ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!

ಸೌಥಾಂಪ್ಟನ್‌: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಮುಂಚೂಣಿಯಲ್ಲಿರುವವರು ಎಂದು ಕ್ರಿಕೆಟ್ ಪರಿಣಿತರೆಲ್ಲ ಹೇಳುತ್ತಾರೆ. ಆದರೆ ಈ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಕೊಹ್ಲಿ ಎರಡು ವರ್ಷಗಳಿಂದ ಒಂದೇ ಒಂದು ಅಂತಾರಾಷ್ಟ್ರೀಯ ಶತಕ ಬಾರಿಸಿಲ್ಲ ಅನ್ನೋದು ಗೊತ್ತಾ? ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೊಹ್ಲಿ ಶತಕ ಬಾರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲೂ ಕೊಹ್ಲಿ ಮಿನುಗಲಿಲ್ಲ.

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ನ್ಯೂಜಿಲೆಂಡ್ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 8 ವಿಕೆಟ್‌ಗಳ ಸುಲಭ ಸೋಲನುಭವಿಸಿತ್ತು. ಭಾರತೀಯ ಯಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡದಿದ್ದುದೇ ತಂಡದ ಸೋಲಿಗೆ ಒಂದು ಕಾರಣವಾಗಿತ್ತು.

WTC ಫೈನಲ್‌ನಲ್ಲಿ ಕೊಹ್ಲಿ ಕೊಡುಗೆ

WTC ಫೈನಲ್‌ನಲ್ಲಿ ಕೊಹ್ಲಿ ಕೊಡುಗೆ

ವಿರಾಟ್ ಕೊಹ್ಲಿ ಈಚೆ ಎರಡು ವರ್ಷಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದಾರೆ ಅನ್ನೋದಕ್ಕೆ ಅಂಕಿ-ಅಂಶಗಳೇ ಸಾಕ್ಷಿ ಹೇಳುತ್ತವೆ. ಜೂನ್ 23ರಂದು ಮುಕ್ತಾಯಗೊಂಡ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೊಹ್ಲಿ ಕ್ರಮವಾಗಿ 44, 13 ರನ್ ಬಾರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳು ಸ್ವಲ್ಪವಾದರೂ ಪ್ರತಿರೋಧ ತೋರಿದರಾದರೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳ ಬೆಂಬಲವಿಲ್ಲದೆ ಭಾರತ ತಂಡ ನ್ಯೂಜಿಲೆಂಡ್‌ಗೆ ಶರಣಾಗಬೇಕಾಯ್ತು.

ಕೊಹ್ಲಿ ಕೊನೇ ಅಂತಾರಾಷ್ಟ್ರೀಯ ಶತಕ

ಕೊಹ್ಲಿ ಕೊನೇ ಅಂತಾರಾಷ್ಟ್ರೀಯ ಶತಕ

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಶತಕ ಬಾರಿಸಿ 2 ವರ್ಷ ಆಗುತ್ತಿದೆ ಎಂದೆವಲ್ಲ? ಕೊಹ್ಲಿ ಕೊನೇ ಸಾರಿ ಶತಕ ಬಾರಿಸಿದ್ದು ಯಾವಾಗ ಗೊತ್ತಾ? 2019ರ ನವೆಂಬರ್‌ನಲ್ಲಿ. ಭಾರತಕ್ಕೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. ಅಸಲಿಗೆ ಬಾಂಗ್ಲಾ ತಂಡ ಭಾರತದ ವಿರುದ್ಧ ಆವತ್ತು ಎರಡು ಟೆಸ್ಟ್ ಪಂದ್ಯಗಳನ್ನಾಡಿತ್ತು. ಇದರಲ್ಲಿ ಕೊಹ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ 136 ರನ್ ಗಳಿಸಿದ್ದರು.

