ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಇಂಗ್ಲೆಂಡ್ ನ 'ಬಾರ್ಮಿ ಆರ್ಮಿ' ಪ್ರಶಸ್ತಿ

ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಇಂಗ್ಲೆಂಡ್ ನಲ್ಲಿ ಗೌರವ | Oneindia Kannada
Virat Kohli presented with Player of the Year trophies by Barmy Army

ನವದೆಹಲಿ, ಜುಲೈ 26: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ ದೊರೆತಿದೆ. 2017 ಮತ್ತು 2018ನೇ ಸಾಲಿನಲ್ಲಿ ಅಪೂರ್ವ ಬ್ಯಾಟಿಂಗ್ ಸಾಧನೆ ತೋರಿದ್ದಕ್ಕಾಗಿ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದೆ.

ಹೆಟ್ಮರ್ ಭರ್ಜರಿ ಶತಕ: ಬಾಂಗ್ಲಾ ವಿರುದ್ಧ ವಿಂಡೀಸ್ ಗೆ ರೋಚಕ ಜಯಹೆಟ್ಮರ್ ಭರ್ಜರಿ ಶತಕ: ಬಾಂಗ್ಲಾ ವಿರುದ್ಧ ವಿಂಡೀಸ್ ಗೆ ರೋಚಕ ಜಯ

ಇಂಗ್ಲೆಂಡ್ ಕ್ರಿಕೆಟ್ ನ ಅಭಿಮಾನಿ ಬಳಗ ಪ್ರೀತಿಯಿಂದ ನೀಡುವ ಪ್ರಶಸ್ತಿಯಿದು. ತಮ್ಮ ಬಳಗಕ್ಕೆ ಬಾರ್ಮಿ ಆರ್ಮಿ ಎಂದು ಹೆಸರಿಟ್ಟುಕೊಂಡಿರುವ ಅಲ್ಲಿನ ಕ್ರಿಕೆಟ್ ಅಭಿಮಾನಿಗಳ ಸಂಘ, ಸಾಧಕರಿಗೆ 'ಬಾರ್ಮಿ ಆರ್ಮಿ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಹೀಗಾಗಿ ಕ್ರಿಕೆಟ್ ನಲ್ಲಿ ಅತ್ಯುನ್ನತ ಸಾಧನೆ ತೋರಿದ ಕೊಹ್ಲಿ 2017 ಮತ್ತು 2018ನೇ ಸಾಲಿನ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗನಾಗಿ 'ಬಾರ್ಮಿ ಆರ್ಮಿ'ಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇಂಗ್ಲೆಂಡ್-ಐರ್ಲೆಂಡ್ ಪ್ರವಾಸದಲ್ಲಿರುವ ಭಾರತ ಸದ್ಯ ಇಂಗ್ಲೆಂಡ್ ನ ಚೆಲ್ಮ್ಸಫೋರ್ಡ್ ನಲ್ಲಿ ಎಸೆಕ್ಸ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಮೊದಲ ದಿನದ ಅಭ್ಯಾಸದ ಅವಧಿ ಮುಗಿದ ಬಳಿಕ ಕೊಹ್ಲಿಗೆ ಬಾರ್ಮಿ ಆರ್ಮಿ ಗೌರವ ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ, 'ಭಾರತದಲ್ಲಲ್ಲದೆ ಬೇರೆ ದೇಶದ ಅಭಿಮಾನಿಗಳ ಬಳಗದಿಂದ ಗುರುತಿಸಿಕೊಂಡಿರುವುದಕ್ಕೆ ಖುಷಿಯಾಗಿದೆ. ಕ್ರಿಕೆಟಿಗನಾಗಿ ವಿಶ್ವಮಟ್ಟದಲ್ಲಿ ಅಭಿಮಾನಿಗಳ ಪ್ರೀತಿ ಗಿಟ್ಟಿಸುವುದು ನಿಜಕ್ಕೂ ವಿಶೇಷ' ಎಂದರು.

2014ರಲ್ಲಿನ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ವೇಳೆ ಕೊಹ್ಲಿ ಅಂಥದ್ದೋನೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಆದರೆ ಈ ಬಾರಿ ಮೊದಲ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಅರ್ಧ ಶತಕ (68/93) ಬಾರಿಸಿದ್ದು, ಟೆಸ್ಟ್ ನಲ್ಲೂ ಉತ್ತಮ ಬ್ಯಾಟಿಂಗ್ ತೋರುವ ನಿರೀಕ್ಷೆಯಿದೆ.

Story first published: Thursday, July 26, 2018, 15:23 [IST]
Other articles published on Jul 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X