ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

Top five fastest fifties records in T20Is history

ಬೆಂಗಳೂರು, ಮೇ 21: ಚುಟುಕು ಕ್ರಿಕೆಟ್ ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ, ಅರ್ಧ ಶತಕಗಳನ್ನು ದಾಖಲಿಸಿರುವ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್‌ ಜಗತ್ತಿನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಈ ಕ್ರಿಕೆಟ್‌ ಮಾದರಿಯಲ್ಲಿ ಬೇಗನೇ ಇನ್ನಿಂಗ್ಸ್‌ ಮುಗಿದು ಹೋಗುವುದರಿಂದ ಬ್ಯಾಟಿಂಗ್‌ಗೆ ಬರುವ ದಾಂಡಿಗರು ಚುರುಕಿನ ಚತುರ ಆಟ ಪ್ರದರ್ಶಿಸಬೇಕಾಗುತ್ತದೆ. ಕ್ರೀಸಿನಲ್ಲಿ ಉಳಿಯಲು ಸಿಗುವ ಅಲ್ಪ ಕಾಲಾವಧಿಯಲ್ಲೇ ಹೆಚ್ಚು ರನ್ ಕಲೆ ಹಾಕಬೇಕಾಗುತ್ತದೆ. ಹೀಗಾಗಿ ಈ ಮಾದರಿಯಲ್ಲಿ ಶತಕ, ಅರ್ಧ ಶತಕ ಬಾರಿಸೋದು ಹೆಚ್ಚು ಕಷ್ಟಕರ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್

ಸ್ಫೋಟಕ ಬ್ಯಾಟಿಂಗ್‌ಗೆ ಖ್ಯಾತರಾದ ಅನೇಕ ಆಟಗಾರರು ಟಿ20ಐ ಕ್ರಿಕೆಟ್‌ ಮಾದರಿಯಲ್ಲಿ ಮಿಂಚಿದ್ದನ್ನು ನೋಡಿದ್ದೇವೆ. ಅತೀ ಕಡಿಮೆ ಎಸೆತಗಳಲ್ಲಿ ಶತಕ ಅರ್ಧ ಶತಕಗಳನ್ನು ಪೂರೈಸಿ ಬೆರಗು ಮೂಡಿಸಿದ, ವಿಶ್ವ ದಾಖಲೆ ನಿರ್ಮಿಸಿದ ಒಂದಿಷ್ಟು ಬ್ಯಾಟ್ಸ್‌ಮನ್‌ಗಳೂ ಇದ್ದಾರೆ.

ಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪ

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ವೇಗದ ಅರ್ಧ ಶತಕ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಮಾಹಿತಿ ಇಲ್ಲಿದೆ.

1. ಯುವರಾಜ್ ಸಿಂಗ್

1. ಯುವರಾಜ್ ಸಿಂಗ್

'ಕೆಚ್ಚೆದೆಯ ಮಹಾರಾಜ'. 'ಸಿಕ್ಸರ್‌ ಕಿಂಗ್' ಎಂಬ ಹೆಸರುಗಳಿರುವ ಯುವರಾಜ್ ಸಿಂಗ್ ಅತೀ ವೇಗದ ಅರ್ಧ ಶತಕಕ್ಕಾಗಿ ವಿಶ್ವಖ್ಯಾತರಾದವರು. 2007ರಲ್ಲಿ ಅಂದರೆ ಇಂದಿಗೆ ಸುಮಾರು 13 ವರ್ಷಗಳಿಗೆ ಹಿಂದೆ ಯುವಿ ಅತೀ ವೇಗ ಅರ್ಧ ಶತಕ ದಾಖಲೆ ನಿರ್ಮಿಸಿದ್ದರು. 2007ರ ವರ್ಲ್ಡ್ ಟಿ20 ಪಂದ್ಯದಲ್ಲಿ ಪಂಜಾಬ್‌ ಕಾ ಶೇರ್ ಯುವರಾಜ್ ಇಂಗ್ಲೆಂಡ್ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಇಂಗ್ಲೆಂಡ್ ಬೌಲರ್ ಆ್ಯಂಡ್ರ್ಯೂ ಫ್ಲಿಂಟಾಫ್ ಕೆಣಕಿದ್ದರಿಂದ ಕೆರಳಿದ ಯುವಿ, ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಪ್ರತೀ ಸೆತೆತಕ್ಕೂ ಸಿಕ್ಸ್ ಚಚ್ಚುತ್ತಾ ಹೋಗಿದ್ದರು. ಆವತ್ತು ಒಟ್ಟಿಗೆ 13 ಎಸೆತಗಳಲ್ಲಿ ಸಿಂಗ್ 58 ರನ್‌ಗಳನ್ನು ಕಲೆ ಹಾಕಿದ್ದರು. ಆಗ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ದಾಖಲಾಗಿತ್ತು. ಈ ವೇಳೆ 3 ಬೌಂಡರಿ, 7 ಸಿಕ್ಸರ್‌ಗಳು ಯುವಿ ಬ್ಯಾಟಿಂದ ಸಿಡಿದಿತ್ತು. ಪಂದ್ಯದಲ್ಲಿ ಟೀಮ್ ಇಂಡಿಯಾ 18 ರನ್‌ಗಳಿಂದ ಗೆದ್ದಿತ್ತು.

