ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ಕೇವಲ ಒಂದು ತಂಡವಲ್ಲ, ಒಂದು ಕುಟುಂಬ: WTC ಸೋಲಿನ ನಂತರ ವಿರಾಟ್ ಕೊಹ್ಲಿ ಮಾತು

This isn’t just a team, it’s a family Team India skipper Virat Kohli after WTC final loss

ಸೌಥಾಂಪ್ಟನ್, ಜೂನ್ 25: "ಇದು ಕೇವಲ ಒಂದು ತಂಡವಲ್ಲ, ಇದೊಂದು ಕುಟುಂಬ" ಹೀಗಂತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಫೈನಲ್ ಪಂದ್ಯದ ಅಂತ್ಯದ ಬಳಿಕ ಟ್ವಿಟ್ಟರ್‌ನಲ್ಲಿ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ, ಈ ಸಂದರ್ಭದಲ್ಲಿ ಅವರು ತಂಡದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. "ಇದು ಕೇವಲ ಒಂದು ತಂಡವಲ್ಲ. ಇದೊಂದು ಕುಟುಂಬ. ನಾವು ಜೊತೆಯಾಗಿ ಮುಂದುವರಿಯಬೇಕು" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿ

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಒಂದು ಸೋಲು ಎರಡು ವರ್ಷಗಳ ಕಠಿಣ ಪರಿಶ್ರಮವನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದರು. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ವಿಜೇತ ತಂಡವನ್ನು ಮೂರು ಪಂದ್ಯಗಳಲ್ಲಿ ನಿರ್ಧರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

"ಅತ್ಯುತ್ತಮ ಟೆಸ್ಟ್ ತಂಡವನ್ನು ಒಂದೇ ಪಂದ್ಯದಲ್ಲಿ ನಿರ್ಧರಿಸುವ ವಿಚಾರವಾಗಿ ನನಗೆ ಸಮ್ಮತಿಯಿಲ್ಲ. ಅದು ಟೆಸ್ಟ್ ಸರಣಿಯಾಗಿದ್ದರೆ ಮೂರು ಪಂದ್ಯಗಳ ಸರಣಿಯಾಗಿರಬೇಕು. ಇದರಲ್ಲಿ ತಂಡಕ್ಕೆ ಮತ್ತೆ ಹಿಡಿತ ಸಾಧಿಸಲು ಅಥವಾ ಮತ್ತಷ್ಟು ಹಿಂದುಳಿಯುತ್ತದೆ" ಎಂದು ಪಂದ್ಯದ ಅಂತ್ಯದ ನಂತರದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

WTC ಫೈನಲ್‌ ವೇಳೆಯ ವೈರಲ್ ಪೋಸ್ಟ್‌ ಬಳಸಿ ಟ್ವೀಟ್ ಮಾಡಿದ 'ಮುಂಬೈ ಪೊಲೀಸ್'!WTC ಫೈನಲ್‌ ವೇಳೆಯ ವೈರಲ್ ಪೋಸ್ಟ್‌ ಬಳಸಿ ಟ್ವೀಟ್ ಮಾಡಿದ 'ಮುಂಬೈ ಪೊಲೀಸ್'!

ಸೌಥಾಂಪ್ಟನ್‌ನ ಏಜಸ್‌ಬೌಲ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಳೆಯ ಅಡ್ಡಿಯ ನಡುವೆಯೂ ನಡೆದ ಆಟದಲ್ಲಿ ವಿರಾಟ್ ಕೊಹ್ಲಿ ಬಳಗ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಈ ಮೂಲಕ ಟೀಮ್ ಇಂಡಿಯಾ ಮತ್ತೊಂದು ಐಸಿಸಿ ಟ್ರೋಫಿಯಿಂದ ವಂಚಿತವಾಯಿತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಈವರೆಗೆ ಯಾವುದೇ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಸಫಲವಾಗಿಲ್ಲ.

Story first published: Friday, June 25, 2021, 9:02 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X