ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 ವಿಶ್ವಕಪ್‌ನಲ್ಲಿ ಮಿಂಚುತ್ತಿರುವ ಒಲಿಂಪಿಕ್ಸ್ ಪದಕ ವಿಜೇತನ ಮೊಮ್ಮಗ: ಭಾರತದ ಪರ ದಾಖಲೆ ಬರೆದ ರಾಜ್ ಬಾವಾ!

U-19 world cup: who is Raj Bawa: Grandson of Olympic medallis, here is Profile

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದೆ. ಭಾರತೀಯ ತಂಡದ ಆಟಗಾರರು ಕೊರೊನಾವೈರಸ್‌ನ ಆಘಾತಕ್ಕೆ ಒಳಗಾಗಿದ್ದರೂ ತಂಡದ ಸಾಂಘಿಕ ಪ್ರದರ್ಶನದಿಂದ ಅಮೋಘವಾಗಿ ಆಡುತ್ತಿದೆ. ಎದುರಾಳಿಗಳ ವಿರುದ್ಧ ಅಮೋಘ ಪ್ರದರ್ಶನ ನೀಡುತ್ತಿದ್ದು ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿದೆ. ಭಾರತೀಯ ಅಂಡರ್ 19 ತಂಡದ ಈ ಪ್ರದರ್ಶನದಲ್ಲಿ ಓರ್ವ ಆಟಗಾರನ ಪ್ರದರ್ಶನ ಸಾಕಷ್ಟು ಗಮನಸೆಳೆಯುತ್ತಿದೆ.

ಅದು ಬೇರೆ ಯಾರೂ ಅಲ್ಲ, ಭಾರತ ಅಂಡರ್ 19 ತಂಡದ ಪ್ರಮುಖ ಆಟಗಾರ ರಾಜ್ ಬಾವಾ. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಬಾಜ್ ಬಾವಾ ಬೌಲಿಂಗ್ ಬ್ಯಾಟಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಂಡರ್ 10 ವಿಶ್ವಕಪ್‌ನಲ್ಲಿ ಭಾರತದ ಪರ ಅತ್ಯಂತ ಹೆಚ್ಚು ರನ್‌ಗಳಿಸಿದ್ದ ದಾಖಲೆಯನ್ನು ಕೂಡ ರಾಜ್ ಬಾವಾ ತನ್ನದಾಗಿಸಿಕೊಂಡಿದ್ದಾರೆ.

ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!

ಉಗಾಂಡಾ ವಿರುದ್ಧ ರಾಜ್ ಮಿಂಚು

ಉಗಾಂಡಾ ವಿರುದ್ಧ ರಾಜ್ ಮಿಂಚು

ಅಂಡರ್ 19 ವಿಶ್ವಕಪ್‌ನಲ್ಲಿ ಉಗಾಂಡಾ ವಿರುದ್ಧ ನಡೆದ ಪಂದ್ಯದಲ್ಲಿ ರಾಜ್ ಬಾವಾ ಅಮೋಘ ಪ್ರದರ್ಶನ ನೀಡಿದ್ದಾರೆ. 108 ಎಸೆತಗಳನ್ನು ಎದುರಿಸಿದ ಬಾವಾ ಈ ಪಂದ್ಯದಲ್ಲಿ ಅಜೇಯ 162 ರನ್ ಬಾರಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು. 2004ರ ಅಂಡರ್ 19 ಟಿ20 ವಿಶ್ವಕಪ್‌ನಲ್ಲಿ ಧವನ್ ಸ್ಕಾಟ್ಲಂಡ್ ವಿರುದ್ಧ 155 ರನ್ ಬಾರಿಸಿದ್ದರು.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಯಾರು ಈ ರಾಜ್ ಬಾವಾ?

ಯಾರು ಈ ರಾಜ್ ಬಾವಾ?

ಭಾರತೀಯ ಕ್ರಿಕೆಟ್ ಲೋಕದಲ್ಲಿ ರಾಜ್ ಬಾವಾ ಈಗ ಭವಿಷ್ಯದ ಆಟಗಾರನೆಂಬ ಭರವಸೆ ಮೂಡಿಸುತ್ತಿದ್ದಾರೆ. ಈ ಅಂಡರ್ 19 ವಿಶ್ವಕಪ್‌ನಲ್ಲಿನ ಪ್ರದರ್ಶನದ ಮೂಲಕ ಭಾರತೀಯ ಕ್ರೀಡಾಪ್ರೇಮಿಗಳ ಗಮನಸೆಳೆಯುತ್ತಿದ್ದಾರೆ ಎಂಬುದು ನಿಜ. ಆದರೆ ಈ ರಾಜ್ ಬಾವಾ ಕುಟುಂಬ ಭಾರತೀಯ ಕ್ರೀಡಾಲೋಕಕ್ಕೆ ಅಪರಿಚಿತವೇನಲ್ಲ ಎಂಬುದು ಕುತೂಹಲಕಾರಿ ಮಾಹಿತಿ. ಹೌದು, ರಾಜಾ ಬಾವಾ ಅಜ್ಜ ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ. ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡ ಭಾರತೀಯ ತಂಡದ ಭಾಗವಾಗಿದ್ದರು ರಾಜ್ ಭಾವಾ ಅಜ್ಜ ತರ್ಲೋಚನ್ ಸಿಂಗ್ ಬಾವಾ.