2. ಮಿರ್ಝಾ ಎಹ್ಸಾನ್

2. ಮಿರ್ಝಾ ಎಹ್ಸಾನ್

ಆಸ್ಟ್ರಿಯಾ ಆಟಗಾರ ಮಿರ್ಝಾ ಎಹ್ಸಾನ್ ಅತೀವೇಗದ ಟಿ20 ಅರ್ಧ ಶತಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 2019ರಲ್ಲಿ ಇಲ್ಫೊವ್ ಕೌಂಟಿಯಲ್ಲಿ ನಡೆದಿದ್ದ ಐಸಿಸಿ ಕಂಟಿನೆಂಟಲ್ ಕಪ್‌ ಪಂದ್ಯದಲ್ಲಿ ಲಕ್ಸೆಂಬರ್ಗ್‌ ವಿರುದ್ಧ 13 ಎಸೆತಗಳಲ್ಲಿ ಎಹ್ಸಾನ್ ಅರ್ಧ ಶತಕ ಪೂರೈಸಿದ್ದರು. ಆವತ್ತು 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಹ್ಸಾನ್ 14 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿದ್ದರು. ಇರದಲ್ಲಿ 2 ಫೋರ್, 7 ಸಿಕ್ಸರ್‌ಗಳು ಸೇರಿದ್ದವು. ಪಂದ್ಯದಲ್ಲಿ ಆಸ್ಟ್ರಿಯಾ 135 ರನ್‌ಗಳಿಂದ ಗೆದ್ದಿತ್ತು.

3. ಕಾಲಿನ್ ಮುನ್ರೋ

3. ಕಾಲಿನ್ ಮುನ್ರೋ

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಜನವರಿ 10, 2016ರಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕಾಲಿನ್ ಮುನ್ರೋ ಶ್ರೀಲಂಕಾ ವಿರುದ್ಧ 14 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಕೇವಲ 16 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಮುನ್ರೋ 357.14ರ ಸ್ಟ್ರೈಕ್ ರೇಟ್‌ನಂತೆ 1 ಬೌಂಡರಿ, 7 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಪಂದ್ಯದಲ್ಲಿ ನ್ಯೂಜಿಲೆಂಡ್ 143 ಸಾಧಾರಣ ರನ್ ಗುರಿಯನ್ನು ಸುಲಭವಾಗಿ ತಲುಪಿತ್ತು. ಮುನ್ರೋ ಪಂದ್ಯಶ್ರೇಷ್ಠರೆನಿಸಿದ್ದರು.

4. ಫೈಸಲ್ ಖಾನ್

4. ಫೈಸಲ್ ಖಾನ್

2019ರಲ್ಲಿ ಎಸಿಸಿ ವೆಸ್ಟರ್ನ್ ರೀಜನ್ ಟಿ20 ಸ್ಪರ್ಧೆಯಲ್ಲಿ ಕುವೈತ್ ವಿರುದ್ಧ ಸೌದಿ ಅರೇಬಿಯಾದ ಫೈಸಲ್ ಖಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಆವತ್ತು ಕೇವಲ 15 ಎಸೆತಗಳಲ್ಲಿ ಖಾನ್, ಅರ್ಧ ಶತಕ ಗಳಿಸಿದ್ದರು. ಅಲ್ಲದೆ ಕೇವಲ 28 ಎಸೆತಗಳಲ್ಲಿ ಅಜೇಯ 83 ರನ್‌ ಬಾರಿಸಿದ್ದರು. ಆವತ್ತು ಫೈಸಲ್ 7 ಬೌಂಡರಿಗಳನ್ನು 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅಂದು ಸೌದಿ ಅರೇಬಿಯಾ ಎದುರಾಳಿ ನೀಡಿದ್ದ 136 ರನ್ ಗುರಿಯನ್ನು 7 ವಿಕೆಟ್‌ಗಳು ಉಳಿದಿರುವಾಗಲೇ ತಲುಪಿತ್ತು.

5. ಶೈ ಹೋಪ್

5. ಶೈ ಹೋಪ್

2018ರ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ನ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಶೈ ಹೋಪ್ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ವೆಸ್ಟ್ ಇಂಡೀಸ್‌ನಲ್ಲೇ ನಡೆದಿದ್ದ ಪಂದ್ಯದಲ್ಲಿ ಹೋಪ್ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ರನ್ ಕಲೆ ಹಾಕಿದ್ದರು. 130 ರನ್ ಗುರಿ ಬೆನ್ನಟ್ಟಿದ್ದ ವಿಂಡೀಸ್ ಪರ 23 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. 239ರ ಸ್ಟ್ರೈಕ್ ರೇಟ್‌ನಲ್ಲಿ ಹೋಪ್ ಆಡಿದ್ದರಿಂದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್‌ ಗೆಲುವನ್ನಾಚರಿಸಿತ್ತು.

Story first published: Thursday, May 21, 2020, 16:07 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X