ಬಿಸಿಸಿಐ ಗುತ್ತಿಗೆ ಬಗ್ಗೆ ಅಪಸ್ವರ,ಕೊಹ್ಲಿಗೆ ಎ ಪ್ಲಸ್, ಸಂಪೂರ್ಣ ಪಟ್ಟಿ

Posted By:
Full list of BCCI's contracted players for 2018; Kohli, Bumrah lead new contract; Dhoni relegated

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಎಂಎಸ್​ಕೆ ಪ್ರಸಾದ್ ನೇತೃತ್ವದ ಮೂವರು ಸದಸ್ಯರ ಆಯ್ಕೆ ಸಮಿತಿ ಗುತ್ತಿಗೆಗೆ ಒಳಪಟ್ಟ 26 ಆಟಗಾರರ ಪಟ್ಟಿಯನ್ನು ಆಯ್ಕೆ ಮಾಡಿ ಪ್ರಕಟಿಸಿದ್ದು, ಈಗ ಭಾರಿ ಚರ್ಚೆಗೊಳಲಾಗುತ್ತಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಯುವ ವೇಗಿ ಜಸ್ ಪ್ರೀತ್ ಬೂಮ್ರಾಗೆ ಎ ಪ್ಲಸ್ ಶ್ರೇಣಿ ಸಿಕ್ಕಿದೆ. ಎಂಎಸ್ ಧೋನಿ ಅವರನ್ನು ಕಡೆಗಣಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ,ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಕಾನೂನನ್ನು ಮೀರುತ್ತಿದ್ದು, ಈ ಕುರಿತಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ ಎಂದಿದ್ದಾರೆ. ಆದರೆ, ಸಿಒಎ ಚೇರ್ಮನ್ ವಿನೋದ್ ರಾಯ್ ಅವರು ಹೊಸ ಗುತ್ತಿಗೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇದೇ ಮೊದಲ ಬಾರಿಗೆ ಪರಿಚಯಿಸಿರುವ ಎ ಪ್ಲಸ್ ಶ್ರೇಣಿಯ ಗುತ್ತಿಗೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಐವರು ಆಟಗಾರರಿದ್ದಾರೆ. ಮಹಿಳಾ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸಿ ಗ್ರೇಡ್ ಗುತ್ತಿಗೆಯನ್ನು ಬಿಸಿಸಿಐ ಆರಂಭಿಸಿದ್ದು, ವಾರ್ಷಿಕ 10 ಲಕ್ಷ ರೂ. ವೇತನ ಪಡೆಯಲಿದ್ದಾರೆ.

Full list of BCCI's contracted players for 2018; Kohli, Bumrah lead new contract; Dhoni relegated

ಎ ಪ್ಲಸ್ (ವಾರ್ಷಿಕ 7 ಕೋಟಿ ರೂ.): ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ;

ಎ (ವಾರ್ಷಿಕ 5 ಕೋಟಿ ರೂ.): ಅಶ್ವಿನ್, ಜಡೇಜಾ, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಎಂಎಸ್ ಧೋನಿ, ವೃದ್ಧಿಮಾನ್ ಸಾಹ;

ಬಿ (ವಾರ್ಷಿಕ 3 ಕೋಟಿ ರೂ.): ಕೆಎಲ್ ರಾಹುಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಇಶಾಂತ್ ಶರ್ಮ;

Full list of BCCI's contracted players for 2018; Kohli, Bumrah lead new contract; Dhoni relegated

ಸಿ (ವಾರ್ಷಿಕ 1 ಕೋಟಿ ರೂ.): ಕೇದರ್ ಜಾಧವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಜಯಂತ್ ಯಾದವ್.

Full list of BCCI's contracted players for 2018; Kohli, Bumrah lead new contract; Dhoni relegated

ಮಹಿಳೆಯರ ಗುತ್ತಿಗೆ ವಿವರ:

ಎ (ವಾರ್ಷಿಕ 50 ಲಕ್ಷ ರೂ.): ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ವನ್​ಪ್ರೀತ್ ಕೌರ್, ಸ್ಮೃತಿ ಮಂದನಾ;

ಬಿ (ವಾರ್ಷಿಕ 30 ಲಕ್ಷ ರೂ.): ಪೂನಮ್ ಯಾದವ್, ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್, ಎಕ್ತಾ ಬಿಷ್ಟ್, ಶಿಖಾ ಪಾಂಡೆ, ದೀಪ್ತಿ ಶರ್ಮ.

ದೇಶೀಯ ಆಟಗಾರರ ಪಂದ್ಯ ಸಂಭಾವನೆಯಲ್ಲಿ ಬಿಸಿಸಿಐ ಶೇ. 200ರಷ್ಟು ಏರಿಕೆ ಮಾಡಿದೆ. ಇದರನ್ವಯ ಪುರುಷರ ವಿಭಾಗದ ರಾಜ್ಯ ತಂಡದ ಆಟಗಾರರು ಪಂದ್ಯಕ್ಕೆ 35 ಸಾವಿರ ರೂ. ಪಡೆಯಲಿದ್ದರೆ, ಮೀಸಲು ಆಟಗಾರರು 17,500 ರೂ. ಪಡೆಯಲಿದ್ದಾರೆ. ಮಹಿಳಾ ವಿಭಾಗದ ರಾಜ್ಯ ತಂಡದ ಆಟಗಾರ್ತಿಯರು ಪಂದ್ಯ 12,500 ರೂ. ಹಾಗೂ ಮೀಸಲು ಆಟಗಾರ್ತಿಯರು 6250 ರೂ. ಪಡೆಯಲಿದ್ದಾರೆ.

Full list of BCCI's contracted players for 2018; Kohli, Bumrah lead new contract; Dhoni relegated

ಟಿ20 ಪಂದ್ಯದ ವೇಳೆ ಹಾಲಿ ಮೊತ್ತದ ಶೇ. 50ರಷ್ಟು ಹಣವನ್ನು ಪಡೆದುಕೊಳ್ಳಲಿದ್ದಾರೆ. ಪುರುಷರ ವಿಭಾಗದ 23 ವಯೋಮಿತಿ ಆಟಗಾರರು 17,500 ರೂ. (ಆಡುವ ಬಳಗ), 8,750 ರೂ. (ಮೀಸಲು ಆಟಗಾರರು) ಪಡೆಯಲಿದ್ದರೆ, 19 ವಯೋಮಿತಿ ಆಟಗಾರರು 10,500 ಹಾಗೂ 5,250 ರೂಪಾಯಿ, 16 ವಯೋಮಿತಿ ಆಟಗಾರರು 3500 ಹಾಗೂ 1750 ರೂಪಾಯಿ ಪಡೆಯಲಿದ್ದಾರೆ. ಮಹಿಳಾ ವಿಭಾಗದ 23, 19 ಹಾಗೂ 16 ವಯೋಮಿತಿ ಆಟಗಾರ್ತಿಯರು 12,500 ರೂ. (ಆಡುವ ಬಳಗ), 6250 ರೂ. (ಮೀಸಲು ಆಟಗಾರ್ತಿಯರು) ಪಡೆಯಲಿದ್ದಾರೆ.

Story first published: Friday, March 9, 2018, 20:55 [IST]
Other articles published on Mar 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