ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಕ್ರಿಕೆಟಿಗರು ಐಪಿಎಲ್ ಬದಲು ಪ್ರಥಮ ದರ್ಜೆ ಕ್ರಿಕೆಟ್‌ಗೆ ಆದ್ಯತೆ ನೀಡಲಿ: ಚಾಪೆಲ್

Top Australian Cricketers Should Choose Domestic Competition Over Ipl: Ian Cappell

ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಆಸ್ಟ್ರೇಲಿಯಾ ಆಟಗಾರರ ನಿರ್ಧಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಐಪಿಎಲ್ ಕಡೆಗೆ ಹೆಚ್ಚಿ ಗಮನ ನೀಡುತ್ತಿದ್ದಾರೆ. ಆದರೆ ಅವರು ಅದರ ಬದಲು ಪ್ರಥಮ ದರ್ಜೆ ಕ್ರಿಕೆಟ್‌ನತ್ತ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರ ಆರ್ಥಿಕ ಅಗತ್ಯಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಆದರೆ ಆಸ್ಟ್ರೇಲಿಯಾದ ಅಗ್ರ ಕ್ರಿಕೆಟಿಗರು ಐಪಿಎಲ್ ಮೇಲೆ ಸಾಕಷ್ಟು ಆದ್ಯತೆಯನ್ನು ನೀಡುತ್ತಾರೆ ಎಂದಿದ್ದಾರೆ. ಆಸ್ಟ್ರೇಲಿಯಾದ 13 ಆಟಗಾರರು ಐಪಿಎಲ್‌ನಲ್ಲಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ವಿಶ್ವಕಪ್ ಮುಂದೂಡಿಕೆ ಸಾಧ್ಯತೆ : ಬಿಸಿಸಿಐ ವಿರುದ್ಧ ಆಸಿಸ್ ಮಾಧ್ಯಮಗಳ ಗಂಭೀರ ಆರೋಪವಿಶ್ವಕಪ್ ಮುಂದೂಡಿಕೆ ಸಾಧ್ಯತೆ : ಬಿಸಿಸಿಐ ವಿರುದ್ಧ ಆಸಿಸ್ ಮಾಧ್ಯಮಗಳ ಗಂಭೀರ ಆರೋಪ

ಕೊರೊನಾ ವೈರಸ್‌ನ ಕಾರಣದಿಂದಾಗಿ ವಿಶ್ವಕಪ್ ಮುಂದೂಡಿದರೆ ಆ ಸಮಯದಲ್ಲಿ ಐಪಿಎಲ್ ನಡೆಯಲಿದ ಎಂದು ಚರ್ಚೆಯಾಗುತ್ತಿದೆ. ಹಾಗಾದರೆ ಕೂಡ ಆ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌ನ ಜೊತೆಗೆ ಘರ್ಷಣೆಯಾಗುತ್ತದೆ. ಅಗ್ರ ಆಟಗಾರರು ಪ್ರಥಮ ದರ್ಜೆ ಕ್ರಿಕೆಟನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ನಿಂದ ಹೆಚ್ಚಿನ ಹಣವನ್ನು ಗಳಿಸದ ಆಟಗಾರರಾಗಿದ್ದರೆ, ಅವರಿಗೆ ಐಪಿಎಲ್‌ನಿಂದ ದಿಡ್ಡ ಮೊತ್ತದ ಹಣ ಬರುವ ಹಾಗಿದ್ದರೆ ಅಂತಾ ಆಟಗಾರರ ಬಗ್ಗೆ ನಾನು ಸಹಾನುಭೂತಿ ಹೊಂದಬಹುದು. ಆದರೆ ಅಗ್ರ ಎಲ್ಲಾ ಆಟಗಾರರಿಗೂ ಉತ್ತಮ ಗಳಿಕೆಯನ್ನು ಆಸ್ಟ್ರೇಲಿಯಾದಲ್ಲೆ ಮಾಡುತ್ತಿದ್ದಾರೆ ಎಂದಿದ್ದಾರೆ ಇಯಾನ್ ಚಾಪೆಲ್.

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

ಅಗ್ರ ಆಸ್ಟ್ರೇಲಿಯಾ ಆಟಗಾರರ ಈ ಬಗ್ಗೆ ಗಂಭೀರವಾಗಬೇಕು. ಅವರ ಮೊದಲ ಆದ್ಯತೆ ಆಸ್ಟ್ರೇಲಿಯಾವಾಗಿರಬೇಕು ಎಂದು ಚಾಪೆಲ್ ಹೇಳಿದ್ದಾರೆ. ಈ ಮಧ್ಯೆ ಇತ್ತೀಚೆಗೆ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಪ್ಯಾಟ್ ಕಮ್ಮಿನ್ಸ್ ಮತ್ತು ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಆಡಲು ಸಾಕಷ್ಟು ಕಾತುರಗೊಂಡಿರುವುದಾಗಿ ಹೇಳಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.

Story first published: Friday, May 22, 2020, 20:06 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X