ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್‌ ತಂಡಕ್ಕೆ ಏಕದಿನದಲ್ಲಿ 500 ರನ್‌ ಚಚ್ಚುವ ತಾಕತ್ತಿದೆಯಂತೆ!

Windies have firepower to break 500-run barrier: Shai Hope

ಲಂಡನ್‌, ಮೇ 29: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದ್ದು, ಎರಡು ಬಾರಿಯ ವೆಸ್ಟ್‌ ಇಂಡೀಸ್‌ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ 500 ರನ್‌ಗಳನ್ನು ಚಚ್ಚುವ ಯಾವುದೇ ಗುರಿ ಹೊಂದಿಲ್ಲ ಎಂದು ವಿಂಡೀಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಶೇಯ್‌ ಹೋಪ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಪ್ರಿಡಿಕ್ಷನ್‌

ಆದರೆ, ಅವಕಾಶ ಸಿಕ್ಕರೆ ಏಕದಿನ ಕ್ರಿಕೆಟ್‌ನಲ್ಲಿ 500 ರನ್‌ಗಳ ಗಡಿ ದಾಟುವ ಮೊತ್ತ ಮೊದಲ ತಂಡ ಎಂದೆನಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ನ್ಯೂಜಿಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ 421 ರನ್‌ಗಳ ಬೃಹತ್‌ ಮೊತ್ತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋಪ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

"ಒಂದು ಹಂತದಲ್ಲಿ ಇಂಥದ್ದೊಂದು ದಾಖಲೆ ಬರೆಯಲು ನಮ್ಮ ತಂಡ ಖಂಡಿತಾ ಎದುರು ನೋಡುತ್ತಿದೆ. ಈ ಸಾಧನೆ ಮಾಡಿದ ಮೊತ್ತ ಮೊದಲ ತಂಡ ಎಂದೆನಿಸಿಕೊಳ್ಳುವುದು ನಿಜಕ್ಕೂ ಅದ್ಭುತ ಸಂಗತಿ. ಜೊತೆಗೆ ಈ ಸಾಧನೆ ಮಾಡಲು ಬೇಕಿರುವ ಬಲಿಷ್ಠ ಬ್ಯಾಟಿಂಗ್‌ ವಿಭಾಗ ನಮ್ಮ ನಮ್ಮ ತಂಡದಲ್ಲಿದೆ,'' ಎಂದು ಹೋಪ್‌ ಹೇಳಿದ್ದಾರೆ.

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಕಳೆದ ಬಾರಿಯ ವಿಶ್ವಕಪ್‌ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡಕ್ಕೆ 422 ರನ್‌ಗಳ ಗುರಿ ನೀಡಿದ ವೆಸ್ಟ್‌ ಇಂಡೀಸ್‌ ತಂಡ 91 ರನ್‌ಗಳ ಜಯ ದಾಖಲಿಸಿತು. ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದು, ನಂ.8 ಹಾಗೂ ನಂ.9 ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಬಲ್ಲವರಾಗಿದ್ದಾರೆ.

 ವಿಶ್ವಕಪ್‌ ಉದ್ಘಾಟನಾ ಪಂದ್ಯದಿಂದ ದಕ್ಷಿಣ ಆಫ್ರಿಕಾದ ಈ ವೇಗಿ ಔಟ್‌! ವಿಶ್ವಕಪ್‌ ಉದ್ಘಾಟನಾ ಪಂದ್ಯದಿಂದ ದಕ್ಷಿಣ ಆಫ್ರಿಕಾದ ಈ ವೇಗಿ ಔಟ್‌!

ಅಗ್ರ ಕ್ರಮಾಂಕದಲ್ಲಿ ಶೇಯ್‌ ಹೋಪ್‌ ಹೊರತಾಗಿ, ವೈಟ್‌ ಬಾಲ್‌ ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್‌ ಗೇಲ್‌ ಮತ್ತು ಎವಿನ್‌ ಲೂಯಿಸ್‌ ಅವರಂತಹ ದೈತ್ಯರಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್‌ ಹೆಟ್ಮಾಯೆರ್‌ ಮತ್ತು ನಿಕೊಲಾಸ್‌ ಪೂರನ್‌ ಅವರಂತಹ ಯುವ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಜೊತೆಗೆ ವಿಸ್ಫೋಟಕ ಆಲ್‌ರೌಂಡರ್‌ಗಳಾದ ಆಂಡ್ರೆ ರಸೆಲ್‌, ಕಾರ್ಲೊಸ್‌ ಬ್ರಾತ್‌ವೇಟ್‌ ಹಾಗೂ ಜೇಸನ್‌ ಹೋಲ್ಡರ್‌ ಅವರನ್ನು ಹೊಂದಿರುವ ವೆಸ್ಟ್‌ ಇಂಡೀಸ್‌ ಟೂರ್ನಿಯಲ್ಲಿ ಉಳಿದೆಲ್ಲಾ ತಂಡಗಳಿಗೆ ಹೋಲಿಸಿದ ಬಲಿಷ್ಠ ಬ್ಯಾಟಿಂಗ್‌ ಹೊಂದಿದೆ.

ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!

"ನಮ್ಮ ತಂಡಕ್ಕೆ ಈ ಸಾಮರ್ಥ್ಯ ಇದೆಯೇ ಎಂದು ಕೇಳಿದ್ದಲ್ಲಿ ಖಂಡಿತವಾಗಿಯೂ ಇದೆ ಎಂಬುದೇ ನನ್ನ ಉತ್ತರವಾಗಿರಲಿದೆ. ಬೇರಾವುದೇ ತಂಡದಲ್ಲಿ ನಂ.10 ಮತ್ತು ನಂ.11 ವರೆಗೆ ಬ್ಯಾಟಿಂಗ್‌ ಇಲ್ಲ. ಆದರೆ, ನಮ್ಮ ತಂಡದಲ್ಲಿದೆ. ಹೀಗಾಗಿ 500 ರನ್‌ಗಳಿಸುವುದು ನಮ್ಮ ತಂಡದಿಂದ ಖಂಡಿತಾ ಸಾಧ್ಯ,'' ಎಂದು ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವುವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವು

ಗುರುವಾರ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿ ಆರಂಭವಾಗಲಿದ್ದು, ಆತಿಥೇಯ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ.

Story first published: Wednesday, May 29, 2019, 17:09 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X