ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಸ್ಟಾರ್‌ ಸ್ಪೋರ್ಟ್ಸ್‌ಗೆ 15 ಕೋ.ರೂ. ನಷ್ಟ?!

World Cup 2019: Star Sports set to lose ₹15 crore because of India’s exit

ನವದೆಹಲಿ, ಜುಲೈ 14: ಈ ಬಾರಿಯ ಕ್ರಿಕೆಟ್‌ ವಿಶ್ವಕಪ್ ನಿಂದ ಭಾರತ ಹೊರ ನಡೆದಿದ್ದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಷ್ಟೇ ಅಲ್ಲ, ಭಾರತದ ಅಧಿಕೃತ ಕ್ರೀಡಾ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌ಗೂ ತೊಂದರೆ ನೀಡಿದೆ. ಭಾರತ ಟೂರ್ನಿಯಿಂದ ಹೊರ ಬಿದ್ದಿರುವುದರಿಂದ ಸ್ಟಾರ್‌ ಸ್ಪೋರ್ಟ್ಸ್ ಸುಮಾರು 10-15 ಕೋ.ರೂ.ಗಳನ್ನು ಕಳೆದುಕೊಳ್ಳಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಜುಲೈ 10ರಂದು ಮುಕ್ತಾಯಗೊಂಡ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 18 ರನ್‌ನಿಂದ ಸೋತು ಫೈನಲ್ ಅವಕಾಶವನ್ನು ಕಳೆದುಕೊಂಡಿತ್ತು. ಟೀಮ್ ಇಂಡಿಯಾದ ಈ ಸೋಲು ಸ್ಟಾರ್‌ ಸ್ಪೋರ್ಟ್ ನ ಜಾಹೀರಾತು ಆದಾಯಕ್ಕೆ ಕತ್ತರಿ ಹಾಕಿದೆ.

ಇಂಗ್ಲೆಂಡ್ vs ನ್ಯೂಜಿಲೆಂಡ್, ಫೈನಲ್, ಜುಲೈ 14, Live ಸ್ಕೋರ್‌ಕಾರ್ಡ್

1
43691

ಮಾಧ್ಯಮ ಖರೀದಿದಾರರ ಅಂದಾಜಿನ ಪ್ರಕಾರ, ಭಾರತವು ಫೈನಲ್ಸ್ ಆಡಿದ್ದರೆ ಕೊನೆಯ ಕ್ಷಣದ ಜಾಹೀರಾತುಗಳನ್ನು ಪ್ರತೀ 10 ಸೆಕೆಂಡಿಗೆ 25-30 ಲಕ್ಷ ರೂ.ಗೆ ಮಾರಾಟ ಮಾಡಲು ಯೋಜಿಸಲಾಗಿತ್ತು. ಆದರೆ ಸದ್ಯ ಫೈನಲ್‌ ಪಂದ್ಯದ ವೇಳೆಯ ಕೊನೇ ಕ್ಷಣದ ಜಾಹೀರಾತುಗಳು 15-17 ಲಕ್ಷ ರೂ.ಗೆ ಮಾರಾಟವಾಗುವುದರಲ್ಲಿದೆ.

ಎಬಿ ಡಿವಿಲಿಯರ್ಸ್ ಬೆನ್ನ ಹಿಂದೆ ನಿಂತ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್!ಎಬಿ ಡಿವಿಲಿಯರ್ಸ್ ಬೆನ್ನ ಹಿಂದೆ ನಿಂತ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್!

ಸ್ವತಂತ್ರ ಮಾಧ್ಯಮ ಸಲಹೆಗಾರ್ತಿ ಹರ್ಷ ಜೋಶಿ ಈ ಬಗ್ಗೆ ಮಾತನಾಡುತ್ತ, 'ವಿಶ್ವಕಪ್‌ನಿಂದ ಭಾರತ ಹೊರ ಬೀಳುವುದರೊಂದಿಗೆ ಕೊನೇ ನಿಮಿಷಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಅಕವಾಶವನ್ನೇ ಕಳೆದುಕೊಂಡಿದ್ದೇವೆ' ಎಂದಿದ್ದಾರೆ. 2019ರ ವಿಶ್ವಕಪ್‌ ಫೈನಲ್‌ಗೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆಯ್ಕೆಯಾಗಿದೆ.

Story first published: Sunday, July 14, 2019, 15:44 [IST]
Other articles published on Jul 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X