ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿರಾಸೆ ಮೂಡಿಸಿದ ಹೊಸದಾಗಿ ಆರ್‌ಸಿಬಿ ಸೇರಿದ್ದ ಲಂಕಾದ ಹಸರಂಗ; ಆಯ್ಕೆಯಲ್ಲಿ ಎಡವಿತಾ ಆರ್‌ಸಿಬಿ?

Wanindu Hasaranga ended up with average performance in limited overs series against South Africa

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದ 29 ಪಂದ್ಯಗಳು ಮುಗಿದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳನ್ನು ಇದೇ ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಪುನರಾರಂಭಿಸಲಾಗುತ್ತಿದೆ.

ದೇಶಕ್ಕಾಗಿ ಆಡಿದ್ದೇನೆ ಸ್ವಲ್ಪವಾದರೂ ಗೌರವ ಕೊಡಿ; ಹಿರಿಯ ಕ್ರಿಕೆಟಿಗರಿಂದ ಆದ ಅವಮಾನ ಬಿಚ್ಚಿಟ್ಟ ತಾಹಿರ್ದೇಶಕ್ಕಾಗಿ ಆಡಿದ್ದೇನೆ ಸ್ವಲ್ಪವಾದರೂ ಗೌರವ ಕೊಡಿ; ಹಿರಿಯ ಕ್ರಿಕೆಟಿಗರಿಂದ ಆದ ಅವಮಾನ ಬಿಚ್ಚಿಟ್ಟ ತಾಹಿರ್

ಹೀಗೆ ಐಪಿಎಲ್ ದ್ವಿತೀಯಾರ್ಧದ ಘೋಷಣೆಯಾಗುತ್ತಿದ್ದಂತೆಯೇ ಮೊದಲಾರ್ಧದಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳ ಕೆಲ ಆಟಗಾರರು ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹೇಳಿ ಟೂರ್ನಿಯಿಂದ ಹಿಂದೆ ಸರಿದರು. ಹೀಗಾಗಿ ವಿವಿಧ ಫ್ರಾಂಚೈಸಿಗಳು ತಮ್ಮ ತಂಡಗಳಿಂದ ಹಿಂದೆ ಸರಿದ ಆಟಗಾರರ ಸ್ಥಾನಕ್ಕೆ ಹೊಸ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸದಾಗಿ ನಾಲ್ವರು ಆಟಗಾರರನ್ನು ಯುಎಇಯಲ್ಲಿ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೋಸ್ಕರ ಆಯ್ಕೆ ಮಾಡಿಕೊಂಡಿತ್ತು.

ಹೌದು, ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲಾರ್ಧದಲ್ಲಿ ಭಾಗವಹಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಕೇನ್ ರಿಚರ್ಡ್ಸನ್, ಆಡಂ ಜಂಪಾ, ಡೇನಿಯಲ್ ಸ್ಯಾಂಡ್ಸ್ ಮತ್ತು ಫಿನ್ ಅಲೆನ್ ಬದಲು ಕ್ರಮವಾಗಿ ಜಾರ್ಜ್ ಗಾರ್ಟನ್, ವನಿಂದು ಹಸರಂಗ, ದುಷ್ಮಂತ ಚಾಮೀರಾ ಮತ್ತು ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದುವರಿಯಲಿರುವ ಐಪಿಎಲ್ ಟೂರ್ನಿಗಾಗಿ ಆಯ್ಕೆ ಮಾಡಿಕೊಂಡಿದೆ.

