ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧಾರ!

Virat Kohli will resign as a captain of T20 team after T20 World Cup

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20ಐ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ನಾಯಕತ್ವದ ಬದಲಾಗಬೇಕು ಎನ್ನುವ ಮಾತುಗಳು ಬಹಳ ಹಿಂದಿನಿಂದಲೂ ಕೇಳುತ್ತಿತ್ತು. ಈಗ ಕೊಹ್ಲಿ ಟಿ20 ನಾಯಕತ್ವ ಬಿಟ್ಟು ಕೊಡಲು ನಿರ್ಧಾರ ಮಾಡಿದ್ದಾರೆ. ಆದರೆ ಕೊಹ್ಲಿ ಇನ್ನೊಂದಿಷ್ಟು ಕಾಲ ಟಿ20ಐನಲ್ಲಿ ಭಾರತದ ನಾಯಕತ್ವ ಮುಂದುವರೆಸಲಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಲಿದ್ದಾರೆ.

ಎಂಐ 6ನೇ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ತಂಡ ಹೆಸರಿಸಿದ ಬ್ರಾಡ್ ಹಾಗ್!ಎಂಐ 6ನೇ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ತಂಡ ಹೆಸರಿಸಿದ ಬ್ರಾಡ್ ಹಾಗ್!

ಕೆಲ ದಿನಗಳ ಹಿಂದಷ್ಟೇ ಭಾರತೀಯ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ವಿರಾಟ್ ಕೊಹ್ಲಿಗೆ ಬದಲಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲದಿಂದಲೇ ಈ ಸುದ್ದಿ ಲಭಿಸಿತ್ತು. ಆ ಮಾತುಗಳು ಈಗ ನಿಜವಾಗಿದೆ.

ಉದ್ದ ಸಂದೇಶ ಬರೆದುಕೊಂಡಿರುವ ಕೊಹ್ಲಿ

ಉದ್ದ ಸಂದೇಶ ಬರೆದುಕೊಂಡಿರುವ ಕೊಹ್ಲಿ

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ಈ ಸಂಗತಿ ಹೇಳಿಕೊಂಡಿದ್ದಾರೆ. ಉದ್ದ ಸಂದೇಶ ಬರೆದುಕೊಂಡಿರುವ ಕೊಹ್ಲಿ, ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಬಳಿಕ ತಾನು ಟಿ20 ನಾಯಕತ್ವದದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕೊಹ್ಲಿ, 'ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶವಷ್ಟೇ ಅಲ್ಲ, ಟೀಮ್ ಇಂಡಿಯಾವನ್ನು ಮುನ್ನಡೆಸುವ ಅದೃಷ್ಟವೂ ಸಿಕ್ಕಿತ್ತು. ಟೀಮ್ ಇಂಡಿಯಾದ ನಾಯಕನಾಗಿದ್ದಾಗ ನನಗೆ ಬೆಂಬಲಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ತಂಡದ ಸಹ ಆಟಗಾರರು, ಬೆಂಬಲ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ಕೋಚ್‌ಗಳು ಮತ್ತು ನಮ್ಮ ಗೆಲುವಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯನಿಗೂ ಧನ್ಯವಾದ. ನೀವಿಲ್ಲದೆ ನಾನೀ ಪ್ರಯಾಣ ಪೂರ್ಣಗೊಳಿಸಲಾಗುತ್ತಿರಲಿಲ್ಲ' ಎಂದು ಟ್ವೀಟ್‌ ಪೋಸ್ಟ್‌ನ ಆರಂಭಿಕ ಪ್ಯಾರದಲ್ಲಿ ಬರೆದುಕೊಂಡಿದ್ದಾರೆ.

ರಾಜೀನಾಮೆಗೆ ವಿರಾಟ್ ಕೊಟ್ಟ ಕಾರಣ

ಟ್ವೀಟ್‌ ಪೋಸ್ಟ್‌ನ ಮುಂದಿನ ಪ್ಯಾರಗಳಲ್ಲಿ ಟಿ20 ನಾಯಕತ್ವಕ್ಕೆ ತನ್ನ ರಾಜೀನಾಮೆಗೆ ಕೊಹ್ಲಿ ಕಾರಣ ತಿಳಿಸಿದ್ದಾರೆ. 'ಕಳೆದ 8-9 ವರ್ಷಗಳಿಂದ ಏಕದಿನ, ಟೆಸ್ಟ್, ಟಿ20 ಮೂರೂ ಕ್ರಿಕೆಟ್‌ ಮಾದರಿಗಳಲ್ಲಿ ಆಡುತ್ತ, ನಾಯಕತ್ವ ವಹಿಸಿರುವುದರಿಂದ ಅದರಿಂದ ಬೀಳುವ ಕೆಲಸದ ಒತ್ತಡವನ್ನು ನಾನು ಅರ್ಥ ಮಾಡಿಕೊಳ್ಳುವುದು ಪ್ರಮುಖ ಸಂಗತಿಯಾಗಿದೆ. 5-6ವರ್ಷಗಳಿಂದ ನಾನು ತಂಡದ ನಾಯಕತ್ವ ವಹಿಸಿಕೊಂಡಿದ್ದೇನೆ. ನನಗೆ ನಾನೀಗ ಬಿಡುವು ಕೊಟ್ಟುಕೊಳ್ಳಬೇಕೆಂದು ಬಯಸಿದ್ದೇನೆ. ಏಕದಿನ ಮತ್ತು ಟೆಸ್ಟ್‌ನಲ್ಲಿ ನಾನು ತಂಡ ಮುನ್ನಡೆಸಲು ಸಂಪೂರ್ಣ ಸಿದ್ಧನಿದ್ದೇನೆ. ಲೀಡರ್‌ಶಿಪ್‌ ಗುಂಪಿನ ಆತ್ಮೀಯರಾದ ರವಿ ಶಾಸ್ತ್ರಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿ ನಾನು ಟಿ20 ವಿಶ್ವಕಪ್‌ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ' ಎಂದು ವಿರಾಟ್ ಬರೆದುಕೊಂಡಿದ್ದಾರೆ. ಇದರರ್ಥ ಟಿ20 ವಿಶ್ವಕಪ್‌ ಬಳಿಕ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಭಾರತದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ವಿರಾಟ್ ನಾಯಕತ್ವದ ಅಂಕಿ-ಅಂಶಗಳು

