ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಯೆಟ್ ಜೊತೆ ಒಪ್ಪಂದ ಮಾಡಿಕೊಂಡ ಮೊದಲ ಮಹಿಳಾ ಕ್ರಿಕೆಟರ್‌ ಈಕೆ

By Manjunatha
Women Cricketer Harmanpreet Kaur signs endorsment deal with CEAT

ನವದೆಹಲಿ, ಜನವರಿ 22: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಆಲ್‌ರೌಂಡರ್, ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಸಿಯೆಟ್‌ ಕಂಪೆನಿಯಿಂದ ಭಾರಿ ಮೊತ್ತದ ಜಾಹಿರಾತು ಆಫರ್ ಬಂದಿದೆ.

ಸಿಯೆಟ್‌ನ ಬ್ಯಾಟ್ ಜಾಹಿರಾತು ಒಪ್ಪಂದಕ್ಕೆ ಹರ್ಮನ್‌ಪ್ರೀತ್ ಕೌರ್ ಸಹಿ ಹಾಕಿದ್ದಾರೆ. ಈ ಮೂಲಕ ಬ್ಯಾಟ್ ಜಾಹಿರಾತು ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್‌ ಎನಿಸಿಕೊಂಡಿದ್ದಾರೆ.

ಎರಡು ವರ್ಷದ ಈ ಜಾಹಿರಾತು ಒಪ್ಪಂದದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಕೂಡಾ ಇದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರು ಇನ್ನು ಮುಂದೆ ಸಿಯೆಟ್ ಕಂಪೆನಿಯ ಜಾಹಿರಾತಿರುವ ಬ್ಯಾಟು ಹಿಡಿದೇ ಮೈದಾನಕ್ಕಿಳಿಯಲಿದ್ದಾರೆ.

2017 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಹರ್ಮನ್‌ಪ್ರೀತ್ ಕೌರ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 171 ರನ್ ಭಾರಿಸಿ ದಾಖಲೆ ನಿರ್ಮಿಸಿದ್ದರು.

ಸಿಯೆಟ್‌ ನಂತಹಾ ಅತ್ಯುತ್ತಮ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ತಂದಿದೆ ಎಂದಿರುವ ಹರ್ಮನ್‌ಪ್ರೀತ್ ಅವರು '2017 ರಲ್ಲಿ ತೋರಿದ ಉತ್ತಮ ಪ್ರದರ್ಶನವನ್ನೇ ಈ ವರ್ಷವೂ ಮುಂದುವರೆಸುವ ವಿಶ್ವಾವಿದೆ' ಎಂದಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ಲಬ್‌ಗೆ ಆಯ್ಕೆಯಾದ ಮೊದಲ ಮಹಿಳಾ ಕ್ರಿಕೆಟರ್‌ ಕೂಡಾ ಆಗಿದ್ದಾರೆ, ಅವರು ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಪರ ಆಡಿದ್ದರು.

Story first published: Monday, January 22, 2018, 17:15 [IST]
Other articles published on Jan 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X