ಐಪಿಎಲ್: ಕೊಹ್ಲಿ ಮತ್ತು ಎಬಿಡಿಯನ್ನು ಈ ದೊಡ್ಡ ಸಮಸ್ಯೆ ಕಾಡಲಿದೆ ಎಂದ ಗೌತಮ್ ಗಂಭೀರ್ಐಪಿಎಲ್: ಕೊಹ್ಲಿ ಮತ್ತು ಎಬಿಡಿಯನ್ನು ಈ ದೊಡ್ಡ ಸಮಸ್ಯೆ ಕಾಡಲಿದೆ ಎಂದ ಗೌತಮ್ ಗಂಭೀರ್

ಹೀಗೆ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ಆಯ್ಕೆ ಮಾಡಿಕೊಂಡಿರುವ ಆಟಗಾರರ ಪೈಕಿ ಶ್ರೀಲಂಕಾದ ಖ್ಯಾತ ಆಟಗಾರ ವನಿಂದು ಹಸರಂಗ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಭಾರತ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗಲೂ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿ ಮಿಂಚಿದ್ದ ವನಿಂದು ಹಸರಂಗರನ್ನು ಬೆಂಗಳೂರು ತಂಡ ಆಯ್ಕೆ ಮಾಡಿಕೊಂಡಿದ್ದು ಉತ್ತಮ ನಿರ್ಧಾರ ಎಂದೇ ಎಲ್ಲರೂ ಶ್ಲಾಘಿಸಿದ್ದರು. ಆದರೆ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿರುವ 3 ಏಕದಿನ ಮತ್ತು 3 ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ವನಿಂದು ಹಸರಂಗ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನೇನು ನೀಡದೇ ಮಂಕಾಗಿರುವುದು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿರುವುದಂತೂ ನಿಜ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವನಿಂದು ಹಸರಂಗ ನೀರಸ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವನಿಂದು ಹಸರಂಗ ನೀರಸ ಪ್ರದರ್ಶನ

ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ 2-1 ಅಂತರದಲ್ಲಿ ಗೆದ್ದು ಬೀಗಿದ್ದೇನೋ ನಿಜ, ಆದರೆ ವನಿಂದು ಹಸರಂಗ ಈ ಸರಣಿಯಲ್ಲಿ ಪಡೆದುಕೊಂಡ ವಿಕೆಟ್‍ಗಳ ಸಂಖ್ಯೆ ಕೇವಲ 4. ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿಯೂ ಕಣಕ್ಕಿಳಿದಿದ್ದ ವನಿಂದು ಹಸರಂಗ ಮೊದಲ ಹಾಗೂ ದ್ವಿತೀಯ ಏಕದಿನ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್ ಪಡೆದರೆ ಅಂತಿಮ ಏಕದಿನ ಪಂದ್ಯದಲ್ಲಿ 2 ವಿಕೆಟ್‍ಗಳನ್ನು ಪಡೆದು ಸಾಮಾನ್ಯ ಪ್ರದರ್ಶನವನ್ನು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ವನಿಂದು ಹಸರಂಗ ಸಾಮಾನ್ಯ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ವನಿಂದು ಹಸರಂಗ ಸಾಮಾನ್ಯ ಪ್ರದರ್ಶನ

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕೈಚೆಲ್ಲಿದ್ದ ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಯಾವುದೇ ಪಂದ್ಯವನ್ನೂ ಗೆಲ್ಲದೇ ಮಂಕಾದ ಲಂಕಾದ ಬೌಲರ್‌ಗಳು ತವರು ನೆಲದಲ್ಲಿಯೇ ನೀರಸ ಪ್ರದರ್ಶನವನ್ನು ನೀಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಶ್ರೀಲಂಕಾ ಬೌಲರ್‌ಗಳ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ವನಿಂದು ಹಸರಂಗ. ಆದರೆ ವನಿಂದು ಹಸರಂಗ 3 ಟಿ ಟ್ವೆಂಟಿ ಪಂದ್ಯಗಳ ಪೈಕಿ ಪಡೆದದ್ದು ಕೇವಲ 3 ವಿಕೆಟ್ ಮಾತ್ರ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ವನಿಂದು ಹಸರಂಗ 35 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಮಂಕಾದರು. ಹೀಗೆ ತಮ್ಮ ತವರು ನೆಲದಲ್ಲಿಯೇ ದಕ್ಷಿಣ ಆಫ್ರಿಕಾದಂತಹ ತಂಡದ ವಿರುದ್ಧ ಸಾಮಾನ್ಯ ಪ್ರದರ್ಶನ ನೀಡಿರುವ ವನಿಂದು ಹಸರಂಗ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಪಾಲ್ಗೊಳ್ಳುವ ಐಪಿಎಲ್ ಟೂರ್ನಿಯಲ್ಲಿ ಅದರಲ್ಲಿಯೂ ಯುಎಇ ಪಿಚ್‌ಗಳಲ್ಲಿ ಪಂದ್ಯ ಗೆಲ್ಲಿಸುವಂತಹ ಪ್ರದರ್ಶನ ನೀಡಲಿದ್ದಾರಾ ಎಂಬ ಅನುಮಾನ ಇದೀಗ ಎಲ್ಲರಲ್ಲಿಯೂ ಮೂಡಿದೆ.

