ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆ

Umar Akmal banned for 3 years from all forms by PCB Disciplinary Panel

ಪಾಕಿಸ್ತಾನದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಮೂರು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದಾರೆ. ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಅಕ್ಮಲ್‌ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಶಿಸ್ತು ಸಮಿತಿ ಅಮಾನತು ಶಿಕ್ಷೆಯನ್ನು ಪ್ರಕಟಿಸಿದೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ಉಮರ್ ಅಕ್ಮಲ್ ಕ್ರಿಕೆಟ್‌ಗೆ ಸಂಬಂಧಪಟ್ಟ ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳುವಂತಿಲ್ಲ.

ಎರಡು ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿಯನ್ನು ಉಲ್ಲಂಘನೆಗಾಗಿ ಮಾಡಿದ್ದರು. ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಪಿಸಿಬಿ ಮಾರ್ಚ್ 17ರಂದು ನೋಟಿಸ್ ನೀಡಿತ್ತು. ಇದಕ್ಕೆ ಸೂಕ್ತ ಉತ್ತರವನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಉಮರ್ ಅಕ್ಮಲ್ ಶಿಕ್ಷೆಗೆ ಗುರಿಯಾಗಿದ್ದಾರೆ.

ಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯ

ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಉಮರ್ ಅಕ್ಮಲ್ ಪಾಲ್ಗೊಂಡಿದ್ದಾಗ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಬುಕ್ಕಿಗಳು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡದ ಕಾರಣ ಉಮರ್ ಅಕ್ಮಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪಿಎಸ್ಎಲ್ ಆರಂಭಕ್ಕೆ ಕೆಲವೇ ಘಂಟೆಗಳ ಮುನ್ನ ಅಕ್ಮಲ್ ಪ್ರತಿನಿಧಿಸುತ್ತಿದ್ದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿ ಈತನನ್ನು ಅಮಾನತು ಮಾಡಿತ್ತು.

ಉಮರ್ ಅಕ್ಮಲ್ ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅವರ ಕಿರಿಯ ಸಹೋದರ. ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರವಾಗಿ 53 ಟೆಸ್ಟ್, 58 ಟಿ20 ಮತ್ತು 157 ಏಕದಿನ ಪಂದ್ಯಗಳನ್ನು ಆಡಿದ ಅನುಭವಿ ಕ್ರಿಕೆಟಿಗ. ಹಾಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್ ಅವರ ಸೋದರ ಸಂಬಂಧಿಯೂ ಹೌದು.

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಪರವಾಗಿ ಉಮರ್ ಅಕ್ಮಲ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. 16 ಟೆಸ್ಟ, 121 ಏಕದಿನ ಮತ್ತು 84 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಕ್ರಮವಾಗಿ 1003, 3194 ಮತ್ತು 1690 ರನ್ ಗಳಿಸಿದ್ದಾರೆ.

Story first published: Monday, April 27, 2020, 19:40 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X