ವಿರಾಟ್ ನಾಯಕತ್ವದ ಅಂಕಿ-ಅಂಶಗಳು

ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ 65 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದರಲ್ಲಿ 38 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು. ಇನ್ನು ಕೊಹ್ಲಿ 95 ಏಕದಿನದಲ್ಲಿ ನಾಯಕರಾಗಿದ್ದರು. ಇದರಲ್ಲಿ ಭಾರತ 65 ಪಂದ್ಯ ಗೆದ್ದು, 27 ಪಂದ್ಯ ಸೋತಿತ್ತು. 1 ಪಂದ್ಯ ಟೈ, 2 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು. ಕೊಹ್ಲಿ ನಾಯಕತ್ವದ ವಹಿಸಿದ್ದ 45 ಟಿ20ಐ ಪಂದ್ಯಗಳಲ್ಲಿ ಭಾರತ 27ರಲ್ಲಿ ಗೆದ್ದು, 14ರಲ್ಲಿ ಸೋತಿತ್ತು. 2 ಪಂದ್ಯಗಳು ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದ್ದವು. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ತಂಡ 132 ಪಂದ್ಯಗಳನ್ನಾಡಿದೆ, ಇದರಲ್ಲಿ 62 ಪಂದ್ಯಗಳನ್ನು ಗೆದ್ದಿದೆ, 66 ಪಂದ್ಯಗಳನ್ನು ಸೋತಿದೆ. 4 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದೆ.
ರೋಹಿತ್ ಶರ್ಮಾ ಅಂಕಿ-ಅಂಶ: ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಶರ್ಮಾ 43 ಟೆಸ್ಟ್ ಪಂದ್ಯಗಳಲ್ಲಿ 3047 ರನ್, 8 ಶತಕ, 1 ದ್ವಿಶತಕ, 227 ಏಕದಿನ ಪಂದ್ಯಗಳಲ್ಲಿ 9205 ರನ್, 29 ಶತಕ, 3 ದ್ವಿಶತಕ, 111 ಟಿ20ಐ ಪಂದ್ಯಗಳಲ್ಲಿ 2864 ರನ್, 4 ಶತಕಗಳನ್ನು ಬಾರಿಸಿದ್ದಾರೆ. 207 ಐಪಿಎಲ್ ಪಂದ್ಯಗಳಲ್ಲಿ 5480 ರನ್, 1 ಶತಕದ ದಾಖಲೆ ಹೊಂದಿದ್ದಾರೆ.

ಕೊಹ್ಲಿ ನಂತರ ರೋಹಿತ್ ಮಾತ್ರ ಅಲ್ಲ ನಾಯಕತ್ವದ ರೇಸ್ ನಲ್ಲಿರೋ ಈ ಮೂವರು ಯಾರು? | Oneindia Kannada
ಕೊಹ್ಲಿ ನಾಯಕತ್ವದಲ್ಲಿ ಕಳೆದ 10 ಟಿ20ಐ ಸರಣಿಗಳಲ್ಲಿನ ಫಲಿತಾಂಶ

ಕೊಹ್ಲಿ ನಾಯಕತ್ವದಲ್ಲಿ ಕಳೆದ 10 ಟಿ20ಐ ಸರಣಿಗಳಲ್ಲಿನ ಫಲಿತಾಂಶ

* 3-2 (ಗೆಲುವು vs ಇಂಗ್ಲೆಂಡ್)
* 2-1 (ಗೆಲುವು vs ಆಸ್ಟ್ರೇಲಿಯಾ)
* 5-0 (ಜಯ vs ನ್ಯೂಜಿಲೆಂಡ್)
* 2-0 (ಗೆಲುವು vs ಶ್ರೀಲಂಕಾ)
* 2 -1 (ಜಯ vs ವೆಸ್ಟ್ ಇಂಡೀಸ್)
* 1-1 (ಡ್ರಾ vs ದಕ್ಷಿಣ ಆಫ್ರಿಕಾ)
* 2-0 (ಗೆಲುವು vs ವೆಸ್ಟ್ ಇಂಡೀಸ್)
* 2-0 (ಜಯ vs ಆಸ್ಟ್ರೇಲಿಯಾ)
* 1-1 (ಡ್ರಾ vs ಆಸ್ಟ್ರೇಲಿಯಾ)
* 2-1 (ಜಯ vs ಇಂಗ್ಲೆಂಡ್)

Story first published: Friday, September 17, 2021, 10:16 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X