ನಾಯಕತ್ವ ನಿಭಾಯಿಸೋದ್ರಲ್ಲಿ ಕೊಹ್ಲಿಗಿಂತ ಮುಂದಿದ್ದಾರಾ ರೋಹಿತ್ ಶರ್ಮಾ? | Oneindia Kannada
ಬ್ಯಾಟಿಂಗ್ ಕೂಡ ಅಷ್ಟಕ್ಕಷ್ಟೆ!

ಬ್ಯಾಟಿಂಗ್ ಕೂಡ ಅಷ್ಟಕ್ಕಷ್ಟೆ!

ಬೌಲಿಂಗ್‌ನಲ್ಲಿ ಸಾಧಾರಣ ಪ್ರದರ್ಶನವನ್ನು ನೀಡಿರುವ ಲಂಕಾದ ವನಿಂದು ಹಸರಂಗ ದಕ್ಷಿಣ ಆಫ್ರಿಕಾ ವಿರುದ್ಧದ 3 ಟಿ ಟ್ವೆಂಟಿ ಪಂದ್ಯಗಳ ಪೈಕಿ ಗಳಿಸಿದ್ದು ಕೇವಲ 8 ರನ್. ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ವನಿಂದು ಹಸರಂಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಶೂನ್ಯ, ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ 4 ಮತ್ತು ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ 4 ರನ್ ಗಳಿಸುವುದರ ಮೂಲಕ 3ಟ್ವೆಂಟಿ ಪಂದ್ಯಗಳ ಪೈಕಿ ಕೇವಲ 8 ರನ್ ಗಳಿಸಿ ನೀರಸ ಪ್ರದರ್ಶನ ನೀಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ವನಿಂದು ಹಸರಂಗ ಗಳಿಸಿದ್ದು ಕೇವಲ 12 ರನ್. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3 ರನ್, ದ್ವಿತೀಯ ಏಕದಿನ ಪಂದ್ಯದಲ್ಲಿ 3 ರನ್ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 6 ರನ್ ಕಲೆಹಾಕಲಷ್ಟೇ ಶಕ್ತವಾದ ವನಿಂದು ಹಸರಂಗ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.


ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ತವರು ನೆಲದಲ್ಲಿಯೇ ಸಾಮಾನ್ಯ ಪ್ರದರ್ಶನವನ್ನು ನೀಡಿರುವ ವನಿಂದು ಹಸರಂಗ ಈ ಹಿಂದೆ ನಡೆದ ಸರಣಿಗಳ ರೀತಿಯಲ್ಲಿ ನೀಡಿದ ಭರ್ಜರಿ ಪ್ರದರ್ಶನವನ್ನು ಈ ಬಾರಿ ತೋರುವಲ್ಲಿ ವಿಫಲರಾಗಿದ್ದಾರೆ. ಆದರೂ ಈ ಹಿಂದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದ ವನಿಂದು ಹಸರಂಗ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ಯಾವ ರೀತಿಯ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, September 15, 2021, 2:21 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X