ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಪರಾಗ್ ಸ್ಫೋಟಕ ಬ್ಯಾಟಿಂಗ್; ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಸೆಮಿಸ್ ತಲುಪಿದ ಅಸ್ಸಾಂ

Vijay Hazare Trophy: Assam Entered The Semi-finals After Winning Against Jammu And Kashmir

ಸೋಮವಾರ ಅಹಮದಾಬಾದ್‌ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್‌ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಗೆದ್ದ ಅಸ್ಸಾಂ ತಂಡ ಸೆಮಿಫೈನಲ್ ತಲುಪಿದೆ.

ಜಮ್ಮು ಮತ್ತು ಕಾಶ್ಮೀರ ನೀಡಿದ್ದ 351 ರನ್‌ಗಳ ಬೃಹತ್ ಗುರಿಯನ್ನು 46.1 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಅಸ್ಸಾಂ, ಅಂತಿಮವಾಗಿ ಏಳು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.

Vijay Hazare Trophy: ಯುಪಿ ವಿರುದ್ಧ ದ್ವಿಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಮುರಿದ 5 ದಾಖಲೆಗಳ ಪಟ್ಟಿVijay Hazare Trophy: ಯುಪಿ ವಿರುದ್ಧ ದ್ವಿಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಮುರಿದ 5 ದಾಖಲೆಗಳ ಪಟ್ಟಿ

ಅಸ್ಸಾಂ ತಂಡಕ್ಕೆ ರಿಯಾನ್ ಪರಾಗ್ 116 ಎಸೆತಗಳಲ್ಲಿ 174 ರನ್ ಬಾರಿಸಿ ನೆರವಾದರು. ರಿಯಾನ್ ಪರಾಗ್ ಅವರ ಸ್ಫೋಟಕ ಬ್ಯಾಟಿಂಗ್‌ನಲ್ಲಿ 12 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳು ಒಳಗೊಂಡಿದ್ದವು.

ಪರಾಗ್ 174 ರನ್ ಮತ್ತು ರಿಷವ್ ದಾಸ್ 114 ರನ್

ಪರಾಗ್ 174 ರನ್ ಮತ್ತು ರಿಷವ್ ದಾಸ್ 114 ರನ್

ಹೆನಾನ್ ನಜೀರ್ 124 (113 ಎಸೆತ, 5 ಬೌಂಡರಿ, 5 ಸಿಕ್ಸರ್) ಮತ್ತು ಶುಭಂ ಖಜುರಿಯಾ 120 (84 ಎಸೆತ, 8 ಬೌಂಡರಿ, 8 ಸಿಕ್ಸರ್) ಅವರ ಶತಕಗಳ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 350 ರನ್ ಕಲೆಹಾಕಿತು.

351 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಅಸ್ಸಾಂ 45 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಪರಾಗ್ (174 ರನ್) ಮತ್ತು ರಿಷವ್ ದಾಸ್ 118 ಎಸೆತಗಳಲ್ಲಿ 114 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಆಕ್ರಮಣಕಾರಿ ಬ್ಯಾಟಿಂಗ್‌ಗೆ ಎದುರಾಳಿ ಬೌಲಿಂಗ್‌ಗಳು ತತ್ತರ

ಆಕ್ರಮಣಕಾರಿ ಬ್ಯಾಟಿಂಗ್‌ಗೆ ಎದುರಾಳಿ ಬೌಲಿಂಗ್‌ಗಳು ತತ್ತರ

21 ವರ್ಷ ವಯಸ್ಸಿನ ರಿಯಾನ್ ಪರಾಗ್ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಎದುರಾಳಿ ಬೌಲಿಂಗ್‌ಗಳು ತತ್ತರಿಸಿದರು.

ಬಲಗೈ ಬ್ಯಾಟರ್ ರಿಯಾನ್ ಪರಾಗ್ ಅವರು ರಿಷವ್ ದಾಸ್ ಜೊತೆಗಿನ ಬೃಹತ್ 277 ರನ್‌ಗಳ ಬೃಹತ್ ಜೊತೆಯಾಟವನ್ನು ಸಹ ನಿರ್ಮಿಸಿದರು. ಈ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಆಡಿದ್ದ ಜಮ್ಮು ಮತ್ತು ಕಾಶ್ಮೀರ ಬೌಲರ್‌ಗಳನ್ನು ರಿಯಾನ್ ಪರಾಗ್ ಅವರು ರಿಷವ್ ದಾಸ್ ಜೋಡಿ ದಂಡಿಸಿದರು.

