ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೆಸ್ಲಿಂಗ್ ಕ್ರೀಡೆಯನ್ನು ದತ್ತು ಪಡೆಯಲು ಮುಂದಾದ ಯುಪಿ ಸರ್ಕಾರ

UP government adopts Indian wrestling till 2032 Olympics said WFI president

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪಡೆ ನೀಡಿದ ಪ್ರದರ್ಶನ ಭಾರತದಲ್ಲಿ ಕ್ರೀಡಾ ಕ್ರೇತ್ರದಲ್ಲಿನ ಬದಲಾವಣೆಗೆ ಮಹತ್ವದ ಕೊಡುಗೆ ನೀಡಲಿದೆ ಎಂಬ ನಿರೀಕ್ಷೆಯನ್ನು ಮಾಡಲಾಗಿತ್ತು. ಅದಕ್ಕೆ ಪೂರಕವಾದ ಬೆಳವಣಿಗೆಗಳು ಈಗ ನಡೆಯುತ್ತಿದೆ. ಭಾರತದ ರೆಸ್ಲಿಂಗ್ ಕ್ರೀಡೆಯ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಿರುವ ಬಗ್ಗೆ ಇಂದು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್‌ ಗುರುವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. 2032ರ ಒಲಿಂಪಿಕ್ಸ್‌ವರೆಗೆ ರೆಸ್ಲಿಂಗ್ ಕ್ರೀಡೆಯನ್ನು ಉತ್ತರ ಪ್ರದೇಶ ಸರ್ಕಾರ ದತ್ತು ಪಡೆಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 170 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಮೂಲಸೌಕರ್ಯ ಹಾಗೂ ರೆಸ್ಲರ್‌ಗಳಿಗರ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಹೂಡಿಕೆ ಮಾಡುವ ನಿರೀಕ್ಷೆಯಿದೆ ಎಂದು ಬ್ರಿಜ್‌ಭೂಷಣ್ ಶರಣ್ ಸಿಂಗ್‌ ತಿಳಿಸಿದ್ದಾರೆ.

ಭಾರತದಲ್ಲಿ ಹಾಕಿ ಕ್ರೀಡೆಗೆ ಒಡಿಶಾ ಸರ್ಕಾರ ನೀಡಿದ ಬೆಂಬಲವನ್ನು ಸ್ಪೂರ್ತಿಯಾಗಿ ಪಡೆದು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅದೇ ಮಾದರಿಯನ್ನು ಬೆಂಲ ನೀಡಲು ಯುಪಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದಕ್ಕೆ ಪೂರಕವಾದ ಸ್ಪಂದನೆ ಯುಪಿ ಸರ್ಕಾರದಿಂದ ದೊರೆತಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್

"ಒಡಿಶಾ ಒಮದು ಸಣ್ಣ ರಾಜ್ಯ. ಹಾಗಿದ್ದರೂ ಹಾಕಿ ಕ್ರೀಡೆಗೆ ಅವರು ನೀಡಿದ ಬೆಂಬಲ ನಿಜಕ್ಕೂ ಶ್ರೇಷ್ಠವಾದದ್ದು. ಹಾಗಾಗಿ ನಾವು ಕೂಡ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಿಂದ ಇದೇ ರೀತಿಯ ಬೆಂಬಲವನ್ನು ರೆಸ್ಲಿಂಗ್‌ಗೆ ಪಡೆಯಬಾರದು ಎಂದು ಯೋಚಿಸಿದೆವು. ಹೀಗಾಗಿ ನಾವು ಅವರ ಮುಂದೆ ನಮ್ಮ ಮನವಿಯನ್ನು ಸಲ್ಲಿಸಿದೆವು. ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ" ಎಂದು ಸಿಂಗ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

