
ಪಾಕಿಸ್ತಾನ ವಿರುದ್ಧ 1ರನ್ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿರುವ ಶ್ರೀಲಂಕಾ
ಮಹಿಳಾ ಟಿ20 ಏಷ್ಯಾಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ವನಿತೆಯರು 1ರನ್‌ಗಳ ರೋಚಕ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಮಹಿಳೆಯರು ಕೂದಲಂಚಿನಡಿಯಲ್ಲಿ ಫೈನಲ್ ಸ್ಥಾನ ಕಳೆದುಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಶ್ರೀಲಂಕಾ ನೀಡಿದ್ದ 122ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲನ್ನ ಅನುಭವಿಸಿತು.
ಅಂತಿಮ ಎಸೆತದಲ್ಲಿ ಮೂರು ರನ್ ಅಗತ್ಯವಿದ್ದಾಗ ಒಂದು ರನ್ ಕಲೆಹಾಕಿ ಮತ್ತೊಂದು ರನ್ ಓಡುವಾಗ ನಿದಾದಾರ್ ರನೌಟ್‌ಗೆ ಬಲಿಯಾದ್ರು. ಪರಿಣಾಮ ಶ್ರೀಲಂಕಾ ಒಂದು ರನ್‌ಗಳ ರೋಚಕ ಗೆಲುವನ್ನ ಸಾಧಿಸುವಲ್ಲಿ ಯಶಸ್ವಿಯಾಯಿತು.

ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವನಿತೆಯರು ಸೋಲನ್ನೇ ಕಂಡಿಲ್ಲ!
ಮಹಿಳೆಯರ ಏಷ್ಯಾ ಕಪ್ ಇದುವರೆಗೆ ಏಳು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಇದು 8 ನೇ ಆವೃತ್ತಿಯಾಗಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 2004, 2005, 2006 ಮತ್ತು 2008ರಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ನಾಲ್ಕು ಫೈನಲ್‌ಗಳಲ್ಲೂ ಭಾರತ ಗೆದ್ದಿರುವುದು ಗಮನಾರ್ಹ. ಹೀಗಾಗಿ ಹರ್ಮನ್ ಪ್ರೀತ್ ಕೌರ್ ಪಡೆ ಇತಿಹಾಸವನ್ನ ರಿಪೀಟ್ ಮಾಡುತ್ತಾ ಕಾದುನೋಡಬೇಕಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ಈ ಕೆಳಗೆ ಕಾಣಬಹುದಾಗಿದೆ. ಅದಕ್ಕೂ ಮೊದಲು ಹವಾಮಾನ್ ಮತ್ತು ಪಿಚ್ ರಿಪೋರ್ಟ್ ತಿಳಿಯಿರಿ.
ಸೂರ್ಯಕುಮಾರ್ , KL ರಾಹುಲ್ ಅಲ್ಲ, T20 ವಿಶ್ವಕಪ್‌ನಲ್ಲಿ ಹೆಚ್ಚು ರನ್ ಕಲೆಹಾಕೋದು ಇವರೇ: ಆಶಿಶ್ ನೆಹ್ರಾ ಅಭಿಪ್ರಾಯ

ಹವಾಮಾನ ಮತ್ತು ಪಿಚ್ ರಿಪೋರ್ಟ್
ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಪಂದ್ಯದ ದಿನ 29 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದ್ದು, 87 ಪರ್ಸೆಂಟ್‌ನಷ್ಟು ಹ್ಯುಮಿಡಿಟಿ ಇರಲಿದೆ. 7ಕಿ.ಮೀ/ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ. ಅಭಿಮಾನಿಗಳಿಗೆ ಖುಷಿಯ ವಿಚಾರ ಏನಂದ್ರೆ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ.
ಇನ್ನು ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟ್ಮಿಂಗ್ ಸ್ನೇಹಿಯಾಗಿದ್ದು, ಅರ್ಧ ಪಂದ್ಯದ ಬಳಿಕ ಪೇಸರ್‌ಗಳಿಗೆ ಹೆಚ್ಚು ನೆರವಾಗಬಹುದು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪಿಚ್‌ನ ಸರಾಸರಿ ಮೊದಲ ಬ್ಯಾಟಿಂಗ್ ಸ್ಕೋರ್ 140ರನ್ ಆಗಿದೆ. ಚೇಸಿಂಗ್ ಮಾಡುವ ತಂಡವು ಇಲ್ಲಿ ರೆಕಾರ್ಡ್ ಅನ್ನು ಹೊಂದಿಲ್ಲ. ಇವರು ಕೇವಲ 40 ಪರ್ಸೆಂಟ್‌ನಷ್ಟು ಗೆಲುವಿನ ರೆಕಾರ್ಡ್ ಹೊಂದಿದ್ದಾರೆ.

