ಮಯಾಂಕ್ ಗೆ ಕೈ ಕೊಟ್ಟ ಅದೃಷ್ಟ, ಟೀಂ ಮ್ಯಾನೇಜ್ಮೆಂಟ್ ಹಳಿದ ಫ್ಯಾನ್ಸ್

ಪ್ರತಿಭೆ ಇದ್ದು, ಸಾಧನೆ ಮಾಡಿ, ಅವಕಾಶ ಪಡೆದರೂ ಅದೃಷ್ಟ ಕೈಗೂಡದಿದ್ದರೆ ಏನು ಮಾಡುವುದು ಹೇಳಿ. ಈಗ ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರವಾಲ್ ಕಥೆಯೂ ಹೀಗೆ ಆಗಿದೆ. ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಕನಸು ನನಸಾಗಿದ್ದರೂ, ಮಯಾಂಕ್ ಅವರಿಗೆ ಇನ್ನೂ ಟೆಸ್ಟ್ ಕ್ಯಾಪ್ ಧರಿಸುವ ಕಾಲ ಕೂಡಿ ಬಂದಿಲ್ಲ.
ಹೈದರಾಬಾದ್‌ನಲ್ಲಿ ಶುಕ್ರವಾರದಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲಿಯೂ ಅಂತಿಮ ಹನ್ನೊಂದರ ಬಳಗದಲ್ಲಿ ಮಯಾಂಕ್‌ಗೆ ಸ್ಥಾನ ನೀಡಿಲ್ಲ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಎರಡನೆಯ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಬೇರೆ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ.
ಮಯಾಂಕ್ ಆರಂಭಿಕ ಆಟಗಾರರಾಗಿರುವುದರಿಂದ ಅವರಿಗೆ ಆ ಸ್ಥಾನ ಖಾಲಿ ಇಲ್ಲ. ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪೃಥ್ವಿ ಶಾಗೆ ಅವಕಾಶ ನೀಡಲೇಬೇಕು. ಇನ್ನೊಂದು ಆರಂಭಿಕ ಸ್ಥಾನಕ್ಕೆ ರಾಹುಲ್ ತ್ಯಾಗ ಮಾಡಬೇಕಾಗುತ್ತದೆ. ಇಬ್ಬರು ಹೊಸಬರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಹಸಕ್ಕೆ ಕೊಹ್ಲಿ ಮುಂದಾಗಿಲ್ಲ.
ಕೊಹ್ಲಿ ವಿರುದ್ಧವೂ ಕಿಡಿ
ತಂಡದ ಆಯ್ಕೆ ವಿಷಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಧಿಕಾರವಿಲ್ಲವೇ? ಅವರು ಏಕೆ ದೇಶಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿಲ್ಲ. ತಂಡಕ್ಕೆ ಮಯಾಂಕ್ ಆಯ್ಕೆ ಯಾಕೆ ಮಾಡುತ್ತಿಲ್ಲ
ಇಬ್ಬರು ನತದೃಷ್ಟರು
ಮಯಾಂಕ್ ಹಾಗೂ ಮೊಹಮ್ಮದ್ ಸಿರಾಜ್ ಗೆ ಎರಡನೇ ಟೆಸ್ಟ್ ನಲ್ಲಿ ಆಡಲು ಅವಕಾಶ ನೀಡಬೇಕಿತ್ತು. ಇಬ್ಬರ ಪ್ರತಿಭೆಗೆ ಸೂಕ್ತ ಅವಕಾಶ ಸಿಗದೇ ತಂಡದಿಂದ ಹೊರಬೀಳುವಂತಾಗದಿರಲಿ
ಮೊದಲು ಕರುಣ್ ನಂತರ ಮಯಾಂಕ್
ಕರ್ನಾಟಕದ ಕರುಣ್ ನಾಯರ್ ಹಾಗೂ ಮಯಾಂಕ್ ಅಗರವಾಲ್ ಇಬ್ಬರಿಗೂ ಅನ್ಯಾಯವಾಗಿದೆ. ಕೊಹ್ಲಿ ಅವರಿಗೆ ಆಪ್ತ ಎನ್ನುವ ಕಾರಣಕ್ಕೆ ಕೆಎಲ್ ರಾಹುಲ್ ಗೆ ಮತ್ತೆ ಮತ್ತೆ ಅವಕಾಶ ಸಿಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications