ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಾಯಕತ್ವ ಇನ್ನೂ ಪ್ರಗತಿಯಲ್ಲಿದೆ: ಆಶಿಷ್ ನೆಹ್ರಾ

Virat kohlis Captaincy Is Still Work In Progress: Ashish Nehra

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾಜಿ ವೇಗಿ ಆಶಿಷ್ ನೆಹ್ರಾ ಹೇಳಿಕೆಯನ್ನು ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರ ಆಕಾಶ್ ವಾಣಿ ಕಾರ್ಯಕ್ರಮದಲ್ಲಿ ಭಾಗಿಯಾದ ನೆಹ್ರಾ ಕ್ರಿಕೆಟ್ ವಿಚಾರವಾಗಿ ಸಾಕಷ್ಟು ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೂ ಪ್ರತಿಕ್ರಿಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಇನ್ನೂ ಪ್ರಗತಿಯಲ್ಲಿದೆ, ಆತನ ನಾಯಕತ್ವ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಆದರೆ ವಿರಾಟ್ ಅತ್ಯುತ್ತಮ ನಾಯಕನಾಗಬೇಕೆನಿಸಿದರೆ ತನ್ನಲ್ಲಿರುವ ಉದ್ವೇಗದ ಭಾವನೆಯನ್ನು ಹತೋಟಿಗೆ ತರಬೇಕು ಎಂದು ಆಶಿಷ್ ನೆಹ್ರಾ ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳುಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳು

ಇನ್ನೂ ಇದೇ ಸಂದರ್ಭದಲ್ಲಿ ಕೊಹ್ಲಿ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಸೋತಬಳಿಕ ನೀಡಿದ್ದ ಹೇಳಿಕೆಗೆ ಆಶಿಷ್ ನೆಹ್ರಾ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಈ ವರ್ಷ ಟಿ20 ವಿಶ್ವಕಪ್ ಇರುವ ಕಾರಣ ಏಕದಿನ ಸರಣಿ ಮುಖ್ಯವಾಗಲಾರದು ಎಂದಿದ್ದರು ಕೊಹ್ಲಿ. ಅದಕ್ಕೆ ನೆಹ್ರಾ ಹಾಗೇ ಟಿ20 ಸರಣಿಯೊಂದೇ ಈ ವರ್ಷ ಮುಖ್ಯವಾಗಿದ್ದರೆ ಏಕದಿನ ಸರಣಿಯನ್ನಾಡುವ ಸವಶ್ಯಕತೆಯೇನಿತ್ತು ಎಂದಿದ್ದು ಈ ಮಾತಿಗೆ ನನ್ನ ಸಂಪೂರ್ಣ ವಿರೋಧವಿದೆ ಎಂದು ನೇರವಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಅಶಿಷ್ ನೆಹ್ರಾ ರಿಷಭ್ ಪಂತ್ ಬಗ್ಗೆಯೂ ಮಾತನ್ನಾಡಿದರು. ಪಂತ್ ಆರಂಭದಲ್ಲಿ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿದ್ದರು. ಆದರೆ ದೀರ್ಘಕಾಲದ ಬಗ್ಗೆ ಯೋಚಿಸಬೇಕಾದರೆ ತಂಡದ ಮ್ಯಾನೇಜ್‌ಮೆಂಟ್ ಆತನ ಬೆನ್ನಿಗೆ ನಿಲ್ಲಬೇಕಾಗುತ್ತದೆ ಎಂದಿದ್ದಾರೆ ನೆಹ್ರಾ.

ಸ್ಟೀವನ್ ಸ್ಮಿತ್ ನಿಕ್‌ನೇಮ್ ಹುಟ್ಟಿದ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್ಸ್ಟೀವನ್ ಸ್ಮಿತ್ ನಿಕ್‌ನೇಮ್ ಹುಟ್ಟಿದ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್

ಐದನೇ ಕ್ರಮಾಂಕ ಮತ್ತು ಆರನೇ ಕ್ರಮಾಂಕದ ಬಗ್ಗೆ ತಂಡದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ. ಧೋನಿಯ ಉತ್ತರಾಧಿಕಾರಿ ಎಂದು ಬಿಂಬಿತವಾದ ಪಂತ್ ನೀರು ಕೊಡಲು ಉಪಯೋಗವಾಗುತ್ತಿದ್ದಾರೆ. ಅವರಿಗೆ ಸಿಕ್ಕ ಅವಕಾಶವನ್ನು ಪಂತ್ ಸರಿಯಾಗಿ ಬಳಸಿಕೊಳ್ಳಲಿಲ್ಲ, ಆದರೆ 22,23 ವಯಸ್ಸಿಗೆ ಆತನಲ್ಲಿ ಸಾಮರ್ಥ್ಯ ಇರುವುದನ್ನು ಗಮನಿಸಿದ್ದೇವೆ ಹಾಗಿದ್ದಾಗ ಆತನ ಬೆಂಬಲಕ್ಕೆ ನಿಲ್ಲಬೇಕು ಎಂದು ಆಶಿಷ್ ನೆಹ್ರಾ ಮಾತನಾಡಿದ್ದಾರೆ.

Story first published: Wednesday, May 6, 2020, 18:36 [IST]
Other articles published on May 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X