ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಪಡೆದ ಕನ್ನಡಿಗ ಅಭಿಮನ್ಯು ಮಿಥುನ್!

Vijay Hazare: Abhimanyu Mithun gets a hat-trick against Tamilnadu

ಬೆಂಗಳೂರು, ಅಕ್ಟೋಬರ್ 25: ಹುಟ್ಟಹಬ್ಬವನ್ನು ಕನ್ನಡಿಗ, ಕ್ರಿಕೆಟರ್ ಅಭಿಮನ್ಯು ಮಿಥುನ್ ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ 2019ರ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಪರ ಅದ್ಭುತ ಬೌಲಿಂಗ್ ಮಾಡಿದ ಮಿಥುನ್‌ಗೆ ಹ್ಯಾಟ್ರಿಕ್ ವಿಕೆಟ್‌ಗಳು ಲಭಿಸಿವೆ.

ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ರೋಹಿತ್ ನಾಯಕಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ರೋಹಿತ್ ನಾಯಕ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಒಟ್ಟಿಗೆ 34 ರನ್‌ ನೀಡಿ, 5 ವಿಕೆಟ್‌ ಪಡೆದರು. 9.5 ಓವರ್‌ ಎಸೆದು ಮಿಥುನ್ ಎದುರಾಳಿಯ ರನ್‌ ಕದಿಯುವಿಕೆಗೆ ಕಡಿವಾಣ ಹಾಕಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ತಮಿಳುನಾಡು ತಂಡದ ವಿರುದ್ಧ ಬೌಲಿಂಗ್ ದಾಳಿ ನಡೆಸಿದ ಮಿಥುನ್, ಕ್ರಮವಾಗಿ ಮುರುಳಿ ವಿಜಯ್, ವಿಜಯ್ ಶಂಕರ್, ಶಾರುಖ್ ಖಾನ್, ಎಂ ಮೊಹಮ್ಮದ್ ಮತ್ತು ಮುರುಗನ್ ಅಶ್ವಿನ್ ವಿಕೆಟ್‌ಗಳನ್ನು ಮುರಿದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್‌ ಲಭಿಸಿದ್ದು ಕೊನೇ ಓವರ್‌ ಅಂದರೆ 49.3, 49.4, 49.5ನೇ ಓವರ್‌ನಲ್ಲಿ.

ನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯ

ಮೊದಲು ಇನ್ನಿಂಗ್ಸ್‌ ಆಡಿದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬಾ ಅಪರಾಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್‌ ನೆರವಿನೊಂದಿಗೆ 49.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿದೆ. 1989ರ ಅಕ್ಟೋಬರ್ 25ರಂದು ಜನಿಸಿರುವ ಮಿಥುನ್‌ ಹುಟ್ಟು ಹಬ್ಬದ ದಿನವೇ ಅಪರೂಪದ ಸಾಧನೆ ಮೆರೆದಂತಾಗಿದೆ.

Story first published: Friday, October 25, 2019, 19:59 [IST]
Other articles published on Oct 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X