ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್, ಏಷ್ಯಾಕಪ್‌ನಲ್ಲಿ ಈತ ಭಾರತ ತಂಡಕ್ಕೆ ಹೇಳಿಮಾಡಿಸಿದ ಆಯ್ಕೆ; ಕನೇರಿಯಾ

This Player Will Be Good Selection For the Indian Team in T20 World Cup, Asia Cup Says Danish Kaneria

ಇಂಗ್ಲೆಂಡ್ ಪ್ರವಾಸದ ಯಶಸ್ಸಿನ ನಂತರ ಏಕದಿನ ಮತ್ತು ಟಿ20 ಸರಣಿ ಆಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಕೆರಿಬಿಯನ್ ನಾಡಿನಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಜಯಿಸುವುದರ ಮೂಲಕ 2-0 ಅಂತರದಲ್ಲಿ ಸರಣಿ ಗೆದ್ದಿದೆ.

ಏಕದಿನ ಸರಣಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಆಡಲಿದೆ. ಇದು ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ದೃಷ್ಟಿಯಿಂದ ಪ್ರಮುಖವೆನಿಸಿದೆ. ಅದೇ ರೀತಿ ಈ ಎರಡು ಟೂರ್ನಿಗಳಿಗೆ ಭಾರತ ತಂಡವನ್ನು ಅಣಿಗೊಳಿಸುವ ಪೂರ್ವಭಾವಿ ಕೆಲಸವಾಗಿದೆ.

IND vs WI 2nd ODI: ಟೀಂ ಇಂಡಿಯಾ ಪ್ರದರ್ಶನ ನೋಡಿ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್ ಮತ್ತು ಸೆಪ್ಟೆಂಬರ್‌ನಲ್ಲಿ ಯುಎಇನಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಅರ್ಷದೀಪ್ ಸಿಂಗ್ ಹೇಳಿಮಾಡಿಸಿದ ಆಯ್ಕೆಯಾಗಬಹುದು ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಸಲಹೆ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್‌ಗಾಗಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ

ಪಂಜಾಬ್ ಕಿಂಗ್ಸ್‌ಗಾಗಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ

ಎಡಗೈ ವೇಗಿ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್‌ಗಾಗಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಪಂದ್ಯಾವಳಿಯಲ್ಲಿನ ಅವರ ಪ್ರದರ್ಶನಗಳು ಐರ್ಲೆಂಡ್ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಆಡುವ 11ರ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿತು.

ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರಾಷ್ಟ್ರೀಯ ತಂಡಕ್ಕೆ ಆಡಿದ ತನ್ನ ಚೊಚ್ಚಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 3.3 ಓವರ್‌ಗಳಲ್ಲಿ ಒಂದು ಮೇಡನ್ ಸೇರಿದಂತೆ 18 ರನ್ ನೀಡಿ ಎರಡು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲಿ, ಭಾರತ ತಂಡವು ಅವೇಶ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅರ್ಷದೀಪ್ ಸಿಂಗ್‌ಗೆ ಅವಕಾಶ ಸಿಗಲಿಲ್ಲ ಎಂದು ಅನೇಕ ಅಭಿಮಾನಿಗಳು ಅತೃಪ್ತರಾಗಿದ್ದರು.

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅಮೂಲ್ಯ ಆಸ್ತಿ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅಮೂಲ್ಯ ಆಸ್ತಿ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದಲ್ಲಿರಲು 23 ವರ್ಷದ ಆಟಗಾರನನ್ನು ಅನೇಕರು ಈಗಾಗಲೇ ಬೆಂಬಲಿಸಿದ್ದಾರೆ ಮತ್ತು ಇತ್ತೀಚಿಗೆ ಪಾಕಿಸ್ತಾನ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು, "ಅರ್ಷದೀಪ್ ಸಿಂಗ್ ಆಗಸ್ಟ್‌ ಅಂತ್ಯದಲ್ಲಿ ನಡೆಯುವ ಏಷ್ಯಾಕಪ್ ಮತ್ತು ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅಮೂಲ್ಯ ಆಸ್ತಿಯಾಗಬಹುದು ಎಂದು ಹೇಳಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ 23ರ ಹರೆಯದ ಆಟಗಾರರು ತಂಡದಲ್ಲಿ ಇರಲಿದ್ದಾರೆ," ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.