2 ವರ್ಷಗಳಲ್ಲಿ ಕೊಹ್ಲಿಯ ಅಂಕಿ-ಅಂಶಗಳು

2 ವರ್ಷಗಳಲ್ಲಿ ಕೊಹ್ಲಿಯ ಅಂಕಿ-ಅಂಶಗಳು

ಅಂತಾರಾಷ್ಟ್ರೀಯ ಶತಕ ಬಾರಿಸದೆ 2 ವರ್ಷ ಆಗುತ್ತ ಬರುತ್ತಿರುವಾಗ ಕೊಹ್ಲಿಯ ಅಂಕಿ-ಅಂಶಗಳು ಹೇಗಿವೆ ಗೊತ್ತಾ? ಎಲ್ಲಾ ಮೂರೂ ಕ್ರಿಕೆಟ್‌ ಮಾದರಿಗಳಲ್ಲಿ ಕೊಹ್ಲಿ ಬಾರಿಸಿದ ವೈಯಕ್ತಿಕ ಅತ್ಯಧಿಕ ರನ್ ಎಷ್ಟು ಗೊತ್ತಾ? ಕೆಳಗಿವೆ ಮಾಹಿತಿ.

2019ರ ನವೆಂಬರ್‌ನಿಂದೀಚೆಗೆ ಕೊಹ್ಲಿಯ ರನ್ ಅಂಕಿ-ಅಂಶಗಳು

* ಟೆಸ್ಟ್‌ ಕ್ರಿಕೆಟ್: ಪಂದ್ಯಗಳು 8, ಇನ್ನಿಂಗ್ಸ್ 14, ರನ್ 345, ಅತ್ಯಧಿಕ ರನ್ 74, ಸರಾಸರಿ 24.64, ಅರ್ಧ ಶತಕ 3, ಸ್ಟ್ರೈಕ್ ರೇಟ್ 42.27, ಸಿಕ್ಸರ್ 0

* ಏಕದಿನ ಕ್ರಿಕೆಟ್: ಪಂದ್ಯಗಳು 15, ಇನ್ನಿಂಗ್ಸ್ 15, ರನ್ 649, ಅತ್ಯಧಿಕ ರನ್ 89, ಸರಾಸರಿ 43.26, ಅರ್ಧ ಶತಕ 8, ಸ್ಟ್ರೈಕ್ ರೇಟ್ 92.45, ಸಿಕ್ಸರ್ 6

* ಟಿ20ಐ ಕ್ರಿಕೆಟ್: ಪಂದ್ಯಗಳು 18, ಇನ್ನಿಂಗ್ಸ್ 17, ರನ್ 709, ಅತ್ಯಧಿಕ ರನ್ 94*, ಸರಾಸರಿ 64.45, ಅರ್ಧ ಶತಕ 6, ಸ್ಟ್ರೈಕ್ ರೇಟ್ 153.79, ಸಿಕ್ಸರ್ 32

ಕೊಹ್ಲಿಯ ರನ್ ಸಾಧನೆಗಳು

ಕೊಹ್ಲಿಯ ರನ್ ಸಾಧನೆಗಳು

32ರ ಹರೆಯದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ರನ್ ಅಂಕಿ-ಅಂಶಗಳನ್ನು ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕ, 7 ದ್ವಿಶತಕಗಳ ದಾಖಲೆ ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಶತಕದ ಶತಕ ದಾಖಲೆ ಮೀರಿಸಲು ಸಾಧ್ಯವಿರುವ ಒಬ್ಬ ಬ್ಯಾಟ್ಸ್ಮನ್‌ ಎಂದರೆ ಅದು ವಿರಾಟ್ ಕೊಹ್ಲಿ ಎಂದು ಎಲ್ಲಾ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು ಹೇಳುತ್ತಾರೆ. 92 ಟೆಸ್ಟ್‌ನಲ್ಲಿ 7547 ರನ್, 27 ಶತಕ, 254 ಏಕದಿನ ಪಂದ್ಯಗಳಲ್ಲಿ 12169 ರನ್, 43 ಶತಕ, 89 ಟಿ20ಐ ಪಂದ್ಯಗಳಲ್ಲಿ 3159 ರನ್ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 25, 2021, 18:38 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X