ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಗೆ ಪೆಟ್ಟು!

World Cup 2019: Australias Usman Khawaja suffers injury

ಸೌತ್‌ಹ್ಯಾಂಪ್ಟನ್‌, ಮೇ 27: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರವೇ ಬಾಕಿ ಇದ್ದು, ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ ಗಾಯದ ಸಮಸ್ಯೆಯ ಆಘಾತಕ್ಕೊಳಗಾಗಿದೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಶ್ರೀಲಂಕಾ ವಿರುದ್ಧ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಮಂಡಿ ನೋವಿನ ಸಮಸ್ಯೆಗೆ ತುತ್ತಾದರು. ಕ್ಷೇತ್ರ ರಕ್ಷಣೆ ವೇಳೆ ಅವರ ಎಡ ಮಂಡಿಗೆ ಚೆಂಡು ಬಲವಾಗಿ ಬಡಿದರಿಂದ ಮೈದಾನದಲ್ಲಿ ಕೆಲ ಕಾಲ ನೆಲಕ್ಕುರುಳಿದ್ದ ಖವಾಜ ಅವರನ್ನು, ತಂಡದ ವೈದ್ಯಾಧಿಕಾರಿ ಹೊರಗೆ ಕರೆದೊಯ್ದರು.

 ಸನತ್‌ ಜಯಸೂರ್ಯ ಸಾವಿನ ಸುಳ್ಳು ಸುದ್ದಿ ಕೇಳಿ ಬೆಚ್ಚಿದ ರವಿಚಂದ್ರನ್‌ ಅಶ್ವಿನ್‌! ಸನತ್‌ ಜಯಸೂರ್ಯ ಸಾವಿನ ಸುಳ್ಳು ಸುದ್ದಿ ಕೇಳಿ ಬೆಚ್ಚಿದ ರವಿಚಂದ್ರನ್‌ ಅಶ್ವಿನ್‌!

ಕುಂಟುತ್ತಾ ಕುಂಟುತ್ತಾ ಡ್ರೆಸಿಂಗ್‌ ರೂಮ್‌ಗೆ ತೆರಳಿದ್ದ ಖವಾಜ ಮರಳಿ ಕ್ಷೇತ್ರ ರಕ್ಷಣೆಗೆ ಇಳಿಯಲಿಲ್ಲ. ಬಳಿಕ ವೈದ್ಯರಿಂದ ಚಿಕಿತ್ಸೆ ಪಡೆದು ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ ಎಡಗೈ ಬ್ಯಾಟ್ಸ್‌ಮನ್‌ 105 ಎಸೆತಗಳಲ್ಲಿ 89 ರನ್‌ಗಳನ್ನು ದಾಖಲಿಸಿ ತಂಡಕ್ಕೆ 5 ವಿಕೆಟ್‌ಗಳ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆದರೆ, ಅವರ ಗಾಯದ ಸ್ವರೂಪ ಎಷ್ಟು ಗಂಭೀರವಾಗಿದೆ ಎಂಬುದನ್ನು ಈವರೆಗೆ ತಂಡ ಬಹಿರಂಗ ಪಡಿಸಿಲ್ಲ.

ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದ ಲಯಾನ್‌!ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದ ಲಯಾನ್‌!

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಅನಧಿಕೃತ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ವಿಂಡೀಸ್‌ನ ವೇಗಿ ಆಂಡ್ರೆ ರಸೆಲ್‌ ಎಸೆದ ಬೌನ್ಸರ್‌ನಲ್ಲಿ ಉಸ್ಮಾನ್‌ ಖವಾಜ ಎಡ ದವಡೆಗೆ ಭಾರಿ ಪೆಟ್ಟು ತಿಂದಿದ್ದರು. ಬಳಿಕ ವೈದ್ಯರು ತಪಾಸಣೆ ನಡೆಸಿ ಸ್ಕ್ಯಾನಿಂಗ್‌ ಬಳಿಕ ಗಂಭೀರ ಸ್ವರೂಪದ ಗಾಯವಲ್ಲ ಎಂದು ಸ್ಪಷ್ಟವಾದ ಬಳಿಕವಷ್ಟೇ ಅಭ್ಯಾಸಕ್ಕೆ ಮರಳಿದ್ದರು. ಇದೀಗ ಮತ್ತೊಮ್ಮೆ ಗಾಯದ ಸಮಸ್ಯೆ ಎದುರಿಸಿದ್ದಾರೆ.

ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!

ಆಸ್ಟ್ರೇಲಿಯಾ ತಂಡ ಜೂನ್‌ 1ರಂದು ಕ್ರಿಕೆಟ್‌ ಕೂಸು ಅಫಘಾನಿಸ್ತಾನ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದ್ದು, ಖವಾಜ ಈ ಪಂದ್ಯದಲ್ಲಿ ಆಡಲು ಲಭ್ಯವಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Story first published: Monday, May 27, 2019, 22:39 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X