ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ 'ತುತ್ತೂರಿ' ಸಂಭ್ರಮಾಚರಣೆಗೆ ಇಂಗ್ಲೆಂಡ್ ಅಭಿಮಾನಿಗಳು ಗರಂ

Virat Kohlis trumpet celebration mocking England fans sparks debate on social media
Kohli ಅವರ ಈ celebration ಇಷ್ಟರ ಮಟ್ಟಿಗೆ ಚರ್ಚೆಗೆ ಗ್ರಾಸವಾಗಿದೆ | Oneindia Kannada

ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಆಂಗ್ಲ ಮಾಜಿ ನಾಯಕ ನಾಸೆರ್ ಹುಸೇನ್, ಭಾರತದ ನಾಯಕ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ನೋಡಿ 'ಭಾರತದ ಮಟ್ಟಿಗೆ ಪಂದ್ಯ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯಲು ನೀವು ಬಯಸಿದರೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಅಭಿವ್ಯಕ್ತಿಯನ್ನು ನೋಡಿ' ಎಂದು ಹೇಳಿದ್ದರು. ಪಂದ್ಯಗಳ ವೇಳೆ ಮೈದಾನದಲ್ಲಿ ಕೊಹ್ಲಿ ಹೇಗಿರುತ್ತಾರೆ, ಎಷ್ಟು ಆಕ್ರಮಣಕಾರಿ ವರ್ತನೆ ಹೊಂದಿರುತ್ತಾರೆ ಅನ್ನೋದಕ್ಕೆ ಹುಸೇನ್ ಹೀಗೆ ಮಾರ್ಮಿಕವಾಗಿ ಕಾಮೆಂಟ್ ಮಾಡಿದ್ದರು.

ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!

ವಿರಾಟ್ ಕೊಹ್ಲಿ ಯಾವತ್ತಿಗೂ ಹಾಗೆ. ಅವರು ಉಳಿದ ನಾಯಕರಂತೆ ಅಲ್ಲ. ಕೆಣಕಿದರೆ ತಾನೂ ಮುಂದೆ ಹೋಗಿ ಕೆಣಕುವ ಸ್ವಭಾವ ಕೊಹ್ಲಿಯದ್ದು. ಭಾರತ ಗೆಲುವಿನಂಚಿನಲ್ಲಿದ್ದರೆ, ಅಥವಾ ಎದುರಾಳಿ ಆಟಗಾರ ದುರುಗುಟ್ಟಿದರೆ, ಗೊಣಗಿದರೆ ಮುಗೀತು ಕತೆ ಕೊಹ್ಲಿ ಆತನಿಗೆ ತಕ್ಕ ಎದುರೇಟು ನೀಡಲು ಕಾಯುತ್ತಿರುತ್ತಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯಲ್ಲೂ ಇದೇ ಕತೆ ನಡೆದಿದೆ. ಆರಂಭದಲ್ಲಿ ಭಾರತ ಸರಣಿ ಮುನ್ನಡೆ ಪಡೆದಿದ್ದಾಗ ಇಂಗ್ಲೆಂಡ್ ಕೂಡ ಪಂದ್ಯ ಗೆದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸರಿದೂಗಿಸಿಕೊಂಡಿತ್ತು. ಅದರಲ್ಲೂ ಮೂರನೇ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 76 ರನ್ ಸೋಲನುಭವಿಸಿದ್ದರಿಂದ ಕೊಹ್ಲಿ ಪಡೆಗೆ ತೀವ್ರ ಮುಖಭಂಗವಾಗಿತ್ತು.

