33ನೇ ಶತಕ ಬಾರಿಸಿ ದಾಖಲೆ ಸ್ಥಾಪಿಸಿದ ಕೊಹ್ಲಿ!

Posted By:
Virat Kohli completes a unique set of centuries

ಜೋಹಾನ್ಸ್ ಬರ್ಗ್, ಫೆಬ್ರವರಿ 02: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಚೇಸಿಂಗ್ ವೇಳೆಯಲ್ಲಿ ಮತ್ತೊಮ್ಮೆ ಶತಕ ದಾಖಲಿಸಿದ್ದಾರೆ.

ಕೊಹ್ಲಿ ಶತಕದ ನೆರವಿನಿಂದ ಭಾರತ ಮತ್ತೆ ಜಯಭೇರಿ ಬಾರಿಸಿದೆ. ಈ ಮೂಲಕ 6 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

270ರನ್ ಚೇಸ್ ಮಾಡಿದ ಭಾರತಕ್ಕೆ ವಿರಾಟ್ ಕೊಹ್ಲಿ ಅವರ ಶತಕ 112ರನ್ ಆಸರೆಯಾಯಿತು. ದಕ್ಷಿಣ ಅಫ್ರಿಕಾವನ್ನು 6 ವಿಕೆಟ್ ಗಳಿಂದ ಸೋಲಿಸಿದ ಭಾರತವು ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಜಯ ದಾಖಲಿಸಿತು.

ಸ್ಕೋರ್ ಕಾರ್ಡ್

ಇದಕ್ಕೂ ಮುಂಚೆ 2011ರ ಜನವರಿ 08ರಂದು ಗೆಲುವು ಸಾಧಿಸಿತ್ತು. ಸತತ 17 ಗೆಲುವಿನ ನಂತರ ದಕ್ಷಿಣ ಆಫ್ರಿಕಾ ಮೊದಲ ಸೋಲು ಕಂಡಿದೆ.

* ಚೇಸಿಂಗ್ ನಲ್ಲಿ ಇದು ಕೊಹ್ಲಿ ಅವರ 20ನೇ ಶತಕವಾಗಿದ್ದು, ಈ ಪೈಕಿ 18ರಲ್ಲಿ ಭಾರತ ಯಶ ಕಂಡಿದೆ.
* ಕೊಹ್ಲಿ ಅವರ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 33ನೇ ಶತಕವಾಗಿದೆ.

* ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಿಂಗ್ಸ್ ಮೀಡ್ ಡರ್ಬನ್ ನಲ್ಲಿ ಶತಕ ಬಾರಿಸಿದರು.
* ಇಲ್ಲಿ ತನಕ ಕೊಹ್ಲಿ ಅವರು ತಾವಾಡಿದ 9 ದೇಶಗಳ ವಿರುದ್ಧ ಆ ದೇಶದಲ್ಲೇ ಶತಕ ಬಾರಿಸಿದ್ದಾರೆ.
* ಪಾಕಿಸ್ತಾನ ವಿರುದ್ಧ ಪಾಕಿಸ್ತಾನದಲ್ಲಿ ಶತಕ ಬಾರಿಸುವ ಅವಕಾಶ ಸಿಕ್ಕಿಲ್ಲ.
* ಸಚಿನ್ ತೆಂಡೂಲ್ಕರ್ ಹಾಗೂ ಸನತ್ ಜಯಸೂರ್ಯ ಅವರು ಮಾತ್ರ ಎಲ್ಲಾ 9 ದೇಶಗಳ ವಿರುದ್ಧ ಶತಕ ಬಾರಿಸಿದ ಇತರೆ ಆಟಗಾರರಾಗಿದ್ದಾರೆ.
* ಸಚಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಹಾಗೂ ಜಯಸೂರ್ಯ ಅವರು ಜಿಂಬಾಬ್ವೆ ವಿರುದ್ಧ ಶತಕ ಬಾರಿಸಲು ಆಗಿಲ್ಲ.

*

Story first published: Friday, February 2, 2018, 17:07 [IST]
Other articles published on Feb 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