ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೂನ್‌ನಲ್ಲಿ ಕ್ರಿಕೆಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಹಾರಲು ವಿಂಡೀಸ್ ಸಿದ್ದತೆ

West Indies Ready With Plan To Send 25-Man Squad For Test Series In England In June

ಜೂನ್ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಕೆರೆಬಿಯನ್ ದ್ವೀಪಗಳಲ್ಲಿ ಲೀಗ್ ಕ್ರಿಕೆಟ್ ಈಗಾಗಲೆ ಆರಂಭವಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕೂ ಅದು ತುದಿಗಾಲಲ್ಲಿ ನಿಂತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಸರ್ವಸನ್ನಧವಾಗಿದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಕಳೆದ ಎರಡು ತಿಂಗಳು ಕ್ರಿಕೆಟ್ ಸಂಪೂರ್ಣವಾಗಿ ನಿಂತುಹೋಗಿತ್ತು. ಆದರೆ ಮುಂದಿನ ತಿಂಗಳಲ್ಲಿ ಮತ್ತೆ ಕ್ರಿಕೆಟ್ ಆರಂಭವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಂಡ ಕಳುಹಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಬೂಮ್ರಾ ಸವಾಲು ಎದುರಿಸಲು ಕಾತರನಾಗಿದ್ದೇನೆ ಎಂದ ಪಾಕ್ ಬ್ಯಾಟ್ಸ್‌ಮನ್ಬೂಮ್ರಾ ಸವಾಲು ಎದುರಿಸಲು ಕಾತರನಾಗಿದ್ದೇನೆ ಎಂದ ಪಾಕ್ ಬ್ಯಾಟ್ಸ್‌ಮನ್

ಈ ಸರಣಿಯ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಜೊತೆಗೆ ಕಳೆದ ಆರು ವಾರಗಳಿಂದ ಮಾತುಕತೆಗಳನ್ನು ನಡೆಸುತ್ತಿದೆ. ಎಲ್ಲವೂ ಸರಣಿ ನಡೆಸಲು ಪೂರಕವಾದ ರೀತಿಯಲ್ಲೇ ಸಾಗದ್ದು ಅಧಿಕೃತ ಆಹ್ವಾನ ಮಾತ್ರವೇ ಬರಬೇಕಾಗಿದೆ.

ಸದ್ಯ ನಡೆಯುತ್ತಿರುವ ಬೆಳಣಿಗೆಗೆ ಪೂರಕವಾಗಿಯೇ ಮುಂದುವರಿದರೆ ಜೂನ್ 8ನೇ ತಾರೀಕಿಗೆ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ತೆರಳಲಿದೆ. ಆಟಗಾರರು ಸಿಬ್ಬಂದಿಗಳು ಸೇರಿ 25 ಜನರ ಒಟ್ಟು ತಂಡ ಈ ಪ್ರವಾಸಕ್ಕೆ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಾಹಕ ಜಾನಿ ಗ್ರೇವ್ ತಿಳಿಸಿದ್ದಾರೆ.

ಮೊಬೈಲ್ ಫೋನ್ ಇಲ್ಲದ ಸಮಯದ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್ಮೊಬೈಲ್ ಫೋನ್ ಇಲ್ಲದ ಸಮಯದ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್

ಕ್ರಿಕೆಟ್ ಸರಣಿಯನ್ನು ಬಯೋ ಸೆಕ್ಯೂರ್ ಸ್ಟೇಡಿಯಮ್‌ನಲ್ಲಿ ನಡೆಸಲಾಗುತ್ತದೆ ಮತ್ತು ಯಾವುದೇ ವೀಕ್ಷಕರಿಲ್ಲದೆ ಈ ಸರಣಿ ನಡೆಸಲು ತೀರ್ಮಾನಿಸಲಾಗಿದೆ. ಈಗಿನ ಯೋಜನೆಯ ಪ್ರಕಾರ ಟೆಸ್ಟ್ ಪಂದ್ಯಗಳು ಜುಲೈ 8, ಜುಲೈ 16 ಮತ್ತು ಜುಲೈ 24 ರಂದು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ವಿಂಡೀಸ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಾಹಕ ಜಾನಿ ಗ್ರೇವ್ ತಿಳಿಸಿದ್ದಾರೆ. ಜೂನ್ ಆರಂಭದಲ್ಲೇ ಪ್ರವಾಸ ಆರಂಭವಾದರೂ ಕೊರೊನಾ ವೈರಸ್‌ ಕಾರದಿಂದಾಗಿ ಜುಲೈ1ರ ವರೆಗೂ ವೃತ್ತಿಪರ ಕ್ರಿಕೆಟ್ ಆಡಲು ಇಂಗ್ಲೆಂಡ್‌ನಲ್ಲಿ ಅವಕಾಶವಿಲ್ಲ. ಹೀಗಾಗಿ ಜುಲೈ ತಿಂಗಳವರೆಗೂ ಕಾಯಬೇಕಾಗುತ್ತದೆ.

Story first published: Tuesday, May 26, 2020, 11:49 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X