ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ; ಕೇರಳ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಜಮ್ಮು ಮತ್ತು ಕಾಶ್ಮೀರ

Vijay Hazare Trophy 2022; Jammu & Kashmir Defeated Kerala And Reached the Quarter-finals

2022ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಪ್ರಶಸ್ತಿ ಕನಸು ಬೆನ್ನತ್ತಿ ಹೊರಟಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಕೇರಳವನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕೇರಳ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಿಂದ ಕೇರಳವನ್ನು ಹೊರದಬ್ಬಿತು.

ಜಮ್ಮು ಮತ್ತು ಕಾಶ್ಮೀರ ತಂಡ ತಮ್ಮ ಮೊದಲ ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯದಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಂತರ ಕೇರಳವನ್ನು 47.4 ಓವರ್‌ಗಳಲ್ಲಿ ಕೇವಲ 174 ರನ್‌ಗಳಿಗೆ ನಿಯಂತ್ರಿಸಿತು.

IND vs NZ: ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 5ನೇ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿIND vs NZ: ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 5ನೇ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ

ಜಮ್ಮು ಮತ್ತು ಕಾಶ್ಮೀರ ತಂಡ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಔಕಿಬ್ ನಬಿ 39 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಪ್ರತ್ಯುತ್ತರವಾಗಿ, ಜಮ್ಮು ಮತ್ತು ಕಾಶ್ಮೀರ 37.5 ಓವರ್‌ಗಳಲ್ಲಿ ಶುಭಂ ಖಜುರಿಯಾ (76) ಮತ್ತು ಕಮ್ರಾನ್ ಇಕ್ಬಾಲ್ (51) 21.4 ಓವರ್‌ಗಳಲ್ಲಿ 113 ರನ್‌ಗಳ ಆರಂಭಿಕ ಜೊತೆಯಾಟದ ಸಹಾಯದಿಂದ ಭರ್ಜರಿ ಜಯ ಸಾಧಿಸಿತು.

Vijay Hazare Trophy 2022; Jammu & Kashmir Defeated Kerala And Reached the Quarter-finals

ವೃತ್ತಿ ಜೀವನದ ಅದ್ಭುತ ಪ್ರದರ್ಶನ ನೀಡಿದ ಶುಭಂ ಖಜುರಿಯಾ 61 ಎಸೆತಗಳಲ್ಲಿ 76 ರನ್ ಗಳಿಸಿದರು. ಅದರಲ್ಲಿ ಆರು ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳು ಒಳಗೊಂಡಿದ್ದವು ಮತ್ತು ಇದು ಈ ಋತುವಿನಲ್ಲಿ ಅವರ ನಾಲ್ಕನೇ ಅರ್ಧಶತಕವಾಗಿದೆ.

ಒಂದು ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ಕೇವಲ 32 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ಸ್ಕೋರ್‌ಬೋರ್ಡ್‌ನಲ್ಲಿ ಯಾವುದೇ ಒತ್ತಡ ಇಲ್ಲದ ಕಾರಣ, ಹೆನಾನ್ ನಜೀರ್ ಮತ್ತು ಫಾಜಿಲ್ ರಶೀದ್ ಅಜೇಯ ಆಟದಿಂದ ತಮ್ಮ ತಂಡಕ್ಕೆ ಆರನೇ ಜಯ ತಂದುಕೊಟ್ಟರು.

ಸೋಮವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಬಿ ಗುಂಪಿನ ಅಗ್ರಸ್ಥಾನದಲ್ಲಿರುವ ಅಸ್ಸಾಂ ತಂಡವನ್ನು ಎದುರಿಸಲಿದೆ.

ಜಮ್ಮು ಮತ್ತು ಕಾಶ್ಮೀರ ವೇಗಿ ಔಕಿಬ್ ನಬಿ ಜೊತೆಗೆ ಯುಧ್ವಿರ್ ಸಿಂಗ್ (2/16) ಮತ್ತು ಎಡಗೈ ವೇಗಿ ಮುಜ್ತಾಬಾ ಯೂಸುಫ್ (1/37) ಕೇರಳ ತಂಡದ ಬ್ಯಾಟಿಂಗ್ ಪಡೆಗೆ ಕಾಟ ಕೊಟ್ಟರು.

IND vs NZ 2nd ODI: ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ?; ಸಂಭಾವ್ಯ ತಂಡಗಳುIND vs NZ 2nd ODI: ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ?; ಸಂಭಾವ್ಯ ತಂಡಗಳು

ಕೇರಳದ ಆರಂಭಿಕ ಬ್ಯಾಟರ್ ವಿನೂಪ್ ಮನೋಹರನ್ 81 ಎಸೆತಗಳಲ್ಲಿ 62 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು. 32ನೇ ಓವರ್‌ನಲ್ಲಿ ಯುಧ್ವಿರ್ ಸಿಂಗ್ ಬೌಲಿಂಗ್‌ನಲ್ಲಿ ಔಟಾದರು.

ಏಳು ಪಂದ್ಯಗಳಿಂದ ತಲಾ 12 ವಿಕೆಟ್‌ಗಳೊಂದಿಗೆ ಔಕಿಬ್ ನಬಿ ಮತ್ತು ಯುದ್ವೀರ್ ಸಿಂಗ್ ಈ ಋತುವಿನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಅಸಾಧಾರಣ ಸಾಧನೆ ಮಾಡಿದ್ದಾರೆ.

ಅಜಯ್ ಶರ್ಮಾ ಕೋಚಿಂಗ್‌ನ ಜಮ್ಮು ಮತ್ತು ಕಾಶ್ಮೀರ ತಂಡವು ಹಾಲಿ ರಣಜಿ ಚಾಂಪಿಯನ್ ಮಧ್ಯಪ್ರದೇಶವನ್ನು ಈ ಮೊದಲು ಸೋಲಿಸಿತ್ತು. ಎರಡು ವಿಕೆಟ್‌ ಬಾಕಿ ಇರುವಂತೆಯೇ 343 ರನ್‌ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಜಮ್ಮು ಮತ್ತು ಕಾಶ್ಮೀರ ತಂಡ ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧ ಏಕೈಕ ಸೋಲು ಕಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಕೇರಳ:
47.4 ಓವರ್‌ಗಳಲ್ಲಿ 174 ಆಲೌಟ್ (ವಿನೂಪ್ ಮನೋಹರನ್ 62, ಸಿಜೋಮನ್ ಜೋಸೆಫ್ 32; ಔಕಿಬ್ ನಬಿ 4/39, ಯುದ್ವೀರ್ ಸಿಂಗ್ (2/16)

ಜಮ್ಮು ಮತ್ತು ಕಾಶ್ಮೀರ 37.5 ಓವರ್‌ಗಳಲ್ಲಿ 175/3 (ಶುಭಮ್ ಖಜುರಿಯಾ ಇಕ್ವಿ 76, ಶುಭಂ ಖಜುರಿಯಾ 76 ; ಸಿಜೋಮನ್ ಜೋಸೆಫ್ (2/19)

ಫಲಿತಾಂಶ: ಕೇರಳ ವಿರುದ್ಧ ಏಳು ವಿಕೆಟ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಜಯ

Story first published: Saturday, November 26, 2022, 20:09 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X