|
ವಿಶ್ವ ದರ್ಜೆಯ ಮನರಂಜನೆಯನ್ನು ಒದಗಿಸುತ್ತೇವೆ
ಯುಎಇ ಲೀಗ್ ಟಿ20 ವೇಳಾಪಟ್ಟಿಯ ಕುರಿತು ಮಾತನಾಡಿದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿ, "ಇದು ಯುಎಇ ಲೀಗ್‌ಗೆ ಬಹಳ ರೋಮಾಂಚಕಾರಿ ಸಮಯವಾಗಿದೆ. ಒಟ್ಟಾರೆಯಾಗಿ 2023ರ ಯುಎಇ ಲೀಗ್ ಟಿ20 ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ," ಎಂದು ಹೇಳಿದ್ದಾರೆ.
"ಜನವರಿ ಆರಂಭದಲ್ಲಿ ಎಲ್ಲ ತಂಡಗಳು ಮತ್ತು ಆಟಗಾರರು ಯುಎಇನಲ್ಲಿ ಸೇರಲಿದ್ದು, ಮೈದಾನಗಳಲ್ಲಿ ಅಭ್ಯಾಸ ಅರಂಭಿಸಲಿದ್ದಾರೆ. ಯುಎಇ ಮತ್ತು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವ ದರ್ಜೆಯ ಮನರಂಜನೆಯನ್ನು ಒದಗಿಸುತ್ತೇವೆ," ಎಂದರು.
"ನಾವು ಲೀಗ್‌ಗೆ ಅದ್ಧೂರಿ ಚಾಲನೆ ನೀಡುವುದು ಬಹಳ ಮುಖ್ಯ. ಜಾಗತಿಕವಾಗಿ ಗುರುತಿಸಲ್ಪಟ್ಟ ಬಾದ್‌ಶಾ ಮತ್ತು ಜೇಸನ್ ಡೆರುಲೊ ಕಲಾವಿದರು ಮನರಂಜನೆ ನೀಡಲಿದ್ದಾರೆ. ಇವರಿಬ್ಬರೂ ನಿಸ್ಸಂದೇಹವಾಗಿ ತಂಡಗಳಿಗೆ ಮತ್ತು ಆರಂಭಿಕ ಪಂದ್ಯಕ್ಕೆ ಬರುವ ಅಭಿಮಾನಿಗಳಿಗೆ ಶಕ್ತಿ ತುಂಬುತ್ತಾರೆ. ಯುಎಇ ಲೀಗ್ ಟಿ20 ಒಂದು ದೊಡ್ಡ ಯಶಸ್ಸನ್ನು ಪಡೆಯುತ್ತದೆ," ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿ ವಿವರಿಸಿದರು.

ದುಬೈನಲ್ಲಿ ಹದಿನಾರು ಪಂದ್ಯಗಳು
ಅಬುಧಾಬಿಯಲ್ಲಿ ಹತ್ತು ಪಂದ್ಯಗಳು, ದುಬೈನಲ್ಲಿ ಹದಿನಾರು ಪಂದ್ಯಗಳು ಮತ್ತು ಶಾರ್ಜಾದಲ್ಲಿ ಎಂಟು ಪಂದ್ಯಗಳನ್ನು ಆಯೋಜಿಸಲಾಗಿದೆ. ಯುಎಇ ಲೀಗ್ ಟಿ20ನಲ್ಲಿ ಶಿಮ್ರಾನ್ ಹೆಟ್ಮೆಯರ್, ಮೊಯಿನ್ ಅಲಿ, ಕೀರಾನ್ ಪೊಲಾರ್ಡ್ ಮತ್ತು ವನಿಂದು ಹಸರಂಗ ಅವರಂತಹ ಸ್ಟಾರ್ ಆಟಗಾರರು ಆಡಲಿದ್ದಾರೆ.
ಮೊದಲ ಆವೃತ್ತಿಯ ಯುಎಇ ಲೀಗ್ ಒಟ್ಟು 34 ಪಂದ್ಯಗಳನ್ನು ಒಳಗೊಂಡಿದೆ. ಐದು ವಾರಾಂತ್ಯದಲ್ಲಿ ಡಬಲ್-ಹೆಡರ್ ಪಂದ್ಯಗಳನ್ನು ನೋಡಬಹುದು. ಪ್ಲೇಆಫ್ ಪಂದ್ಯಗಳಿಗೆ ಮೊದಲು ಆರು ಫ್ರಾಂಚೈಸಿಗಳು ಪರಸ್ಪರ ಎರಡು ಬಾರಿ ಆಡಲಿದ್ದಾರೆ ಮತ್ತು ಫೆಬ್ರವರಿ 12, 2023ರಂದು ದುಬೈನಲ್ಲಿ ರೋಚಕ ಫೈನಲ್ ಮೂಲಕ ಯುಎಇ ಲೀಗ್ ಟಿ20 ತೆರೆ ಕಾಣಲಿದೆ.

ವಿಶ್ವ ದರ್ಜೆಯ ಕ್ರಿಕೆಟ್ ಸೌಲಭ್ಯಗಳೊಂದಿಗೆ ಆಡಲಾಗುತ್ತದೆ
ಯುಎಇ ಲೀಗ್ ಟಿ20 ಜನವರಿ 2023ರಲ್ಲಿ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಐಸಿಸಿ ಅನುಮೋದನೆಯನ್ನು ಪಡೆದಿದೆ. ಯುಎಇನ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಸೌಲಭ್ಯಗಳೊಂದಿಗೆ ಆಡಲಾಗುತ್ತದೆ.
ಜೀ (ZEE) ಈ ಲೀಗ್‌ನ ಮಾಧ್ಯಮ ಪಾಲುದಾರನಾಗಿದ್ದು, 84 ಅಂತಾರಾಷ್ಟ್ರೀಯ ಮತ್ತು 24 ಯುಎಇ ಮೂಲದ ಆಟಗಾರರನ್ನು ಈ ಟಿ20 ಲೀಗ್ ಒಳಗೊಂಡಿದೆ.
ಫ್ರಾಂಚೈಸ್ ತಂಡಗಳಾಗಿ ಅಬುಧಾಬಿ ನೈಟ್ ರೈಡರ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್), ಡೆಸರ್ಟ್ ವೈಪರ್ಸ್ (ಲ್ಯಾನ್ಸರ್ ಕ್ಯಾಪಿಟಲ್), ದುಬೈ ಕ್ಯಾಪಿಟಲ್ಸ್ (ಜಿಎಂಆರ್), ಗಲ್ಫ್ ಜೈಂಟ್ಸ್ (ಅದಾನಿ ಸ್ಪೋರ್ಟ್ಸ್‌ಲೈನ್), ಎಂಐ ಎಮಿರೇಟ್ಸ್ (ರಿಲಯನ್ಸ್ ಇಂಡಸ್ಟ್ರೀಸ್) ಮತ್ತು ಶಾರ್ಜಾ ವಾರಿಯರ್ಸ್ (ಕ್ಯಾಪ್ರಿ ಗ್ಲೋಬಲ್) ಇವೆ.