ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

By Mahesh
Vijay Hazare Trophy Final 2018: Karnataka vs Saurashtra Match report

ನವದೆಹಲಿ, ಫೆಬ್ರವರಿ 27: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿರುವ ವಿಜಯ್ ಹಜಾರೆ ಟ್ರೋಫಿ 2018ರ ಅಂತಿಮ ಹಣಾಹಣಿಯಲ್ಲಿ ಸೌರಾಷ್ಟ್ರ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

254ರನ್ ಗುರಿ ಬೆನ್ನು ಹತ್ತಿದ ಸೌರಾಷ್ಟ್ರ ತಂಡಕ್ಕೆ ನಾಯಕ ಚೇತೇಶ್ವರ್ ಪೂಜಾರಾ ಆಸರೆಯಾದರು. 94ರನ್ ಗಳಿಸಿದ ಪೂಜಾಗೆ ಯಾರೊಬ್ಬರೂ ಸಾಥ್ ನೀಡಲಿಲ್ಲ. ರವೀಂದ್ರ ಜಡೇಜ 15ರನ್ ಗಳಿಸಿ ಔಟಾದರು. ಅಂತಿಮವಾಗಿ ಸೌರಾಷ್ಟ್ರ 46.3ಓವರ್ ಗಳಲ್ಲಿ 212ರನ್ನಿಗೆ ಆಲೌಟ್ ಆಯಿತು. ಕರ್ನಾಟಕ ಪರ ಪ್ರಸಿಧ್ ಕೃಷ್ಣ 3, ಕೆ ಗೌತಮ್ 3 ವಿಕೆಟ್ ಉದುರಿಸಿದರು.

ಕರ್ನಾಟಕ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಗೆ ಇಳಿದ ಕರ್ನಾಟಕ ಕಳಪೆ ಆರಂಭ ಪಡೆಯಿತು. ಇಬ್ಬರು ಆರಂಭಿಕ ಆಟಗಾರರು ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು.

ಮಾಯಾಂಕ್ ಅಗರವಾಲ್ ಮತ್ತೊಮ್ಮೆ ರಾಜ್ಯಕ್ಕೆ ಆಸರೆಯಾಗಿದ್ದು, ಆರ್ಧಶತಕ 90ರನ್ (79 ಎಸೆತಗಳು, 11 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಆರ್ ಸಮರ್ಥ್ ಮತ್ತೊಮ್ಮೆ ಸಾಥ್ ನೀಡಿ 48ರನ್ ಹಾಗೂ ಪವನ್ ದೇಶಪಾಂಡೆ 49ರನ್ ಗಳಿಸಿದರು.

ಶ್ರೇಯಸ್ ಗೋಪಾಲ್ 31ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು. ಅಂತಿಮವಾಗಿ ಕರ್ನಾಟಕ 45.5ಓವರ್ ಗಳಲ್ಲಿ 253/10 ಸ್ಕೋರ್ ಮಾಡಿತು. ಸೌರಾಷ್ಟ್ರ ಪರ ಕಮಲೇಶ್ ಮಕ್ವಾನಾ 8.5 ಓವರ್ ಗಳಲ್ಲಿ 34ರನ್ನಿತ್ತು 4 ವಿಕೆಟ್ ಗಳಿಸಿದರು.

ಆಡುವ ಹನ್ನೊಂದು :
ಕರ್ನಾಟಕ : ಮಾಯಾಂಕ್ ಅಗರವಾಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ರವಿಕುಮಾರ್ ಸಮರ್ಥ್, ಕೃಷ್ಣಪ್ಪ ಗೌತಮ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ಪ್ರದೀಪ್ ಟಿ, ಪ್ರಸಿಧ್ ಕೃಷ್ಣ, ಶ್ರೀನಾಥ್ ಅರವಿಂದ್.

ಸೌರಾಷ್ಟ್ರ: ಸಮರ್ಥ್ ವ್ಯಾಸ್, ಅವಿ ಬರೋಟ್(ವಿಕೆಟ್ ಕೀಪರ್), ಚಿರಾಗ್ ಜಾನಿ, ಚೇತೇಶ್ವರ್ ಪೂಜಾರಾ(ನಾಯಕ), ರವೀಂದ್ರ ಜಡೇಜ, ಅರ್ಪಿತ್ ವಸವದ, ಪ್ರೇರಕ್ ಮಂಕಡ್, ಧರ್ಮೇಂದ್ರಸಿನ್ಹ ಜಡೇಜ, ಶೌರ್ಯ ಸನಂದಿಯ, ಕಮಲೇಶ್

Story first published: Tuesday, February 27, 2018, 18:49 [IST]
Other articles published on Feb 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X