ಈ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ರಿಯಾನ್ ಪರಾಗ್ ಅವರ ಮೂರನೇ ಶತಕ ಗಳಿಸಿ, ಅಸ್ಸಾಂ ತಂಡವನ್ನು ಸೆಮಿಫೈನಲ್ ತಲುಪಿಸಿದರು. ಅಸ್ಸಾಂ ತಂಡವು ಮಹಾರಾಷ್ಟ್ರ ತಂಡದ ವಿರುದ್ಧ ನವೆಂಬರ್ 30ರಂದು ಅಹಮದಾಬಾದ್‌ನಲ್ಲಿ ಸೆಮಿಫೈನಲ್ ಆಡಲಿದೆ.

ರುತುರಾಜ್ ಗಾಯಕ್ವಾಡ್ ದಾಖಲೆ ದ್ವಿಶತಕ; ಮಹಾರಾಷ್ಟ್ರ ಸೆಮಿಸ್‌ಗೆ

ರುತುರಾಜ್ ಗಾಯಕ್ವಾಡ್ ದಾಖಲೆ ದ್ವಿಶತಕ; ಮಹಾರಾಷ್ಟ್ರ ಸೆಮಿಸ್‌ಗೆ

ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ತಂಡಗಳ ನಡುವೆ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಅವರ ದ್ವಿಶತಕದ ನೆರವಿನಿಂದ ಮಹಾರಾಷ್ಟ್ರ ತಂಡವು ಉತ್ತರಪ್ರದೇಶ ಮಣಿಸಿ ಸೆಮಿಫೈನಲ್ ತಲುಪಿತು.

ದ್ವಿಶತಕವೀರ ರುತುರಾಜ್ ಗಾಯಕ್ವಾಡ್ ಅವರು ಒಂದೇ ಓವರಿನಲ್ಲಿ ಏಳು ಸಿಕ್ಸರ್‌ಗಳ ಸಹಾಯದಿಂದ 43 ರನ್‌ಗಳನ್ನು ಬಾರಿಸಿ ದಾಖಲೆ ಬರೆದರು ಮತ್ತು ಮಹಾರಾಷ್ಟ್ರವು ಉತ್ತರಪ್ರದೇಶವನ್ನು 58 ರನ್‌ಗಳಿಂದ ಸೋಲಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಉತ್ತರಪ್ರದೇಶವು ಆಘಾತಕ್ಕೆ ಒಳಗಾಯಿತು. ಏಕೆಂದರೆ ಮಹಾರಾಷ್ಟ್ರ ನಾಯಕ ರುತುರಾಜ್ ಗಾಯಕ್ವಾಡ್ ಮೊಟೆರಾ ಬಿ ಮೈದಾನದಲ್ಲಿ ಏಕಾಂಗಿಯಾಗಿ 159 ಎಸೆತಗಳಲ್ಲಿ 220 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮಹಾರಾಷ್ಟ್ರ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ಗೆ 330 ರನ್ ಗಳಿಸಿತು.

ಉತ್ತರಪ್ರದೇಶ ತಂಡ 47.4 ಓವರ್‌ಗಳಲ್ಲಿ 272 ರನ್‌

ಉತ್ತರಪ್ರದೇಶ ತಂಡ 47.4 ಓವರ್‌ಗಳಲ್ಲಿ 272 ರನ್‌

331 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಉತ್ತರಪ್ರದೇಶ ತಂಡ 47.4 ಓವರ್‌ಗಳಲ್ಲಿ 272 ರನ್‌ಗಳಿಗೆ ಸರ್ವಪತನ ಕಂಡಿತು. ಅದಾಗ್ಯೂ, ವಿಕೆಟ್‌ಕೀಪರ್-ಬ್ಯಾಟರ್ ಆರ್ಯನ್ ಜುಯಲ್ 143 ಎಸೆತಗಳಲ್ಲಿ 159 ರನ್ ಗಳಿಸುವ ಮೂಲಕ ಉತ್ತರಪ್ರದೇಶ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಯಾರೂ ಸಾಥ್ ನೀಡಲಿಲ್ಲ.

ಮಹಾರಾಷ್ಟ್ರ ಪರ ವಿಧ್ವಂಸಕ ಬೌಲಿಂಗ್‌ ಮಾಡಿದ ರಾಜವರ್ಧನ್ ಹಂಗರ್ಗೇಕರ್ ಅವರು ಚೊಚ್ಚಲ ಬಾರಿಗೆ ಐದು ವಿಕೆಟ್ (5/53) ಕಬಳಿಸಿದರು.

Story first published: Monday, November 28, 2022, 21:03 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X