ವಿದರ್ಭ 800 ರನ್, ಕುಸಿದ ಭಾರತ ಇತರೆ ತಂಡಕ್ಕೆ ವಿಹಾರಿ ಆಸರೆ

Posted By:
Vidarbha scores 800 runs in Irani tourny first test

ನಾಗ್ಪುರ, ಮಾರ್ಚ್ 17; ಇಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿಯ ಮೊದಲ ಟೆಸ್ಟ್‌ನ ನಾಲ್ಕನೇ ದಿನ ವಿದರ್ಭ ತಂಡವು ಬರೋಬ್ಬರಿ 800 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಪ್ರತಿಯಾಗಿ ಭಾರತ ಇತರೆ ತಂಡವು 236 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಫಾಲೋಆನ್ ಭೀತಿ ಎದುರಿಸುತ್ತಿದೆ.

ವಸೀಂ ಜಾಫರ್ ಅವರ ದಾಖಲೆ 286 ರನ್‌ ಹಾಗೂ ಜಿ.ಸತೀಶ್ ಮತ್ತು ವಾಂಖೇಡೆ ಅವರ ಶತಕದ ನೆರವಿನಿಂದಾಗಿ ವಿದರ್ಭ ತಂಡವು ದಾಖಲೆಯ ಬರೋಬ್ಬರಿ 800 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ವಸೀಂ ಜಾಫರ್‌ ಅವರು ನಿನ್ನೆಯೇ 286 ಗಳಿಸಿ ಔಟಾದರು, ಆದರೆ ನಿನ್ನೆ 44 ರನ್ ಗಳಿಸಿ ಆಡುತ್ತಿದ್ದ ವಾಂಖೆಡೆ ಇಂದು ಶತಕ ಗಳಿಸಿದರು ಅವರು 16 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿ 157 ರನ್ ಗಳಿಸಿದರು.

ಮಧ್ಯಾಹ್ನದ ವೇಳೆಗೆ 7 ವಿಕೆಟ್‌ ಕಳೆದುಕೊಂಡು 800 ರನ್ ಗಳಿಸಿದ್ದ ವಿದರ್ಭ ತಂಡವು ಡಿಕ್ಲೇರ್ ಮಾಡಿಕೊಂಡಿತು. ನಾಲ್ಕು ದಿನ ಫೀಲ್ಡ್‌ನಲ್ಲಿ ಬೆವರು ಹರಿಸಿ ಬಸವಳಿದಿದ್ದು ಭಾರತ ತಂಡ ತಿರುವು ಪಡೆಯಲು ಪ್ರಾರಂಭಿಸಿದ್ದ ಪಿಚ್‌ನಲ್ಲಿ ಸಂಕಷ್ಟಗಳನ್ನು ಎದುರಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ ಕರ್ನಾಟಕದ ಆರ್.ಸಮರ್ಥ ಶೂನ್ಯಕ್ಕೆ ಔಟಾದರು ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (51) ರನ್ ಗಳಿಸಿ ಆದಿತ್ಯಾ ಠಾಕ್ರೆಗೆ ವಿಕೆಟ್ ಒಪ್ಪಿಸಿದರು. ರಾಜ್ಯದ ಮಯಾಂಕ್ ಅಗರ್ವಾಲ್‌ ಕೂಡ ಕೇವಲ 11 ರನ್‌ಗೆ ಔಟಾದರೂ, ಮತ್ತೊಬ್ಬ ಕರ್ನಾಟಕದ ಆಟಗಾರ ಭಾರತ ತಿತರೆ ತಂಡದ ನಾಯಕ ಕರುಣ್ ನಾಯರ್ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆನಂತರ ಬಂದ ಶ್ರೀಕರ್ ಭರತ್ ಕೂಡಾ ಶೂನ್ಯಕ್ಕೆ ಔಟಾದರು.

ಭಾರತ ಇತರೆ ತಂಡ ಕೇವಲ 98 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಆಗ ಜೊತೆಯಾದ ಜಿಎಚ್.ವಿಹಾರಿ ಮತ್ತು ಜಯದೇವ್ ಉನದ್ಕತ್‌ ಭಾರತ ಇನ್ನಿಂಗ್ಸ್‌ ಅನ್ನು ಸಂಭಾಳಿಸಿದರು. ವಿಹಾರಿ 81 ರನ್ ಗಳಿಸಿ ಆಡುತ್ತಿದ್ದರೆ, ಉನದ್ಕತ್‌ 62 ರನ್ ಗಳಿಸಿ ನಾಳೆಗೆ ಆಟವನ್ನು ಮುಂದೂಡಿದ್ದಾರೆ.

ನಾಳೆ ಕೊನೆಯ ದಿನವಾಗಿದ್ದು, ನಾಳೆ ವಿದರ್ಭ ತಂಡ ಗೆಲ್ಲಲು ಭಾರತ ಇತರೆ ತಂಡದ 14 ವಿಕೆಟ್ ತೆಗೆಯಬೇಕಿದೆ. ಆದರೆ ಪಂದ್ಯವು ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, March 17, 2018, 18:12 [IST]
Other articles published on Mar 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