದ ನಾಯಕರಾಗಿ ತಂಡಕ್ಕೆ ಮೊದಲ ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ತಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.

ಅರ್ಜೆಂಟೀನಾ ತಂಡದ ರಕ್ಷಣಾ ಪಡೆ ದುರ್ಬಲವಾಗಿದೆ ಎನ್ನುವ ವಾದವಿತ್ತು, ಇದರ ಸದುಪಯೋಗ ಪಡೆದುಕೊಂಡ ಸೌದಿ ಅರೇಬಿಯಾ ಅರ್ಜೆಂಟೀನಾ ರಕ್ಷಣಾವಲಯವನ್ನು ಛಿದ್ರಗೊಳಿಸಿತು. 2-1 ಗೋಲುಗಳಿಂತ ಮುನ್ನಡೆ ಸಾಧಿಸಿದ ಬಳಿಕ, ಸೌದಿ ಅರೇಬಿಯಾ ಅರ್ಜೆಂಟೀನಾ ತಂಡಕ್ಕೆ ಗೋಲು ಗಳಿಸಲು ಯಾವ ಅವಕಾಶವನ್ನು ನೀಡಲಿಲ್ಲ. ಭದ್ರ ರಕ್ಷಣಾ ಕೋಟೆಯನ್ನು ಕಟ್ಟುವ ಮೂಲಕ ಬಲಿಷ್ಠ ಅರ್ಜೆಂಟೀನಾವನ್ನು ತಬ್ಬಿಬ್ಬುಗೊಳಿಸಿತು.

ಅರ್ಹತಾ ಸುತ್ತಿನ 12 ಪಂದ್ಯಗಳಲ್ಲಿ ಸೌದಿ ಅರೇಬಿಯಾ ಒಂದೇ ಒಂದೂ ಗೋಲನ್ನು ಬಿಟ್ಟುಕೊಟ್ಟಿರಲಿಲ್ಲ, ಇದೇ ಸೌದಿ ಅರೇಬಿಯಾದ ದೊಡ್ಡ ಬಲವಾಗಿತ್ತು.

Story first published: Tuesday, November 22, 2022, 18:24 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X