ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಮತ್ತೆ ತಲೆ ಎತ್ತಿ ನಡೆಯಲಿದ್ದೇವೆ: ಮುಂಬೈ ಅಭಿಮಾನಿಗಳಿಗೆ ಪೊಲಾರ್ಡ್ ಸಂದೇಶ

Kieron pollard

ಐಪಿಎಲ್ 2022 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರಿಸ್ಥಿತಿ ನಿಜಕ್ಕೂ ಹೇಳ ತೀರದಂತಾಗಿತ್ತು. ಆಡಿದ ಪ್ರತಿ ಪಂದ್ಯವನ್ನೂ ಸೋಲುತ್ತಿದ್ದ ಮುಂಬೈ ಇಂಡಿಯನ್ಸ್‌ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಿಯಾಗಿ ಟೂರ್ನಿಯಿಂದ ಹೊರನಡೆಯಿತು.

ಸತತ ಪಂದ್ಯಗಳಿಂದ ಸೋತು ಕಂಗೆಟ್ಟ ಮುಂಬೈ, ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲುವು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿತು. ಐಪಿಎಲ್ 2023ರ ಸೀಸನ್‌ ಗಮನದಲ್ಲಿಟ್ಟುಕೊಂಡು ಬಲಿಷ್ಠವಾಗಿ ಕಂಬ್ಯಾಕ್ ಮಾಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಇದರ ಬೆನ್ನಲ್ಲೇ ತಂಡದ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಶೇನ್‌ ವಾರ್ನ್‌ಗೆ ಗೌರವ: Eng vs NZ ಟೆಸ್ಟ್‌ನ 23ನೇ ಓವರ್‌ನಲ್ಲಿ 23 ಸೆಕೆಂಡ್‌ಗಳ ಕಾಲ ಪಂದ್ಯಕ್ಕೆ ವಿರಾಮಶೇನ್‌ ವಾರ್ನ್‌ಗೆ ಗೌರವ: Eng vs NZ ಟೆಸ್ಟ್‌ನ 23ನೇ ಓವರ್‌ನಲ್ಲಿ 23 ಸೆಕೆಂಡ್‌ಗಳ ಕಾಲ ಪಂದ್ಯಕ್ಕೆ ವಿರಾಮ

ಮುಂಬೈ ಇಂಡಿಯನ್ಸ್ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಗೆದ್ದು 10ರಲ್ಲಿ ಸೋತಿದೆ. ಈ ಕ್ರಮದಲ್ಲಿಯೇ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಎಲ್ಲರಿಗಿಂತ ಮೊದಲೇ ಟೂರ್ನಿಯಿಂದ ನಿರ್ಗಮಿಸಿದರು.

ಆದರೆ, ಈ ಕೆಟ್ಟ ಪ್ರದರ್ಶನಕ್ಕೆ ಇತ್ತೀಚೆಗೆ ತಂಡದ ಪ್ರಮುಖ ಆಲ್ ರೌಂಡರ್ ಕಿರಾನ್ ಪೊಲಾರ್ಡ್ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ವೈಫಲ್ಯವು ಅವರನ್ನು ತೀವ್ರವಾಗಿ ನೋಯಿಸಿತು ಆದರೆ ತಂಡವಾಗಿ ಅವರ ಉತ್ಸಾಹವನ್ನು ಹಾಳು ಮಾಡಲಿಲ್ಲ ಎಂದು ಅವರು ಹೇಳಿದರು.

''ಈ ಋತುವಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ನಾವು ತಂಡವಾಗಿ, ವೈಯಕ್ತಿಕವಾಗಿ ಈ ಸೋಲು ನಮ್ಮ ಮನಸ್ಸನ್ನು ಎಷ್ಟು ನೋಯಿಸಿತು ಎಂದು ಮಾತ್ರ ತಿಳಿದಿದೆ. ಆದರೆ, ನಮ್ಮ ತಂಡದ ಉತ್ಸಾಹಕ್ಕೆ ಧಕ್ಕೆಯಾಗಲಿಲ್ಲ. ಈ ಋತುವಿನಲ್ಲಿ ನಮ್ಮ ತಂಡದ ಪ್ರತಿಯೊಬ್ಬರೂ ಉತ್ತಮ ಬದ್ಧತೆಯಿಂದ ಆಡಿದ್ದಾರೆ. ಆದಾಗ್ಯೂ, ನಾವು ಖಂಡಿತವಾಗಿಯೂ ಇದರಿಂದ ಪಾಠಗಳನ್ನು ಕಲಿಯುತ್ತೇವೆ.''

''ಈ ಪ್ರದರ್ಶನವೊಂದೇ ನಮ್ಮನ್ನು ಮತ್ತು ನಮ್ಮ ತಂಡವನ್ನು ನಿರ್ಣಯಿಸಲು ನೆರವಾಗುತ್ತದೆಯೇ..? ಉತ್ತರ ಖಂಡಿತ ಇಲ್ಲ. ನಾವು ಇನ್ನೂ ತಲೆ ಎತ್ತಿ ನಡೆಯುತ್ತಾ ಹೋಗುತ್ತೇವೆ. ಏಕೆಂದರೆ ಪರಿಸ್ಥಿತಿಯನ್ನು ಬದಲಾಯಿಸಲು ಅವಕಾಶವಿದೆ ಎಂದು ನಾವು ನಂಬುತ್ತೇವ'' ಎಂದು ಪೊಲಾರ್ಡ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಋತುವಿನಲ್ಲಿ ಕಿಆರನ್ ಪೊಲಾರ್ಡ್ ಸಂಪೂರ್ಣ ವಿಫಲರಾಗಿದ್ದಾರೆ. 11 ಪಂದ್ಯಗಳಲ್ಲಿ 14.40ರ ಸರಾಸರಿಯಲ್ಲಿ 144 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಕೇವಲ ನಾಲ್ಕು ವಿಕೆಟ್ ಪಡೆದರು.

Story first published: Friday, June 3, 2022, 10:11 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X