"ನಮ್ಮ ಮನವಿಯಲ್ಲಿ ನಾವು 2024ರ ಒಲಿಂಪಿಕ್ಸ್ ಕ್ರೀಡಾಕೂಟದ ವರೆಗೆ ಪ್ರತಿ ವರ್ಷ 10 ಕೋಟಿಯಂತೆ 30 ಕೋಟಿ ರೂಪಾಯಿ, ಅದಾದ ಬಳಿಕ 2028ರ ಒಲಿಂಪಿಕ್ಸ್ ಅವಧಿಗೆ ಪ್ರತಿ ವರ್ಷ 15 ಕೋಟಿಯಂತೆ 60 ಕೋಟಿ ರೂಪಾಯಿ ಹಾಗೂ ಅಂತಿಮ ಹಂತದ 2032ರ ಕ್ರೀಡಾಕೂಟಕ್ಕೆ ಪ್ರತಿ ವರ್ಷ 20 ಕೋಟಿಯಂತೆ 80 ಕೋಟಿಗೆ ಹೋಗೆ ಒಟ್ಟು 170 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ" ಎಂದು ಅವರಿ ತಿಳಿಸಿದ್ದಾರೆ.

"ಇದು ಸಾಧ್ಯವಾಗುವ ಮೂಲಕ ನಾವು ದೇಶದ ವಿಶೇಷ ರೆಸ್ಲರ್‌ಗಳಿಗೆ ಮಾತ್ರವೇ ಈ ಪ್ರಾಯೋಜಕತ್ವವನ್ನು ಸೀಮಿತಗೊಳಿಸುವುದಿಲ್ಲ. ಈ ಮೂಲಕ ಕೆಡೆಟ್ ಮಟ್ಟದ ರೆಸ್ಲರ್‌ಗಳು ಕೂಡ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ನಾವು ರಾಷ್ಟ್ರಮಟ್ಟದ ಚಾಂಪಿಯನ್ನರಿಗೂ ನಾವು ಬಹುಮಾನದ ಮೊತ್ತವನ್ನು ನೀಡಲು ಸಾಧ್ಯವಾಗುತ್ತದೆ" ಎಂದಿದ್ದಾರೆ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್‌.

ಡಬ್ಲ್ಯುಎಫ್‌ಐ 2018 ರಲ್ಲಿ ಟಾಟಾ ಮೋಟಾರ್ಸ್‌ ಜೊತೆಗೆ ಭಾರತದ ಕುಸ್ತಿಗೆ ಪ್ರಮುಖ ಪ್ರಾಯೋಜಕರಾಗಿ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಮೂಲಕ 12 ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲವನ್ನು ಪಡೆದುಕೊಮಡಿತ್ತು. ಇದು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದವರೆಗೆ ಕುಸ್ತಿಪಟುಗಳಿಗೆ ಕೇಂದ್ರೀಯ ಒಪ್ಪಂದಗಳನ್ನು ನೀಡಲು ಅವಕಾಶ ನೀಡಿತು.

ಈವರೆಗೆ ನಾವು ಹಿರಿಯ ಮತ್ತು ಪ್ರಮುಖ ಕುಸ್ತಿಪಟುಗಳಿಗೆ ಮಾತ್ರ ವೈಯಕ್ತಿಕ ತರಬೇತುದಾರರು ಮತ್ತು ವಿದೇಶಿ ತರಬೇತುದಾರರ ಮಾರ್ಗದರ್ಶನವನ್ನು ಹೊಂದಲು ಅವಕಾಶವಿತ್ತು. ಆದರೆ ಈಗ ಈ ಪ್ರಾಯೋಜಕತ್ವದಿಂದಾಗಿ ನಾವು ನಮ್ಮ ಕೆಡೆಟ್ ಮತ್ತು ಜೂನಿಯರ್ ಕುಸ್ತಿಪಟುಗಳ ತರಬೇತಿಗೆ ಕೂಡ ಹೆಚ್ಚು ಹೂಡಿಕೆ ಮಾಡಬಹುದು. ಈಗ ನಾವು ನಮ್ಮ ಕೆಡೆಟ್ ಕುಸ್ತಿಪಟುಗಳನ್ನು ತರಬೇತಿ ಮತ್ತು ಮಾನ್ಯತೆಗಾಗಿ ವಿದೇಶಕ್ಕೆ ಕಳುಹಿಸಬಹುದು. ಈ ಮೂಲಕ ನಾವು ರೆಸ್ಲಿಂಗ್‌ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿದೆ" ಎಂದು ಬ್ರಿಜ್‌ಭೂಷಣ್ ಶರಣ್ ಸಿಂಗ್‌ ತಿಳಿಸಿದ್ದಾರೆ.

Story first published: Thursday, August 26, 2021, 21:07 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X