ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಅಂಪೈರ್‌ನ ನೆಲಕ್ಕೆಡವಿದ ಜೇಸನ್ ರಾಯ್-ವೈರಲ್ ವಿಡಿಯೋ!

World cup 2019: Jason Roy smashed an umpire to the ground

ಕಾರ್ಡಿಫ್, ಜೂನ್ 10: ಬಾಂಗ್ಲಾದೇಶ ವಿರುದ್ಧ 121 ಎಸೆತಗಳಿಗೆ ಭರ್ಜರಿ 153 ರನ್ ಚಚ್ಚಿದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ ಪಂದ್ಯದಲ್ಲಿ ಹೀರೋ ಆಗಿ ಮುಂಚಿದರು. ಇದೇ ಪಂದ್ಯದಲ್ಲಿ ಅಂಪೈರ್‌ಗೆ ಡಿಕ್ಕಿ ಹೊಡೆದು ರಾಯ್ ಪ್ರೇಕ್ಷಕರು ಮೂಗಿಗೆ ಬೆರಳೇರಿಸುವಂತೆಯೂ ಮಾಡಿದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

27ನೇ ಓವರ್‌ನಲ್ಲಿ ಅಂಪೈರ್ ನೆಲಕ್ಕುರುಳಿದ ದೃಶ್ಯ ಭಾನುವಾರ (ಜೂನ್ 8) ಕಾರ್ಡಿಫ್‌ನಲ್ಲಿ ನಡೆದ ಇಂಗ್ಲೆಂಡ್ vs ಬಾಂಗ್ಲಾ ಪಂದ್ಯದಲ್ಲಿ ಕಾಣ ಸಿಕ್ಕಿತು. ಶತಕ ಪೂರೈಸಲು ರನ್ ಗಳಿಸುವಾಗ ಜೇಸನ್ ರಾಯ್ ವೆಸ್ಟ್ ಇಂಡೀಸ್ ಅಂಪೈರ್ ಜೋಯೆಲ್ ವಿಲ್ಸನ್‌ಗೆ ಡಿಕ್ಕಿ ಹೊಡೆದರು. ವಿಲ್ಸನ್ ನೆಲಕ್ಕೆ ಬಿದ್ದರು.

ಶತಕದ ಸಂಭ್ರಮ ಕಾಣಿಸಿಕೊಳ್ಳಬೇಕಿದ್ದ ಜೇಸನ್ ರಾಯ್‌ ಮುಖದಲ್ಲಿ ಅರೆ ಕ್ಷಣ ದಿಗಿಲು ಆವರಿಸಿತ್ತು. ಆದರೆ ಬಿದ್ದಲ್ಲಿಂದ ಎದ್ದ ಅಂಪೈರ್ ವಿಲ್ಸನ್ ತನಗೇನೂ ಆಗಿಲ್ಲವೆಂದು ನಗು ಚೆಲ್ಲಿದಾಗ ರಾಯ್ ನಿಟ್ಟುಸಿರುಬಿಟ್ಟರು. ವಿಲ್ಸನ್ ನೆರವಿಗೆ ವೈದ್ಯಾಧಿಕಾರಿಗಳು ಬಂದಿದ್ದರಾದರೂ, ವಿಲ್ಸನ್, ತನಗೆ ಏನಾಗಿಲ್ಲ. ಮುಂದುವರೆಯುತ್ತೇನೆ ಅಂದಾಗ ಮೈದಾನದಿಂದ ಹೊರ ನಡೆದರು (ಪೂರ್ತಿ ವಿಡಿಯೋ ಮೇಲಿನ ಟ್ವೀಟ್‌ನಲ್ಲಿದೆ).

ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!

ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 6 ವಿಕಟ್ ನಷ್ಟದಲ್ಲಿ 386 ರನ್ ಬಾರಿಸಿತ್ತು. ಇದು ಈ ವಿಶ್ವಕಪ್‌ನಲ್ಲಿ ತಂಡವೊಂದು ಬಾರಿಸಿದ ದೊಡ್ಡ ಮೊತ್ತ. ಗುರಿ ಬೆನ್ನಟ್ಟಿದ ಬಾಂಗ್ಲಾ 48.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 280 ರನ್ ಪೇರಿಸುವುದರೊಂದಿಗೆ 106 ರನ್‌ಗಳಿಂದ ಶರಣಾಯ್ತು.

Story first published: Sunday, June 9, 2019, 9:14 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X