ಮುಖ ಮುಚ್ಚಿಕೊಂಡ ಲಂಕನ್ನರಿಗೆ ಮಂಗಳಾರತಿ ಮಾಡಿದ ಟ್ವೀಟ್ ಲೋಕ

Posted By:

ನವದೆಹಲಿ, ಡಿಸೆಂಬರ್ 04: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂಬುದು ಮುಚ್ಚಿಡುವಂಥ ವಿಷಯವೇನಲ್ಲ. ಆದರೆ, ಪ್ರವಾಸಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಮೈದಾನದಲ್ಲಿ ಮುಖ ಮುಚ್ಚಿಕೊಂಡು ಆಟವಾಡಿದ್ದು ನೋಡಿ ಟ್ವೀಟ್ ಲೋಕ ಕೆರಳಿದೆ. ಓವರ್ ಆಗಿ ಪ್ರತಿಕ್ರಿಯಿಸಬೇಡಿ ಎಂದು ಎಚ್ಚರಿಸಿದೆ.

ಸ್ಕೋರ್ ಕಾರ್ಡ್

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾರತ-ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ವಿಪರೀತ ಮಾಲಿನ್ಯದಿಂದಾಗಿ ಮೈದಾನದಲ್ಲಿ ಆಟವಾಡಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ತಂಡದ ಆಟಗಾರರು ದೂರಿದ ಪ್ರಸಂಗ ನೆನಪಿರಬಹುದು. ಇದಕ್ಕೆ ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕಿಯೆಗಳು ಬಂದಿವೆ.

ಲಂಚ್ ಬಳಿಕ ಮೈದಾನ ತೊರೆಯುವುದಾಗಿ ಶ್ರೀಲಂಕಾ ಆಟಗಾರರು ಪಟ್ಟು ಹಿಡಿದ ಘಟನೆ ನಡೆಯಿತು. ಯಾವುದೇ ಸಂಧಾನ ನಡೆದರೂ ಫಲಕಾರಿಯಾಗದೆ 17 ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮೈದಾನದಲ್ಲಿದ್ದ ಪ್ರೇಕ್ಷಕರು, ಅಂಪೈರ್, ಟೀಂ ಇಂಡಿಯಾದ ಆಟಗಾರರಿಗೆ ಇಲ್ಲದ ಮಾಲಿನ್ಯ ಇವರಿಗೆ ಮಾತ್ರ ತಟ್ಟುತ್ತಿದೆ ಎಂದು ವ್ಯಂಗ್ಯದ ಟ್ವೀಟ್ ಗಳು ಬಂದಿವೆ...

ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕಿಯೆಗಳು

ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕಿಯೆಗಳು

123ನೇ ಓವರ್ ನಲ್ಲಿ 3 ಬಾಲ್ ಎಸೆದಿದ್ದ ಲಹಿರು, ಅಸ್ವಸ್ಥತೆಯಿಂದಾಗಿ ನಾಲ್ಕನೇ ಬಾಲ್ ಎಸೆಯಲಿಲ್ಲ. ವಾಯುಮಾಲಿನ್ಯದಿಂದಾಗಿ ವೇಗದ ಬೌಲರ್ ಗಳಿಗೆ ಉಸಿರಾಡಲು ಕಷ್ಟವಾಗ್ತಿದೆ ಅಂತಾ ನಾಯಕ ದಿನೇಶ್ ಚಾಂಡಿಮಾಲ್ ಅಂಪೈರ್ ಗೆ ದೂರು ನೀಡಿದರು. ಅಂಪೈರ್ ಗಳು ಹಾಗೂ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಮನವೊಲಿಸಿದರೂ ಪಂದ್ಯ ಬೇಗನೆ ಮುಗಿಸಲು ಒತ್ತಡ ಹೇರಿದರು.

ಪಂದ್ಯ ಸ್ಥಗಿತಗೊಳಿಸಲು ಇದೇ ಉಪಾಯ

ಭಾರತದವರು ಬ್ಯಾಟಿಂಗ್ ನಿಲ್ಲಿಸಲ್ಲ,ಪಂದ್ಯ ಸ್ಥಗಿತಗೊಳಿಸಲು ಇದೇ ಉಪಾಯ ಎಂದು ಮಾಸ್ಕ್ ಧರಿಸಿದ ಲಂಕನ್ನರು

ಕಾರಿನಿಂದ ಪಂದ್ಯ ಸ್ಥಗಿತವಾಗಿತ್ತು

ಕಳೆದ ತಿಂಗಳು ಇಲ್ಲಿ ಮೈದಾನಕ್ಕೆ ಕಾರು ಬಂದಿದ್ದರಿಂದ ಪಂದ್ಯ ಸ್ಥಗಿತವಾಗಿತ್ತು. ಈಗ ಲಂಕನ್ನರ ವೇಷದಿಂದ ಪಂದ್ಯ ನಿಂತಿದೆ.

ಲಂಕನ್ನರು ನಾಳೆಯೇ ಮನೆಗೆ

ಲಂಕನ್ನರು ನಾಳೆಯೇ ಮನೆಗೆ ವಿಮಾನವೇರಿ ಮನೆಗೆ ಹೊರಟರೂ ಅಚ್ಚರಿಪಡಬೇಕಾಗಿಲ್ಲ.

Story first published: Monday, December 4, 2017, 14:39 [IST]
Other articles published on Dec 4, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