ಭಾರತ ಮತ್ತು ಶ್ರೀಲಂಕಾ ವನಿತೆಯರ ಸಂಭಾವ್ಯ ಪ್ಲೇಯಿಂಗ್ 11
ಭಾರತ ಮಹಿಳೆಯರು: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಕಿರಣ್ ನವಗಿರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ಸ್ನೇಹ ರಾಣಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಶ್ರೀಲಂಕಾ ಮಹಿಳೆಯರು: ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ(ವಿಕೆಟ್ ಕೀಪರ್), ಮಲ್ಶಾ ಶೆಹಾನಿ, ಓಷದಿ ರಣಸಿಂಘೆ, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರಿಯಾ
ತ್ರಿಕೋನ ಟಿ20 ಸರಣಿ: ಟ್ರೋಫಿ ಗೆದ್ದ ಬಳಿಕ 'ಧೋನಿ ಸ್ಟ್ರೈಲ್' ಕಾಪಿ ಮಾಡಿದ ಬಾಬರ್ ಅಜಮ್

ಫ್ಯಾಂಟೆಸಿ ಡ್ರೀಂ ಟೀಂ 1
ನಾಯಕಿ- ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್
ಉಪನಾಯಕಿ - ಸ್ನೇಹ ರಾಣಾ, ಶಫಾಲಿ ವರ್ಮಾ
ವಿಕೆಟ್ ಕೀಪರ್ - ಅನುಷ್ಕಾ ಸಂಜೀವನಿ
ಬ್ಯಾಟರ್ಸ್ - ಶಫಾಲಿ ವರ್ಮಾ (ಉಪನಾಯಕಿ), ಜೆಮಿಮಾ ರಾಡ್ರಿಗಸ್, ಹರ್ಷಿತಾ ಮಾದವಿ, ಸ್ಮೃತಿ ಮಂಧಾನ
ಆಲ್‌ರೌಂಡರ್‌ಗಳು - ದೀಪ್ತಿ ಶರ್ಮಾ (ನಾಯಕಿ), ಕವಿಶಾ ದಿಲ್ಹಾರಿ, ಚಾಮರಿ ಅಟಪಟ್ಟು

ಫ್ಯಾಂಟೆಸಿ ಡ್ರೀಂ ಟೀಂ 2
ಕೀಪರ್ - ಅನುಷ್ಕಾ ಸಂಜೀವನಿ
ಬ್ಯಾಟರ್ಸ್ - ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ (ನಾಯಕಿ), ಹರ್ಷಿತಾ ಮಾದವಿ
ಆಲ್ ರೌಂಡರ್‌ಗಳು - ದೀಪ್ತಿ ಶರ್ಮಾ, ಕವಿಶಾ ದಿಲ್ಹಾರಿ, ಚಾಮರಿ ಅಟಪಟ್ಟು, ಪೂಜಾ ವಸ್ತ್ರಕರ್
ಬೌಲರ್‌ಗಳು - ಇನೋಕಾ ರಣವೀರ, ರಾಜೇಶ್ವರಿ ಗಾಯಕ್ವಾಡ್, ಸ್ನೇಹ ರಾಣಾ (ಉಪನಾಯಕಿ)
ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/ಡ್ರೀಂ ಟೀಂ ಸಂಯೋಜನೆಯು 1-4-3-3 ಆಗಿದೆ.