26 ವರ್ಷಗಳ ಒಡಿಐ ದಾಖಲೆ ನುಚ್ಚುನೂರು ಮಾಡಿದ ಕಿಂಗ್ ಕೊಹ್ಲಿ!

ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 11: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, ಗುರುವಾರ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾದ ಕಾರಣ ವಿರಾಟ್‌ಗೆ ಬ್ಯಾಟಿಂಗ್‌ಗೆ ಇಳಿಯುವ ಅವಕಾಶ ಸಿಕ್ಕಿರಲಿಲ್ಲ.
ಆದರೆ, ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಕೊಹ್ಲಿ ರನ್ ಹೊಳೆ ಹರಿಸುವುದನ್ನು ಮುಂದುವರಿಸಿ ಜಾವೆದ್ ಮಿಯಾಂದಾದ್ ಅವರ 26 ವರ್ಷಗಳ ಸುದೀರ್ಘಾವಧಿಯ ವಿಶ್ವ ದಾಖಲೆಯನ್ನು ನುಚ್ಚುನೂರು ಮಾಡಿದರು.
ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲೇ ಶೆಲ್ಡನ್ ಕಾಟ್ರೆಲ್ ಬೌಲಿಂಗ್‌ನಲ್ಲಿ ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಲಗೆ ಬಿದ್ದು ಪೆವಿಲಿಯನ್ ಸೇರಿದ್ದರು. ಬಳಿಕ ಕ್ರೀಸ್‌ಗೆ ಬಂದ ಕಿಂಗ್ ಕೊಹ್ಲಿ ನಿರಾಯಾಸವಾಗಿ ವಿಂಡೀಸ್ ಬೌಲರ್‌ಗಳ ಎದುರು ಬ್ಯಾಟ್ ಬೀಸಲಾರಂಭಿಸಿದರು.
ಇನಿಂಗ್ಸ್‌ನ 5ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ, ಕಾಟ್ರೆಲ್ ಅವರ ಬೌಲಿಂಗ್‌ನಲ್ಲಿ ಒಂದು ರನ್ ಕದಿಯುವ ಮೂಲಕ ನೂತನ ದಾಖಲೆಗೆ ಬೇಕಿದ್ದ 19 ರನ್‌ಗಳನ್ನು ಗಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ನಾಯಕನ ಮುಡಿಗೇರಿತು.
ಪಾಕ್ ತಂಡದ ಮಾಜಿ ನಾಯಕ ಮಿಯಾಂದಾದ್ ವೆಸ್ಟ್ ಇಂಡೀಸ್ ವಿರುದ್ಧ 64 ಇನಿಂಗ್ಸ್‌ಗಳಲ್ಲಿ 1930 ರನ್‌ಗಳನ್ನು ದಾಖಲಿಸಿದ್ದರೆ, ಕೊಹ್ಲಿ ಕೇವಲ 34 ಇನಿಂಗ್ಸ್‌ಗಳಲ್ಲಿ ಪಾಕಿಸ್ತಾನಿ ಕ್ರಿಕೆಟಿಗನ ದಾಖಲೆಯನ್ನು ಅಳಿಸಿಹಾಕಿದರು.
ವೆಸ್ಟ್ ಇಂಡೀಸ್ ವಿರುದ್ಧ ಒಡಿಐನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಭಾರತೀಯ ಕ್ರಿಕೆಟಿಗರು

ವಿರಾಟ್ ಕೊಹ್ಲಿ
35* ಪಂದ್ಯ
34* ಇನಿಂಗ್ಸ್
1945* ರನ್
157* ಗರಿಷ್ಠ
72.03 ಸರಾಸರಿ
96.33 ಸ್ಟ್ರೈಕ್‌ರೇಟ್
07 ಶತಕ
11* ಅರ್ಧಶತಕ

ಸಚಿನ್ ತೆಂಡೂಲ್ಕರ್
39 ಪಂದ್ಯ
39 ಇನಿಂಗ್ಸ್
1573 ರನ್
141* ಗರಿಷ್ಠ
52.43 ಸರಾಸರಿ
78.02 ಸ್ಟ್ರೈಕ್‌ರೇಟ್
04 ಶತಕ
11 ಅರ್ಧಶತಕ

ರಾಹುಲ್ ದ್ರಾವಿಡ್
40 ಪಂದ್ಯ
38 ಇನಿಂಗ್ಸ್
1348 ರನ್
109* ಗರಿಷ್ಠ
42.12 ಸರಾಸರಿ
74.39 ಸ್ಟ್ರೈಕ್‌ರೇಟ್
03 ಶತಕ
08 ಅರ್ಧಶತಕ

ರೋಹಿತ್ ಶರ್ಮಾ
29* ಪಂದ್ಯ
27 ಇನಿಂಗ್ಸ್
1243 ರನ್
162 ಗರಿಷ್ಠ
62.15 ಸರಾಸರಿ
89.87 ಸ್ಟ್ರೈಕ್‌ರೇಟ್
02 ಶತಕ
10 ಅರ್ಧಶತಕ

ಸೌರವ್ ಗಂಗೂಲಿ
27 ಪಂದ್ಯ
27 ಇನಿಂಗ್ಸ್
1142 ರನ್
98 ಗರಿಷ್ಠ
47.58 ಸರಾಸರಿ
72.18 ಸ್ಟ್ರೈಕ್‌ರೇಟ್
11 ಅರ್ಧಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications