ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ 'ಐಸಿಸಿ ವರ್ಷದ ಕ್ರಿಕೆಟಿಗ' ಗೌರವ

By Manjunatha
Virat kohli named as ICC cricketer of the year

ನವ ದೆಹಲಿ, ಜನವರಿ 19: ಸತತ ಎರಡು ಟೆಸ್ಟ್ ಸೋಲಿನಿಂದ ಕಂಗೆಟ್ಟಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೊಹ್ಲಿ ಅವರು ಐಸಿಸಿ ವರ್ಷದ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ವರ್ಷದ ಶ್ರೇಷ್ಠ ಕ್ರಿಕೆಟಿಗನಿಗೆ ನೀಡುವ ಪ್ರತಿಷ್ಠಿತ ಸರ್‌ ಗ್ಯಾರಿಫೀಲ್ಡ್ ಸೋಬರ್ಸ್ ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಪಾತ್ರರಾಗಿದ್ದಾರೆ. ಇದರೊಟ್ಟಿಗೆ ವರ್ಷದ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ಏಕದಿನ ಕ್ರಿಕೆಟಿಗ ಪ್ರಶಸ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ.

ಐಸಿಸಿ ನಿಯಮ ಮೀರಿದ ನಾಯಕ ವಿರಾಟ್ ಕೊಹ್ಲಿಗೆ ದಂಡಐಸಿಸಿ ನಿಯಮ ಮೀರಿದ ನಾಯಕ ವಿರಾಟ್ ಕೊಹ್ಲಿಗೆ ದಂಡ

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರವಿಚಂದ್ರನ್ ಅಶ್ವಿನ್ ಅವರ ನಂತರ ಪ್ರತಿಷ್ಠಿತ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಪಾತ್ರವಾದ ನಾಲ್ಕನೇ ಭಾರತಿಯ ಕ್ರಿಕೆಟ್ ಆಟಗಾರ ಕೊಹ್ಲಿ. 2016ರ ಸೆಪ್ಟೆಂಬರ್‌ ನಿಂದ 2017ರ ಡಿಸೆಂಬರ್‌ ಅವಧಿಯಲ್ಲಿ ಅವರ ಸಾಧನೆಯ ಆಧಾರದಲ್ಲಿ ಕೊಹ್ಲಿ ಅವರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್‌, ವರ್ಷದ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಯಜುವೇಂದ್ರ ಚಾಹಲ್‌ಗೆ 'ವರ್ಷದ ಶ್ರೇಷ್ಠ ಟ್ವೆಂಟಿ-20 ಪ್ರದರ್ಶನ' ಪ್ರಶಸ್ತಿ ಸಿಕ್ಕಿದೆ.

21ನೇ ಶತಕ ಗಳಿಸಿ, ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ21ನೇ ಶತಕ ಗಳಿಸಿ, ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ

'ಇದು ಬಹುದೊಡ್ಡ ಗೌರವ. ಕಳೆದ ವರ್ಷ ಅಶ್ವಿನ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿ ನನಗೆ ಸಿಕ್ಕಿದೆ. ಸತತ ಎರಡು ವರ್ಷ ಭಾರತದವರೇ ಪ್ರಶಸ್ತಿ ಜಯಿಸಿದ್ದು ಹೆಮ್ಮೆಯ ವಿಷಯ. ಈ ಗೌರವ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವ ಐಸಿಸಿಗೆ ಆಭಾರಿಯಾಗಿದ್ದೇನೆ. ಇತರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರಿಗೂ ಅಭಿನಂದನೆ' ಎಂದು ಕೊಹ್ಲಿ ಹೇಳಿದ್ದಾರೆ.

ಟೆಸ್ಟ್ನಲ್ಲಿ 900 ಪಾಯಿಂಟ್ಸ್‌ಗೆ ಏರಿದ ಕೊಹ್ಲಿ
900 ಪಾಯಿಂಟ್ಸ್ ಗಳಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 900 ಪಾಯಿಂಟ್ಸ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮುಂಚೆ ಸುನಿಲ್ ಗವಾಸ್ಕರ್ ಅವರು ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಶತಕ ಗಳಿಸುವ ಮೂಲಕ ತಮ್ಮ ಪಾಯಿಂಟ್ಸ್ ಅನ್ನು 900ಕ್ಕೆ ಕೊಹ್ಲಿ ಏರಿಸಿಕೊಂಡರು.

ಗುರುವಾರ ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವನ್ ಸ್ಮಿತ್ ಅವರಿದ್ದಾರೆ.

ವಿರಾಟ್‌, ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ 900 ಪಾಯಿಂಟ್ಸ್ ಗಳಿಸಿದ ಒಟ್ಟಾರೆ 31ನೇ ಆಟಗಾರ. ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ (961) ಮತ್ತು ಸ್ಟೀವ್‌ ಸ್ಮಿತ್‌ (947) ಈ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

Story first published: Friday, January 19, 2018, 10:59 [IST]
Other articles published on Jan 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X