ಭಾರತ ಸ್ವಾತಂತ್ರ್ಯಗಳಿಸಿದ ಮರುವರ್ಷವೇ ಅಂದರೆ 1948ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಒಲಿಂಪಿಕ್ಸ್ ಟೂರ್ನಿ ಆಯೋಜನೆಯಾಗಿತ್ತು. ಈ ಟೂರ್ನಿಯಲ್ಲಿ ತರ್ಲೋಚನ್ ಸಿಂಗ್ ಎರಡು ಗೋಲು ಬಾರಿಸಿದ್ದರು. ಇದರಲ್ಲಿ ಒಂದು ಗೋಲು ಗ್ರೇಟ್ ಬ್ರಿಟನ್ ವಿರುದ್ಧ ಫೈನಲ್‌ನಲ್ಲಿ ಭಾರತ 4-0 ಅಂತರದಿಂದ ಗೆದ್ದ ಪಂದ್ಯದಲ್ಲಿ ದಾಖಲಾಗಿತ್ತು. ಈ ಮೂಲಕ ಸ್ವತಂತ್ರ್ಯ ಭಾರತದ ಪ್ರಥಮ ಚಿನ್ನದ ಗೋಲು ಗಳಿಸಿತ್ತು.

ತಂದೆ ಕ್ರಿಕೆಟ್ ಕೋಚ್

ತಂದೆ ಕ್ರಿಕೆಟ್ ಕೋಚ್

ಇನ್ನು ಬರವಸೆಯ ಆಟಗಾರ ರಾಜ್ ಬಾವಾ ಕ್ರೀಡಾ ಹಿನ್ನೆಲೆ ಅಜ್ಜನ ಕಾಲಕ್ಕೆ ಅಂತ್ಯವಾಗುವುದಿಲ್ಲ. ರಾಜ್ ಬಾವಾ ತಂದೆ ಕೂಡ ಕ್ರೀಡಾಲೋಕದಲ್ಲಿ ಖ್ಯಾತಿಗಳಿಸಿದ್ದಾರೆ. ಕ್ರಿಕೆಟ್ ಕೋಚ್ ಆಗಿ ರಾಜ್ ಬಾವಾ ತಂದೆ ಸುಖ್ವಿಂದರ್ ಬಾವಾ ಖ್ಯಾತರಾಗಿದ್ದಾರೆ. ಭಾರತ ತಂಡದ ಪ್ರಖ್ಯಾತ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ವೇಗಿ ವಿಆರ್‌ವಿ ಸಿಂಗ್‌ಗೆ ಕೂಡ ಸುಖ್ವಿಂದರ್ ಸಿಂಗ್ ಕೋಚ್ ಆಗಿದ್ದರು.

ಯುವರಾಜ್ ಸಿಂಗ್‌ಗೆ ದೊಡ್ಡ ಅಭಿಮಾನಿ ರಾಜ್ ಬಾವಾ

ಯುವರಾಜ್ ಸಿಂಗ್‌ಗೆ ದೊಡ್ಡ ಅಭಿಮಾನಿ ರಾಜ್ ಬಾವಾ

ಇನ್ನು ಈಗಷ್ಟೇ ಕ್ರಿಕೆಟ್ ಲೋಕದಲ್ಲಿ ಅಂಬೆಗಾಲಿಡುತ್ತಿರುವ ರಾಜ್ ಬಾವಾ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಅವರ ಅಪ್ಪಟ ಅಭಿಮಾನಿಯೂ ಹೌದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ರಾಜ್ ಬಾವಾ 2002ರ ನವೆಂಬರ್ 12ರಂದು ಹಿಮಾಚಲ ಪ್ರದೇಶದ ನಾಹನ್ ನಗರದಲ್ಲಿ ಜನಿಸಿದರು.

Story first published: Sunday, January 23, 2022, 16:10 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X