ಆದ ಮುಖಭಂಕ್ಕೆ ತಿರುಗೇಟು ನೀಡಲು ಭಾರತ ಕಾಯುತ್ತಿದ್ದಾಗಲೇ, ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅದಕ್ಕೆ ಅವಕಾಶ ಲಭಿಸಿತ್ತು. ಯಾಕೆಂದರೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ 157 ರನ್‌ ಜಯ ಗಳಿಸಿತ್ತು. ಟೀಮ್ ಇಂಡಿಯಾ ಪಂದ್ಯ ಗೆಲ್ಲುತ್ತಲೇ ಕೊಹ್ಲಿ ಮೈದಾನದಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಿಸಿಕೊಂಡಿದ್ದರು.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲುತ್ತಲೇ ಹಾರಿ, ಜಿಗಿದು, ಕಿರುಚಿ, ಹೈ ಫೈ ಮಾಡಿ ಸಂಭ್ರಮಾಚರಿಸಿದ್ದ ಕೊಹ್ಲಿ ತುತ್ತೂರಿ ಊದುವಂತೆ ಮಾಡಿ ವಿಶಿಷ್ಠ ರೀತಿಯಲ್ಲಿ ಸಂಬ್ರಮಾಚರಿಸಿದ್ದರು. ನಾಲ್ಕನೇ ಟೆಸ್ಟ್‌ ಪಂದ್ಯದ ಐದನೇ ದಿನದಾಟದ ವೇಳೆ ಕೊಹ್ಲಿ ಎರಡು ಬಾರಿ ಹೀಗೆ ತುತ್ತೂರಿ ಸೆಲೆಬ್ರೇಶನ್ ಮಾಡಿದ್ದರು. ಒಂದು ರವೀಂದ್ರ ಜಡೇಜಾಗೆ ಹಸೀಬ್ ಹಮೀದ್ ವಿಕೆಟ್ ಸಿಕ್ಕಾಗ ಮತ್ತೊಂದು ಪಂದ್ಯ ಗೆದ್ದ ಬಳಿಕ.

ಕೆಲವರು ಕೊಹ್ಲಿಯ ಈ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಂಭ್ರಮಾಚರಣೆ ಓಕೆ. ಆದರೆ ಅದು ಅತಿರೇಕಕ್ಕೆ ಹೋಗಬಾರದು. ಹೊಹ್ಲಿಯ ವರ್ತನೆ ಅತಿರೇಕಕ್ಕೆ ಹೋಯ್ತು ಎಂದು ಇಂಗ್ಲೆಂಡ್ ಮಾಜಿ ನಾಯಕ ನಿಕ್ ಕಾಂಪ್ಟನ್ ಹೇಳಿದ್ದಾರೆ. ಇಂಗ್ಲೆಂಡ್‌ನ ಅನೇಕ ಅಭಿಮಾನಿಗಳು ಕೊಹ್ಲಿಯ ಈ ಸೆಲೆಬ್ರೇಶನ್ ಬಗ್ಗೆ ಗರಂ ಆಗಿದ್ದಾರೆ. ಕೊಹ್ಲಿಗೆ ಇದು ಬೇಡವಾಗಿತ್ತು, ಅವರು ಇಂಗ್ಲೆಂಡ್ ಅಭಿಮಾನಿಗಳನ್ನು ಕೆಣಕಿದ್ದಾರೆ. ಅವರಿಗಿದು ಶೋಭೆಯಲ್ಲ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.

ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯದ ಸ್ಕೋರ್‌ ಮಾಹಿತಿ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.
ಭಾರತದ ದ್ವಿತೀಯ ಇನ್ನಿಂಗ್ಸ್: ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್‌ನೊಂದಿಗೆ 148.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು.
ಭಾರತದ ದ್ವಿತೀಯ ಇನ್ನಿಂಗ್ಸ್: ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್‌ನೊಂದಿಗೆ 148.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು.
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್, ರೋರಿ ಬರ್ನ್ಸ್ 50, ಹಸೀಬ್ ಹಮೀದ್ 63, ಡೇವಿಡ್ ಮಲನ್ 5, ಜೋ ರೂಟ್ 36, ಒಲ್ಲಿ ಪೋಪ್ 2, ಜಾನಿ ಬೈರ್‌ಸ್ಟೋ 0, ಕ್ರಿಸ್ ವೋಕ್ಸ್ 18, ಕ್ರೇಗ್ ಓವರ್‌ಟನ್ 10, ಒಲ್ಲಿ ರಾಬಿನ್ಸನ್ 10, ಜೇಮ್ಸ್ ಆ್ಯಂಡರ್ಸನ್ 2 ರನ್‌ನೊಂದಿಗೆ 92.2ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 210 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

Story first published: Tuesday, September 7, 2021, 23:06 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X