ಬೆಂಗಳೂರು, ಅಕ್ಟೋಬರ್ 7: ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ದೇವದತ್ ಪಡಿಕ್ಕಳ್, ಮನೀಷ್ ಪಾಂಡೆ, ಬಿಆರ್ ಶರತ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಬ್ಯಾಟಿಂಗ್, ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್ ಮಾರಕ ಬೌಲಿಂಗ್ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಂಧ್ರ ವಿರುದ್ಧ ಕರ್ನಾಟಕ 53 ರನ್ ಜಯ ಗಳಿಸಿದೆ.
ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ ಬರೀ 40 ಯಾಕೆ?!
ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್‌ನಲ್ಲಿ ಅಕ್ಟೋಬರ್ 7ರಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕದಿಂದ ರಾಹುಲ್ 33, ಪಡಿಕ್ಕಳ್ 44, ಮನೀಶ್ 50, ಅಭಿಷೇಕ್ ರೆಡ್ಡಿ 18, ಶ್ರೇಯಸ್ ಗೋಪಾಲ್ 11, ಶರತ್ ಬಿಆರ್ 45, ಕೃಷ್ಣಪ್ಪ ಗೌತಮ್ 34 ರನ್ ಕೊಡುಗೆಯಿತ್ತರು.
ಮಾಜಿ ನಾಯಕ ಎಂಎಸ್ ಧೋನಿ ವೃತ್ತಿ ಬದುಕು ಮಸುಕು ಮಸುಕು!
ರಾಜ್ಯ ತಂಡ 50 ಓವರ್‌ಗೆ 7 ವಿಕೆಟ್ ಕಳೆದು 278 ರನ್ ಮಾಡಿತು. ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಯಾರ ಪೃಥ್ವಿರಾಜ್, ಕೆವಿ ಶಶಿಕಾಂತ್, ಶೋಯೆಬ್ ಎಂಡಿ ಖಾನ್, ದಸರಿ ಸ್ವರೂಪ್ ತಲಾ 1 ವಿಕೆಟ್, ಅಶ್ವಿನ್ ಸ್ವರೂಪ್ 2 ವಿಕೆಟ್ ಪಡೆದರು.
ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!
ಗುರಿ ಬೆಂಬತ್ತಿದ ಆಂಧ್ರ, ಶ್ರೀಕಾರ್ ಭರತ್ 38, ಪ್ರಶಾಂತ್ ಕುಮಾರ್ 78, ಕರಣ್ ಸಿಂಧೆ 20, ಶೋಯೆಬ್ ಎಂಡಿ ಖಾನ್ 28, ಯಾರ ಪೃಥ್ವಿರಾಜ್ 18 ರನ್‌ನೊಂದಿಗೆ 46.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 225 ರನ್ ಪೇರಿಸಲು ಶಕ್ತವಾಯ್ತು. ಆಂಧ್ರ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ 3, ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದು ಗಮನ ಸೆಳೆದರು.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