2017: ಟ್ವಿಟ್ಟರ್ ಜನಪ್ರಿಯತೆ ಟಾಪ್ 10 ಪಟ್ಟಿ ಸೇರಿದ ಕೊಹ್ಲಿ

Posted By:

ಬೆಂಗಳೂರು, ಡಿಸೆಂಬರ್ 07: ಜನಪ್ರಿಯ ಸಾಮಾಜಿಕ ಜಾಲ ತಾಣ ಮೈಕ್ರೋ ಬ್ಲಾಗಿಂಗ್ ತಾಣವಾಗಿರುವ ಟ್ವಿಟ್ಟರ್ ತನ್ನ ಲೋಕದಲ್ಲಿ ಕಳೆದ ವರ್ಷ ಕಂಡ ಟ್ರೆಂಡಿಂಗ್, ಜನಪ್ರಿಯ ವ್ಯಕ್ತಿಗಳ ಟಾಪ್ 10 ಪಟ್ಟಿಯನ್ನು ಪ್ರಕಟಿಸಲು ಆರಂಭಿಸಿದೆ.

ಭಾರತದಲ್ಲಿ ನಿರೀಕ್ಷೆಯಂತೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಇದಲ್ಲದೆ, ಅತೀ ಹೆಚ್ಚು ಟ್ವೀಟ್ ಮಾಡಿರುವ ಜಾಗತಿಕ ಚುನಾಯಿತ ಪ್ರತಿನಿಧಿಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್ ಹಾಗೂ ರಾಜಕಾರಣಿಗಳನ್ನು ಹೊಂದಿರುವ ಟಾಪ್ 10 ಪಟ್ಟಿಯಲ್ಲಿ ಈ ಬಾರಿ ಅಚ್ಚರಿಯೆಂಬಂತೆ ಇಬ್ಬರು ಕ್ರಿಕೆಟರ್ ಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಅವರು 7ನೇ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.

ಹಿಂಬಾಲಕರ ಗಳಿಕೆ: ಕೊಹ್ಲಿ ಎಲ್ಲರಿಗಿಂತ ಮುಂದು

ಹಿಂಬಾಲಕರ ಗಳಿಕೆ: ಕೊಹ್ಲಿ ಎಲ್ಲರಿಗಿಂತ ಮುಂದು

2016ರಲ್ಲಿ 12.9 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದ ವಿರಾಟ್ ಕೊಹ್ಲಿ ಅವರು ಈ ವರ್ಷ ಈ ವೇಳೆಗೆ ಶೇ 61ರಷ್ಟು ಪ್ರಗತಿ ಕಂಡಿದ್ದು, 20.8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ವರ್ಷದಲ್ಲಿ ಶೇ61ರಷ್ಟು ಪ್ರಗತಿ ಕಂಡಿದ್ದು, ಈ ವಿಷಯದಲ್ಲಿ ಮೋದಿ(ಶೇ 52), ಸಚಿನ್ ತೆಂಡೂಲ್ಕರ್(ಶೇ 56) ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಟಾಪ್ 10: ವಿರಾಟ್ ಕೊಹ್ಲಿ

ಟಾಪ್ 10: ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು20.8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿ ಪ್ರವೇಶಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಹ ಆಟಗಾರರ ಜತೆಗಿನ ಸೆಲ್ಫಿ, ವಿಡಿಯೋ, ಪಂದ್ಯದ ಗೆಲುವಿನ ಸಂಭ್ರಮದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಟಾಪ್ 9 : ಹೃತಿಕ್ ರೋಷನ್

ಟಾಪ್ 9 : ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್ ಅವರು 20.9 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಟಾಪ್ 8 : ಸಚಿನ್ ತೆಂಡೂಲ್ಕರ್

ಟಾಪ್ 8 : ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು 21.8 ಮಿಲಿಯನ್ ಹಿಂಬಾಲಕರನ್ನು ಗಳಿಸಿದ್ದಾರೆ.

ಟಾಪ್ 7 : ದೀಪಿಕಾ ಪಡುಕೋಣೆ

ಟಾಪ್ 7 : ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು 22.1 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

#6 ಅಮೀರ್ ಖಾನ್

#6 ಅಮೀರ್ ಖಾನ್

ನಟ, ನಿರ್ದೇಶಕ, ನಿರ್ಮಾಪಕ ಅಮೀರ್ ಖಾನ್ ಅವರು ಟ್ವಿಟ್ಟರ್ ಲೋಕಕ್ಕೆ 2009ರ ನವೆಂಬರ್ ನಲ್ಲಿ ಎಂಟ್ರಿ ಕೊಟ್ಟರು. ಇಲ್ಲಿ ತನಕ 22.4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. 513-ಟ್ವೀಟ್ ಗಳ ಸಂಖ್ಯೆ , 9 ಖಾತೆಗಳನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಕೊನೆಯದಾಗಿ ಟ್ವೀಟ್ ಮಾಡಿದ್ದು ಡಿಸೆಂಬರ್ 04.

