WTC Final: ಸೋಲಿನ ಬಳಿಕ ತಂಡದಲ್ಲಿ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಮಾತು

ವಿಶ್ವ ಟೆಸ್ಟ್ ಚಾಂಪಿಯನ್‌ ಲೀಗ್ ಹಂತದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದ ಭಾರತ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲು ಕಂಡಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆಯನ್ನು ನೀಡಿದ್ದು ತಂಡದಲ್ಲಿ ಬೇಕಿರುವ ಅಗತ್ಯ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

ಸೋಲಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ ನಾವು ತಂಡದ ಸೋಲಿನ ಬಗ್ಗೆ ಪರಾಮರ್ಶೆ ಮಾಡುವುದನ್ನು ಮುಂದುವರಿಸಲಿದ್ದೇವೆ. ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಬೇಕಾಗಿರುವ ಸಂಗತಿಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಆದರೆ ಯಾವುದೇ ಸಿದ್ಧ ಮಾದರಿಯನ್ನುನಾವು ಅನುಸರಿಸುವುದಿಲ್ಲ ಅಥವಾ ಅಂಥವುಗಳಿಗೆ ನಾವು ಬಲಿಯಾಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರWTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

ಇದೇ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಆಟಗಾರರ ಬದಲಾವಣೆಯ ಬಗ್ಗೆ ಸುಳಿವನ್ನು ನೀಡಿದ್ದಾರೆ. ಕೊಹ್ಲಿ ಹೇಳಿದ್ದೇನು ಮುಂದೆ ಓದಿ..

ತಂಡವನ್ನು ಶೀಘ್ರವಾಗಿ ಬಲಪಡಿಸಿಕೊಳ್ಳಬೇಕು

ತಂಡವನ್ನು ಶೀಘ್ರವಾಗಿ ಬಲಪಡಿಸಿಕೊಳ್ಳಬೇಕು

ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ 2023ರಲ್ಲಿ ಆಯೋಜನೆಯಾಗಲಿದೆ. ಅದಕ್ಕೂ ಮುನ್ನ ಏಕದಿನ ವಿಶ್ವಕಪ್‌ ಭಾರತದಲ್ಲಿಯೇ ಆಯೋಜನೆಯಾಗಲಿದೆ. ಈ ಹಿನ್ನೆಲೆಯಲ್ಲಿ ತಂಡವನ್ನು ಆದಷ್ಟು ಶೀಘ್ರವಾಗಿ ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ

ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ

"ನಾವು ಕಳೆದ ಕೆಲ ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿದ್ದೇವೆ. ಇಂತಾ ಸಂದರ್ಭದಲ್ಲಿ ನಮ್ಮ ಮಾನದಂಡಗಳನ್ನು ಇದ್ದಕ್ಕಿದ್ದಂತೆ ಕೈಬಿಡಿವುದನ್ನು ಇಷ್ಟಪಡುವುದಿಲ್ಲ. ಆಟದ ಅಗತ್ಯಗಳನ್ನು ಅರ್ಥೈಸಿಕೊಂಡು ನಿರ್ದಿಷ್ಟ ಸ್ಥಳದಲ್ಲಿ ನಿಖರವಾಗಿ ಅರ್ಥಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಈ ಬಗ್ಗೆ ಚರ್ಚೆಯನ್ನು ನಡೆಸಿ ಮುಂದಿನ ದಿನಗಳಲ್ಲಿ ಸರಿಯಾದ ನಿರ್ಧಾರಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಸೀಮಿತ ಓವರ್‌ಗಳ ತಂಡ ಬಲಿಷ್ಟವಾಗಿದೆ

ಸೀಮಿತ ಓವರ್‌ಗಳ ತಂಡ ಬಲಿಷ್ಟವಾಗಿದೆ

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡ ಸಾಕಷ್ಟು ಬಲಿಷ್ಠವಾಗಿದ್ದು ಆಳದಿಂದ ಬಲಿಷ್ಟವಾಗಿದೆ. ಅದೇ ರೀತಿಯಲ್ಲಿ ಟೆಸ್ಟ್ ಮಾದರಿಯಲ್ಲಿಯೂ ಸೂಕ್ತ ಮನಸ್ಥಿತಿಯನ್ನು ಹೊಂದಿದ ಆಟಗಾರರನ್ನು ಹೊಂದಲು ಬಯಸುವುದಾಗಿ ಹೇಳಿದ್ದಾರೆ.

ಸೂಕ್ತ ಮನಸ್ಥಿತಿಯನ್ನು ಹೊಂದಿದ ಆಟಗಾರರು ಬೇಕು

ಸೂಕ್ತ ಮನಸ್ಥಿತಿಯನ್ನು ಹೊಂದಿದ ಆಟಗಾರರು ಬೇಕು

"ನಮ್ಮ ವೈಟ್‌ಬಾಲ್ ತಂಡವನ್ನು ಗಮನಿಸಿದರೆ ಹೆಚ್ಚು ಬಲಿಷ್ಟವಾಗಿದೆ ಮತ್ತು ಆಟಗಾರರು ಆತ್ಮವಿಶ್ವಾಸದಿಂದಿದ್ದು ಯಾವಾಗಲೂ ಸಿದ್ಧರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ನಾವು ಇದೇ ಕೆಲಸವನ್ನು ನಾವು ಮಾಡಬೇಕಿದೆ. ಯಾವ ಕಾರ್ಯತಂತ್ರ ಕೆಲಸ ಮಾಡುತ್ತದೆ ಮತ್ತು ನಾವು ಯಾವ ರೀತಿಯಲ್ಲಿ ನಿರ್ಭಯವಾಗಿ ಆಡುವುದಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಮರುಮೌಲ್ಯಮಾಪನ ಮಾಡಬೇಕಿದೆ. ಅದಕ್ಕಾಗಿ ಸೂಕ್ತ ರೀತಿಯ ಮನಸ್ಥಿತಿಯನ್ನು ಹೊಂದಿರುವ ಆಟಗಾರರನ್ನು ಹೊಂದಬೇಕಿದೆ" ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 24, 2021, 16:30 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X