ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಇದಕ್ಕೂ ಮುನ್ನ ನಡೆದ ಟಿ20 ಸರಣಿಯಲ್ಲೂ ಭಾಗವಹಿಸಿರಲಿಲ್ಲ.
ಟಿ20 ಸರಣಿಯನ್ನ ಭಾರತ 1-0 ಅಂತರದಲ್ಲಿ ಗೆದ್ದ ಬಳಿಕ ಶುಕ್ರವಾರ(ನ.25) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ. ಆದ್ರೆ ಉಳಿದ ಎರಡು ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುವ ಗುರಿಯನ್ನ ಹೊಂದಿದೆ.
ನ್ಯೂಜಿಲೆಂಡ್ ಪ್ರವಾಸದ ಬಳಿಕ ಭಾರತವು ಬಾಂಗ್ಲಾಕ್ಕೆ ಪ್ರವಾಸ ಕೈಗೊಳ್ಳಲಿದ್ದು ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಈಗಾಗಲೇ ವಿಶ್ರಾಂತಿ ಪಡೆದಿರುವ ಕೊಹ್ಲಿ, ರೋಹಿತ್, ಕೆ.ಎಲ್ ರಾಹುಲ್ ಕಂಬ್ಯಾಕ್ ಮಾಡಲಿದ್ದಾರೆ.
ಟೀಂ ಇಂಡಿಯಾ ಕಂಡಂತಹ ಗ್ರೇಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಈಗಾಗಲೇ ಈ ಸರಣಿಗಾಗಿ ಅಭ್ಯಾಸ ಶುರು ಮಾಡಿದ್ದು, ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಜೊತೆಗೆ ಚಾರಿಟಿಗಾಗಿ ತನ್ನ ವಸ್ತುಗಳ ಮೇಲೆ ಸಹಿ ಹಾಕುವ ಮೂಲಕ ಚಾರಿಟಿ ಉದ್ದೇಶಕ್ಕಾಗಿ ಹರಾಜಿಗೆ ಕಳುಹಿಸಿಕೊಡುತ್ತಿದ್ದಾರೆ.
ಬೇರೆ ಆಟಗಾರರಂತೆ ಕೇವಲ ವಿಶ್ರಾಂತಿ ಪಡೆದು ಸಮಯ ಕಳೆಯದ ವಿರಾಟ್ ಕೊಹ್ಲಿ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತನ್ನ ವಸ್ತುಗಳನ್ನು ಹರಾಜಿಗೆ ಕಳುಹಿಸಿಕೊಡಲು ವಿರಾಟ್ ತನ್ನ ಹಸ್ತಾಕ್ಷರ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹ್ಯಾಟ್, ಶೂ, ಟೀ ಶರ್ಟ್‌ಗಳಿಗೆ ಕೊಹ್ಲಿ ಹಸ್ತಾಕ್ಷರ ಹಾಕುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ.
ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಿಂಗ್ ಕೊಹ್ಲಿ ಅನೇಕ ಜನರ ಹೃದಯ ಗೆದ್ದಿದ್ದಾರೆ. ಕೇವಲ ಮೈದಾನದ ಒಳಗಷ್ಟೇ ನೆರವಾಗದ ವಿರಾಟ್, ಆಫ್ ದಿ ಫೀಲ್ಡ್‌ನಲ್ಲೂ ಕೂಡ ತನ್ನ ಕೊಡುಗೆ ನೀಡುತ್ತಿದ್ದಾರೆ.
Virat Kohli and his foundation will be doing charity auction of Kohli's signed T-shirt, shoes, hats - This is great gesture from King Kohli. pic.twitter.com/jH37bytF3p
— CricketMAN2 (@ImTanujSingh) November 24, 2022
Virat Kohli foundation will be doing charity auction of hats, shoes etc of Kohli - great work by King.
— Johns. (@CricCrazyJohns) November 24, 2022
Proud to be his fan 😎😍. Kind man on and off the field 🥰pride of India and icon of world cricket 👏👏👏
— Depressed ICT fan 💔 (@CricCrazy_1) November 24, 2022