#5 ಅಕ್ಷಯ್ ಕುಮಾರ್

#5 ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ಅವರು ನಟನೆ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳ ಮೂಲಕ ಜನಾನುರಾಗಿ ಎನಿಸಿಕೊಂಡಿದ್ದಾರೆ. ಹೀಗಾಗಿ, ಅವರ ಹಿಂಬಾಲಕರ ಸಂಖ್ಯೆ ತಕ್ಕಮಟ್ಟಿಗೆ ಪ್ರಗತಿ ಕಾಣುತ್ತಲೇ ಇದೆ. ಏಪ್ರಿಲ್ 2009ರಂದು ಟ್ವೀಟ್ ಲೋಕ ಸೇರಿದರು. ಸುಮಾರು 16 ಸಾವಿರಕ್ಕೂ ಅಧಿಕ ಟ್ವೀಟ್ ಮಾಡಿದ್ದಾರೆ. 25 ಖಾತೆಗಳನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. 23 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಸಕ್ರಿಯವಾಗಿ ಟ್ವೀಟ್ ಮಾಡುತ್ತಿರುತ್ತಾರೆ.

#4 ಸಲ್ಮಾನ್ ಖಾನ್

#4 ಸಲ್ಮಾನ್ ಖಾನ್

ಬಾಲಿವುಡ್ ನ ವಿವಾದಿತ ನಟ ಸಲ್ಮಾನ್ ಖಾನ್ ಅವರು ಕೂಡಾ ಸಾಮಾಜಿಕ ಕಾರ್ಯಗಳಿಂದ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಬಿಗ್ ಬಾಸ್ ನಿರೂಪಣೆ ಕೂಡಾ ಇವರ ಜನಪ್ರಿಯತೆ ಹೆಚ್ಚಳಕ್ಕೆ ಕಾರಣವಾಗಿದೆ. ಏಪ್ರಿಲ್ 2010ರಂದು ಟ್ವೀಟ್ ಲೋಕಕ್ಕೆ ಎಂಟ್ರಿ. 28.7 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. 42.3 K ಗೂ ಅಧಿಕ ಟ್ವೀಟ್ ಮಾಡಿದ್ದಾರೆ. 22 ಖಾತೆಗಳನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಡಿಸೆಂಬರ್ 6ರಂದು ಕೊನೆಯದಾಗಿ ಟ್ವೀಟ್ ಮಾಡಿದ್ದಾರೆ.

#3 ಶಾರುಖ್ ಖಾನ್

#3 ಶಾರುಖ್ ಖಾನ್

ಕಿಂಗ್ ಖಾನ್ ಎನಿಸಿಕೊಂಡಿರುವ ನಟ ಶಾರುಖ್ ಅವರು ಟ್ವಿಟ್ಟರ್ ಲೋಕಕ್ಕೆ 2010ರ ಜನವರಿಯಲ್ಲಿ ಎಂಟ್ರಿಕೊಟ್ಟರು. 57.1 ಸಾವಿರಕ್ಕೂ ಅಧಿಕ ಟ್ವೀಟ್ ಮಾಡಿದ್ದಾರೆ. 78 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 31.1 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಕೊನೆಯ ಬಾರಿ ಡಿಸೆಂಬರ್ 03ರಂದು ಟ್ವೀಟ್ ಮಾಡಿದ್ದಾರೆ.

#2 ಅಮಿತಾಬ್ ಬಚ್ಚನ್

#2 ಅಮಿತಾಬ್ ಬಚ್ಚನ್

2010ರ ಮೇ ತಿಂಗಳಿನಲ್ಲಿ ಟ್ವಿಟ್ಟರ್ ಖಾತೆ ಆರಂಭಿಸಿದ ನಟ ಅಮಿತಾಬ್ ಬಚ್ಚನ್ ಅವರು ಅತ್ಯಂತ ಸಕ್ರಿಯವಾಗಿರುವ ಟ್ವಿಟ್ಟರ್ ಖಾತೆ ಹೊಂದಿದ್ದಾರೆ. ಸರಿ ಸುಮಾರು 60.1 Kಗೂ ಅಧಿಕ ಟ್ವೀಟ್ ಮಾಡಿದ್ದಾರೆ. 1,165 ಮಂದಿಯನ್ನು ಹಿಂಬಾಲಿಸುತ್ತಿದ್ದು, 31.6 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಅಮಿತಾಬ್ ಬಚ್ಚನ್ ಅವರ ಟ್ವೀಟ್ ಗಳು ವೈವಿಧ್ಯವಾಗಿದ್ದು, ಅಬಾಲವೃದ್ಧರನ್ನು ಸೆಳೆಯುತ್ತವೆ.

#1 ನರೇಂದ್ರ ಮೋದಿ

#1 ನರೇಂದ್ರ ಮೋದಿ

ಜಾಗತಿಕವಾಗಿ ಟ್ವೀಟ್ ಲೋಕದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸರಿ ಸುಮಾರು 17.5K ಟ್ವೀಟ್ ಮಾಡಿರುವ ಮೋದಿ ಅವರು 1,850 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 37.6 ಹಿಂಬಾಲಕರನ್ನು ಹೊಂದಿದ್ದಾರೆ. 2016ರಲ್ಲಿ ಮೋದಿ ಅವರ ಹಿಂಬಾಲಕರ ಸಂಖ್ಯೆ ಶೇ 52ರಂತೆ ಪ್ರಗತಿ ಕಂಡಿದೆ.

Story first published: Thursday, December 7, 2017, 17:40 [IST]
Other articles published on Dec 7, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