ಅರ್ಷದೀಪ್ ಸಿಂಗ್ ಮೂರನೇ ಏಕದಿನ ಪಂದ್ಯ ಆಡಲಿದ್ದಾರೆ

ಅರ್ಷದೀಪ್ ಸಿಂಗ್ ಮೂರನೇ ಏಕದಿನ ಪಂದ್ಯ ಆಡಲಿದ್ದಾರೆ

"ನನ್ನ ಮಾತುಗಳನ್ನು ಗುರುತಿಸಿ. ಅರ್ಷದೀಪ್ ಸಿಂಗ್ ಮೂರನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ ಮತ್ತು ಪ್ರಭಾವಿ ಪ್ರದರ್ಶನ ನೀಡಲಿದ್ದಾರೆ. ಅರ್ಷದೀಪ್ ಬೌಲಿಂಗ್ ಕಲೆಯನ್ನು ಹೊಂದಿದ್ದು, ಬೌಲಿಂಗ್ ಮಾಡುವಾಗ ಅವರು ತಮ್ಮ ಮನಸ್ಸನ್ನು ಬಳಸುತ್ತಾರೆ. ಅವರು ಸಂವೇದನಾಶೀಲವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ವಿಕೆಟ್‌ಗಳನ್ನು ಹೇಗೆ ತೆಗೆದುಕೊಳ್ಳಬೇಕೆಂದು ತಿಳಿದಿದ್ದಾರೆ. ಅವರು ಟಿ20 ವಿಶ್ವಕಪ್‌ಗೆ ಮತ್ತು ಏಷ್ಯಾ ಕಪ್‌ಗೆ ಭಾರತೀಯ ತಂಡಕ್ಕೆ ಅದ್ಭುತ ಆಯ್ಕೆಯಾಗಿರಬಹುದು. ಏಷ್ಯಾಕಪ್ ದುಬೈನಲ್ಲಿ ನಡೆಯಲಿದ್ದು, ಅವರು ಎಡಗೈ ವೇಗಿಯಾಗಿ ಯಶಸ್ವಿಯಾಗಬಹುದು," ಎಂದು ಕನೇರಿಯಾ ಹೇಳಿದ್ದಾರೆ.

ಭಾರತದ ಇನ್ನೊಬ್ಬ ಎಡಗೈ ವೇಗಿ ಟಿ.ನಟರಾಜನ್ ಕೂಡ ಮತ್ತೆ ಭಾರತ ತಂಡಕ್ಕಾಗಿ ಆಡುವುದನ್ನು ನೋಡಲು ಬಯಸುತ್ತೇನೆ,'' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕನೇರಿಯಾ ಹೇಳಿದರು.

ನಟರಾಜನ್ ಮತ್ತೆ ಭಾರತಕ್ಕಾಗಿ ಆಡುವುದನ್ನು ನೋಡಲು ಬಯಸುತ್ತೇನೆ

ನಟರಾಜನ್ ಮತ್ತೆ ಭಾರತಕ್ಕಾಗಿ ಆಡುವುದನ್ನು ನೋಡಲು ಬಯಸುತ್ತೇನೆ

"ನಟರಾಜನ್ ಮತ್ತೆ ಭಾರತಕ್ಕಾಗಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿದಂತೆಯೇ ಅವರು ಪ್ರಭಾವ ಬೀರಬಹುದು. ಅವರು ಅದ್ಭುತ ಬೌಲರ್, ಆದರೆ ಪ್ರಸ್ತುತ ಭಾರತವು ನಂಬಲಾಗದ ಬೌಲಿಂಗ್ ಪಡೆಯನ್ನು ಹೊಂದಿದೆ. ತಂಡದ ನಿರ್ವಹಣೆಯು ತನ್ನ ಬೌಲರ್‌ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು," ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈಗಾಗಲೇ 2-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನೂ ಕೂಡ ಗೆದ್ದು, ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡುವತ್ತ ಕಣ್ಣಿಟ್ಟಿದ್ದರೆ, ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ಗೆದ್ದು ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳುವ ಯೋಜನೆಯಲ್ಲಿದೆ.

Story first published: Tuesday, July 26, 2022, 15:27 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X